ಸಂಘಟಿತ ಹೋರಾಟದಿಂದ ಯಶಸ್ಸು

tailor
ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
Published on

ಕೋಟ: ಸಂಘಗಳ ಶ್ರೇಯಸ್ಸಿಗೆ ಒಗ್ಗಟ್ಟು ಅಗತ್ಯ. ಈ ನಿಟ್ಟಿನಲ್ಲಿ ಸಂಘಟಿತ ಹೋರಾಟದ ಮೂಲಕ ಯಶಸ್ಸು ಸಾಧ್ಯ ಎಂದು ಕೋಟ ಅಮೃತೇಶ್ವರಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ.ಕುಂದರ್ ಅಭಿಪ್ರಾಯಪಟ್ಟರು.

ಭಾನುವಾರ ಕೋಟ ಸಿ.ಎ. ಬ್ಯಾಂಕ್‌ನ ಬಿ.ಸಿ.ಹೊಳ್ಳ ಸಭಾಭವನದಲ್ಲಿ ಮಂಗಳೂರು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್‌ನ ಕೋಟ ಮತ್ತು ಸಾಲಿಗ್ರಾಮ ವಲಯ ಸಮಿತಿ ಸಾದರಪಡಿಸುವ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆ.ಎಸ್.ಟಿ.ಎ ಕೋಟ, ಸಾಲಿಗ್ರಾಮ ವಲಯ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಟೈಲರ್ ವೃತ್ತಿ ಕಾಯಕ ಕುಟುಂಬದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ನೀಡಲಾಯಿತು. ಮುಖ್ಯ ಅಭ್ಯಾಗತರಾಗಿ ತೆಕ್ಕಟ್ಟೆ ಉದ್ಯಮಿ ಅನಂತ ನಾಯಕ್, ಕೆ.ಎಸ್.ಟಿ.ಎ ಮಂಗಳೂರು ರಾಜ್ಯ ಸಮಿತಿ ಕೋಶಾಧಿಕಾರಿ ಕೆ.ರಾಮಚಂದ್ರ, ಉಡುಪಿ ಜಿಲ್ಲಾ ಕೆ.ಎಸ್.ಟಿ.ಎ. ಸಮಿತಿ ಅಧ್ಯಕ್ಷ ಗುರುರಾಜ್ ಎಂ.ಶೆಟ್ಟಿ, ಉಪಾಧ್ಯಕ್ಷೆ ಗೌರಿ ವಿ.ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್, ಉದ್ಯಮಿ ಮಾಧವ ಪೈ ಸಾಲಿಗ್ರಾಮ, ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಜತ್ತನ್, ಕೋಟ ಸಾಲಿಗ್ರಾಮ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ ಪೂಜಾರಿ, ಕೋಶಾಧಿಕಾರಿ ರಮೇಶ ಪೂಜಾರಿ ಉಪಸ್ಥಿತರಿದ್ದರು. ಬ್ರಹ್ಮಾವರ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅವಿನಾಶ್ ಮರಕಾಲ ಸ್ವಾಗತಿಸಿದರು. ಕೆ.ಎಸ್.ಟಿ.ಎ. ಬ್ರಹ್ಮಾವರ ಕ್ಷೇತ್ರ ಸಮಿತಿ ಅಧ್ಯಕ್ಷ ಗಣೇಶ್ ಪೂಜಾರಿ ಪ್ರಾಸ್ತಾವನೆ ಸಲ್ಲಿಸಿದರು. ಶಿಕ್ಷಕ ಸಂತೋಷ್ ಕುಮಾರ್ ಕೋಟ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net