ಅಳ್ವೆಗದ್ದೆ ದೇವಸ್ಥಾನ ಗಣಪತಿ ಮೂರ್ತಿ ರಚನೆಗೆ ಮನವಿ

Published on

ಬೈಂದೂರು: ಶಿರೂರಿನ ಅಳ್ವೆಗದ್ದೆ ಗ್ರಾಮಸ್ಥರ ಮನವಿ ಮೇರೆಗೆ ರಾಜ್ಯದ ಖ್ಯಾತ ಮೂರ್ತಿ ರಚನೆಕಾರ ಇಡಗುಂಜಿ ಗಣೇಶ್ ಎಲ್.ಭಟ್ ಶುಕ್ರವಾರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಳದ ಪುನಃ ನಿರ್ವಾಣ ಕಾಮಗಾರಿ ಪರಿಶೀಲಿಸಿದರು. ಅಳ್ವೆಗದ್ದೆ ದೇವಸ್ಥಾನದ ಗಣಪತಿ ಮೂರ್ತಿ ಶಿಲ್ಪವನ್ನು ರಚಿಸಿಕೊಡುವಂತೆ ಊರಿನ ಸಮಸ್ತರು ಮನವಿ ಮಾಡಿದರು.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಮೂಲತಃ ಇಡಗುಂಜಿ ಮಹಾಗಣಪತಿಯ ಅರ್ಚಕರ ವಂಶಸ್ಥರು. ಹತ್ತು ವರ್ಷಗಳ ಕಾಲ ಮೂರ್ತಿ ಶಿಲ್ಪಶಾಸವನ್ನು ಆಳವಾಗಿ ಅಧ್ಯಯನ ವಾಡಿದ್ದು, ನಾಲ್ಕು ದಶಕಗಳಿಂದ ವೃತ್ತಿ ನಿರತ ಅನುಭವಿಯಾಗಿದ್ದಾರೆ. ಜಗತ್ತಿನಾದ್ಯಂತ ತರಬೇತಿ, ಪ್ರಾತ್ಯಕ್ಷಿಕೆ, ಹಾಗೂ ಶಿಲ್ಪಶಾಸದ ತರಗತಿಗಳಲ್ಲಿ ಪಾಲ್ಗೊಂಡಿದ್ದು, ಅಪಾರ ಶಿಷ್ಯರನ್ನು ಹೊಂದ್ದಿದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net