

ಮೂಡುಬಿದಿರೆ: ಸಮಾಜದಲ್ಲಿ ಸಾಧಕರಾಗಲು ಹಲವು ದಿನಗಳ ನಿದ್ದೆ ಹಸಿವು ಸಮಯ ಇತ್ಯಾದಿಗಳ ಪರಿವೆಯೇ ಇಲ್ಲದೆ ಪರಿಶ್ರಮ ಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆಗಳಿದ್ದು, ಹೊರತೆಗೆಯಲು ಶಿಬಿರಗಳು ಅನುಕೂಲಕರವಾಗುತ್ತದೆ ಎಂದು ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಹೇಳಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ನಡೆದ ‘ಜ್ಞಾನ ರಶ್ಮಿ’ ನಾಲ್ಕು ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ, ಮಕ್ಕಳು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು.
ಎಕ್ಸಲೆಂಟ್ ಸಿಬಿಎಸ್‌ಇ ಸಂಸ್ಥೆ ಪ್ರಾಂಶುಪಾಲ ಸುರೇಶ್, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಉಪಸ್ಥಿತರಿದ್ದರು. ಸುಧೀಕ್ಷಾ ಸ್ವಾಗತಿಸಿದರು. ಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ ಅತಿಥಿಗಳ ಪರಿಚಯಿಸಿದರು. ಲಕ್ಷ್ಮೀ ನಿರೂಪಿಸಿದರು.