ನವದೆಹಲಿ: ಯುಎಸ್ಎ-ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಟಿ20 ವಿಶ್ವಕಪ್ ಸಮಾರೋಪಗೊಂಡು ಮೂರು ವಾರಗಳಾಗುತ್ತ ಬಂದರೂ ಯಾಕೋ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಅಸಮಾಧಾನ ಹೊರಹಾಕುವುದನ್ನು ಸದ್ಯಕ್ಕೆ ನಿಲ್ಲಿಸುವಂತೆ ಕಾಣುತ್ತಿಲ್ಲ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಮಿಚೆಲ್ ಸ್ಟಾರ್ಕ್ ಈ ಬಗ್ಗೆ ಮಾತನಾಡಿದ್ದು, ಐಸಿಸಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟಿ20 ವಿಶ್ವಕಪ್ ವೇಳಾಪಟ್ಟಿ ಕುರಿತು ಕಿಡಿಕಾರಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಸ್ಟಾರ್ಕ್, ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಆಡುವುದು ಅಷ್ಟು ಸುಲಭದ ಮಾತಲ್ಲ ಎಂದು ನಾನು ಭಾವಿಸುತ್ತೇನೆ. ಸೇಂಟ್ ವಿನ್ಸೆಂಟ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಷನ್ ಅಗರ್ ಚೆನ್ನಾಗಿ ಬೌಲಿಂಗ್ ಮಾಡಿದರು. ಅವರ ಆಟದ ಬಗ್ಗೆ ನಾನೇನೂ ಹೆಚ್ಚಿಗೇ ಹೇಳುವುದಿಲ್ಲ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಅಜೇಯವಾಗಬೇಕೆಂದರೆ ಈತನನ್ನು ಮೊದಲು…; ಭಾರತದ ನೂತನ ಕೋಚ್ಗೆ ಸುನಿಲ್ ಗವಾಸ್ಕರ್ ಸಲಹೆ
ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಯಲ್ಲಿ ಇರುವುದಿಲ್ಲ ಎಂಬುದಕ್ಕೆ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳೇ ಉತ್ತಮ ಸಾಕ್ಷಿಯಾಗಿದೆ. ನಾವು ಬೇರೆ ತಂಡಗಳಿಗಿಂತ ಚೆನ್ನಾಗಿ ಆಡಿದ್ದೆವು ಮತ್ತು ಫೇವರೆಟ್ ತಂಡಗಳಲ್ಲಿ ಗುರುತಿಸಿಕೊಂಡಿದ್ದೆವು. ಇದ್ದಕ್ಕಿದ್ದಂತೆ ನಮ್ಮನ್ನು ಬೇರೆ ಗುಂಪಿಗೆ ಹಾಕಲಾಯಿತು ವೆಸ್ಟ್ ಇಂಡೀಸ್ನಲ್ಲಿ ನಮಗೆ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಇದಲ್ಲದೆ ನಮ್ಮ ಪ್ರಯಾಣವು ತಡವಾಗಿ ಆಗುತ್ತಿತ್ತು.
ನನ್ನ ಪ್ರಕಾರ ವೇಳಾಪಟ್ಟಿ ತಯಾರಿಕೆ ಎಡವಟ್ಟಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ವೆಸ್ಟ್ಇಂಡೀಸ್ನಲ್ಲಿ ಪ್ರಯಾಣಿಸುವುದು ಅಷ್ಟು ಸುಲಭದ ಮಾತಲ್ಲ. ಲೀಗ್ ಹಂತಕ್ಕಿಂತ ಸೂಪರ್ 08ನಲ್ಲಿ ಆಯೋಜನೆಗೊಂಡಿದ್ದ ಪಂದ್ಯಗಳು ನಮಗೆ ಹೆಚ್ಚು ಕಷ್ಟಕರವಾಯಿತು ಎಂದು ಮಿಚೆಲ್ ಸ್ಟಾರ್ಕ್ ಪರೋಕ್ಷವಾಗಿ ಟಿ20 ವಿಶ್ವಕಪ್ ವೇಳಾಪಟ್ಟಿ ಕುರಿತು ಕಿಡಿಕಾರಿದ್ದಾರೆ.