ಮೂತ್ರಕೋಶ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಯೇನೆಪೊಯ ಆಸ್ಪತ್ರೆ ವೈದ್ಯರ ಸಾಧನೆ : ರೋಬೋಟಿಕ್ ತಂತ್ರಜ್ಞಾನದ ಸಮರ್ಥ ಬಳಕೆ

New Project (28)
Published on

ಉಳ್ಳಾಲ: ಮೂತ್ರಕೋಶದ ಕಾರ್ಸಿನೋಮದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ದೇರಳಕಟ್ಟೆ ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೂತ್ರಶಾಸ್ತ್ರಜ್ಞರ ತಂಡ ಆಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನ ಬಳಸಿ ಇಂಟ್ರಾಕಾರ್ಪೋರಿಯಲ್ ನಿಯೋಬ್ಲಾಡರ್ ಪುನನಿರ್ಮಾಣದೊಂದಿಗೆ ರಾಡಿಕಲ್ ಸಿಸ್ಟಕ್ಟಮಿಯನ್ನು ಯಶಸ್ವಿಯಾಗಿ ನಡೆಸಿದೆ.

ಈ ಹೊಸ ವಿಧಾನ ಆಧುನಿಕ ಔಷಧದ ಮೇಲೆ ನಂಬಿಕೆ ಪ್ರದರ್ಶಿಸುವುದಲ್ಲದೆ, ಕಾಯಿಲೆ ವಿರುದ್ಧ ಹೋರಾಡುತ್ತಿರುವ ರೋಗಿಗಳಿಗೆ ಜೀವನದ ಮೇಲೆ ಹೊಸ ಭರವಸೆ ನೀಡಿದೆ. ಈ ಕಾಯಿಲೆ ಮೂತ್ರಕೋಶದ ಜೀವಕೋಶಗಳಲ್ಲಿ ಆರಂಭವಾಗುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಈ ಚಿಕಿತ್ಸೆಯು ಹೆಚ್ಚಾಗಿ ರಾಡಿಕಲ್ ಸಿಸ್ಟಕ್ಟಮಿ, ಮೂತ್ರಕೋಶ ಶಸ್ತ್ರಚಿಕಿತ್ಸೆ ಒಳಗೊಂಡಿರುತ್ತದೆ. ನಂತರ ದೇಹವು ಹೊಟ್ಟೆಗೆ ಜೋಡಿಸಲಾದ ಮೂತ್ರ ಸಂಗ್ರಹ ಚೀಲದೊಂದಿಗೆ ಇಲಿಯಲ್ ವಾಹಕದ ರೂಪದಲ್ಲಿ ಮೂತ್ರವನ್ನು ಸಂಗ್ರಹಿಸಲು ಮತ್ತು ತೆಗೆದುಹಾಕಲು ಪರ್ಯಾಯ ಮಾರ್ಗ ಕಲ್ಪಿಸುತ್ತದೆ.

ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಂಡ ಈ ಕಾರ್ಯವಿಧಾನಕ್ಕಾಗಿ ರೊಬೋಟಿಕ್ ಸಹಾಯವನ್ನು ಬಳಸುವ ಮೂಲಕ ಒಂದು ಹೊಸ ವಿಧಾನ ತೆರೆದುಕೊಂಡಿದೆ. 3ಡಿ ಕ್ಯಾಮರಾ ಒಳಗೊಂಡಿರುವ ರೋಬೋಟಿಕ್ ಶಸ್ತ್ರಚಿಕಿತ್ಸೆ ಸಣ್ಣ ಉಪಕರಣಗಳ ಬಳಕೆ ಮತ್ತು ಶಸ್ತ್ರಚಿಕಿತ್ಸಕರು ಕನ್ಸೋಲ್‌ನಿಂದ ನಿಯಂತ್ರಿಸಲ್ಪಡುವ ಹೈ-ಡೆಫಿನಿಷನ್ ಅಪ್ರತಿಮ ನಿಖರತೆ ಮತ್ತು ನಿಯಂತ್ರಣಕ್ಕೆ ಒಳಪಟ್ಟಿದೆ. ಈ ಚಿಕಿತ್ಸೆಯಿಂದ ಕಡಿಮೆ ನೋವು ಮತ್ತು ರೋಗಿಗಳಿಗೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕರುಳಿನಿಂದ ನಿಯೋಬ್ಲಾಡರ್ ರಚನೆ: ಶಸ್ತ್ರಚಿಕಿತ್ಸಕರು ಕ್ಯಾನ್ಸರ್ ಮೂತ್ರಕೋಶ ತೆಗೆದುಹಾಕಿ ರಾಡಿಕಲ್ ಸಿಸ್ಟಕ್ಟಮಿಯನ್ನು ಮಾಡಿದ ಬಳಿಕ ರೋಗಿಯ ಕರುಳಿನ ಒಂದು ಭಾಗವನ್ನು ಬಳಸಿಕೊಂಡು ನಿಯೋಬ್ಲಾಡರ್ ರಚಿಸಿದರು. ಈ ನಿಯೋಬ್ಲಾಡರ್‌ನ್ನು ಇಂಟ್ರಾಕಾರ್ಪೋರಿಕಲ್ ಆಗಿ ನಿರ್ಮಿಸಲಾಗಿದೆ. ಸಂಪೂರ್ಣ ದೇಹದೊಳಗೆ ಶಸ್ತ್ರಚಿಕಿತ್ಸೆಯ ಆಕ್ರಮಣಶೀಲತೆ ಮತ್ತಷ್ಟು ಕಡಿಮೆ ಮಾಡುವ ಮತ್ತು ಚೇತರಿಕೆ ಹೆಚ್ಚಿಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಅಸಾಧಾರಣವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದು ಶಸ್ತ್ರಚಿಕಿತ್ಸಾ ತಂಡದ ಕೌಶಲ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಪ್ರಯೋಜನಗಳಿಗೆ ಸಾಕ್ಷಿ. ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಈ ಪ್ರಕರಣವು ರೋಗಿಗಳಿಗೆ ಉತ್ತಮ ಫಲಿತಾಂಶ ಹೇಗೆ ನೀಡಬಹುದು ಎಂಬುದಕ್ಕೆ ಉಜ್ವಲ ಉದಾಹರಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net