ಕುಂದಾಪುರ: ಕುಂದಾಪುರದ ಹಿರಿಯ ನಾಗರಿಕರ ವೇದಿಕೆ ಮಹಾಸಭೆ ಶ್ರೀ ಕುಂದೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶನಿವಾರ ನಡೆಯಿತು. ವೇದಿಕೆ ಅಧ್ಯಕ್ಷ ಸಿ.ಎಚ್.ಜಗನ್ನಾಥ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಹೆಗ್ಡೆ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಮೇರ್ಡಿ ವೀರಣ್ಣ ಶೆಟ್ಟಿ ಉಪಸ್ಥಿತರಿದ್ದರು.
ವಾಸುದೇವ ಯಡಿಯಾಳ, ವಿಶ್ವನಾಥ ಹೆಗ್ಡೆ ಮತ್ತು ಎಂ.ವೀರಣ್ಣ ಶೆಟ್ಟಿ ಹಾಗೂ 90 ವರ್ಷ ತುಂಬಿದ ವೇದಿಕೆಯ ಹಿರಿಯ ಸದಸ್ಯ ಗಣಪಯ್ಯ ಅವರನ್ನು ಸನ್ಮಾನಿಸಲಾಯಿತು. ಸದಸ್ಯತ್ವ ಪಡೆದ ಬಿಎಸ್‌ಎನ್‌ಎಲ್ ನಿವೃತ್ತ ನಾರಾಯಣ ಬಿ.ಅವರನ್ನು ಸ್ವಾಗತಿಸಲಾಯಿತು. ಹಿರಿಯ ಸದಸ್ಯೆ ಜಯಲಕ್ಷ್ಮೀ ಪ್ರಾರ್ಥಿಸಿದರು. ಗೌರವಾಧ್ಯಕ್ಷ ಬಿ.ಭೋಜರಾಜ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ಪೂಜಾರಿ ವರದಿ ವಾಚಿಸಿದರು. ಖಜಾಂಚಿ ಜಯಲಕ್ಷ್ಮೀ ಕೊತ್ವಾಲ್ ಲೆಕ್ಕಪತ್ರ ಮಂಡಿಸಿದರು. ರಘುವೀರ ಕೆ.ಕಾರ್ಯಕ್ರಮ ನಿರೂಪಿಸಿದರು.