ಕುಂದಾಪುರ: ನಮ್ಮಲ್ಲಿರುವ ಪ್ರತಿಭೆ ಹಾಗೂ ಅವಕಾಶಗಳನ್ನು ಗುರುತಿಸಿ ಅವುಗಳನ್ನು ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಹೆತ್ತವರ ಶ್ರಮವನ್ನು ಸಾಕಾರಗೊಳಿಸುವಂತಹ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಬೇಕು ಎಂದು ಗಂಗೊಳ್ಳಿ ಚರ್ಚಿನ ಧರ್ಮಗುರು ತೋಮಸ್ ರೋಶನ್ ಡಿಸೋಜ ಹೇಳಿದರು.
ಕ್ರೈಸ್ತ ಜುಬಿಲಿ ವರ್ಷದ ಕಾರ್ಯಕ್ರಮ ಅಂಗವಾಗಿ ಚರ್ಚಿನ ಶಿಕ್ಷಣ ಆಯೋಗದ ನೇತೃತ್ವದಲ್ಲಿ ಭಾನುವಾರ ಗಂಗೊಳ್ಳಿಯ ಕೊಸೆಸಾಂವ್ ವಾತೆಯ ಚರ್ಚ್‌ನಲ್ಲಿ ‘ವಿದ್ಯಾರ್ಥಿಗಳ ಜುಬಿಲಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತ ವಾಲ್ಟರ್ ಡಿಸೋಜ ನಂದಳಿಕೆ ಶುಭ ಹಾರೈಸಿದರು. ತೋಮಸ್ ರೋಶನ್ ಡಿಸೋಜ ನೇತೃತ್ವದಲ್ಲಿ ಬಲಿಪೂಜೆ ಅರ್ಪಿಸಲಾಯಿತು, ವಿದ್ಯಾರ್ಥಿಗಳಾದ ಅಮಿಷಾ ನಾರ್ಂಡಿಸ್, ರೀವಾ ಡಿಅಲ್ಮೇಡಾ, ಸಿಂಡ್ರೆಲಾ ರೆಬೆರೊ, ಟ್ರಿನಿಟಾ ರೆಬೆಲ್ಲೊ, ವಿನ್ಸಿಟಾ ರೆಬೆಲ್ಲೊ, ವಾರಿಯೊ ಒಲಿವೇರಾ, ಕಾಲಿಸ್ಟಾ ರೆಬೆರೊ, ರಿಶೋನ್ ಸುವಾರಿಸ್ ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಎಲ್ರಾಯ್ ಕಿರಣ್ ಕ್ರಾಸ್ಟೊ ಅತಿಥಿಗಳನ್ನು ಪರಿಚಯಿಸಿದರು. ಚರ್ಚಿನ ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್ ವಂದಿಸಿದರು. ಶಿಕ್ಷಣ ಆಯೋಗದ ಸಂಚಾಲಕಿ ಆನ್ನಿ ಕ್ರಾಸ್ಟೊ ಸಂಯೋಜಿಸಿದರು. ಓವಿನ್ ರೆಬೆಲ್ಲೊ, ರಿಚ್ಚರ್ಡ್ ಕಾರ್ಡಿನ್, ಜೆನ್ನಿ ಬುತ್ತೆಲ್ಲೊ, ಪ್ರೀತಿ ನಾರ್ಂಡಿಸ್, ಫೆಲಿಕ್ಸ್ ರೆಬೆರೊ, ವಿನ್ಸಿಟಾ ಲೋಬೊ ಹಾಗೂ ಶಿಕ್ಷಣ ಆಯೋಗದ ಸದಸ್ಯರು ಸಹಕರಿಸಿದರು.