ಕೋಟ: ವಿದ್ಯಾರ್ಥಿಗಳು ಜ್ಞಾನದ ಹಸಿವನ್ನು ಬೆಳೆಸಿಕೊಳ್ಳಬೇಕು, ಹಸಿದವನು ಹೇಗೆ ಚೆನ್ನಾಗಿ ಆಹಾರ ಸೇವಿಸಬಲ್ಲನೋ ಹಾಗೆ ಜ್ಞಾನದ ಹಸಿವು ಇದ್ದಾಗ ಜ್ಞಾನವನ್ನು ಸಂಪಾದಿಸಲು ಸಾಧ್ಯ. ವಿದ್ಯಾರ್ಥಿಗಳು ಆಸಕ್ತಿಯಿಂದ ಚೆನ್ನಾಗಿ ಓದಿ ಉತ್ತಮ ಹುದ್ದೆ ಹೊಂದಿ ಉತ್ತಮ ನಾಗರಿಕರಾಗಬೇಕು ಎಂದು ಕರ್ಣಾಟಕ ಬ್ಯಾಂಕ್ ಬ್ರಾಂಚ್ ಬ್ಯಾಂಕಿಂಗ್ ಡಿಪಾಟ್ಮೆರ್ಂಟ್ ಪ್ರಧಾನ ಕಚೇರಿ ಮಹಾ ಪ್ರಬಂಧಕ ರಾಜ.ಬಿ.ಎಸ್. ಹೇಳಿದರು.
ಕೋಟ ವಿವೇಕ ವಿದ್ಯಾಸಂಸ್ಥೆಗಳ ಅಮೃತ ಮಹೋತ್ಸವ ಅಂಗವಾಗಿ ವಿವಿಧ ಕಾಮಗಾರಿ ಯೋಜನೆಯಡಿಯಲ್ಲಿ, ಸಿಎಸ್‌ಆರ್ ನಿಧಿಯಡಿ ಕರ್ಣಾಟಕ ಬ್ಯಾಂಕ್ ಒದಗಿಸಿರುವ ಸೋಲಾರ್ ವಿದ್ಯುತ್ ಟಕ ಉದ್ಘಾಟನಾ ಸವಾರಂಭದಲ್ಲಿ ಮಾತನಾಡಿದರು.
ಕರ್ಣಾಟಕ ಬ್ಯಾಂಕ್ ಉಡುಪಿ ಕ್ಷೇತ್ರಿಯ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಕೆ.ವಾದಿರಾಜ್ ಹಾಗೂ ಕೋಟ ವಿದ್ಯಾ ಸಂ ಅಧ್ಯಕ್ಷ ಸಿಎ ಪ್ರಭಾಕರ ಮಯ್ಯ ಮಾತನಾಡಿದರು.
ಬಾಲಕರ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರೇವಾನಂದ್, ಆಂಗ್ಲ ವಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪ್ರೀತಿರೇಖಾ, ವಿದ್ಯಾಸಂ ಕಾರ್ಯದರ್ಶಿ ಎಂ.ರಾಮದೇವ ಐತಾಳ, ಕೋಶಾಧಿಕಾರಿ ವೆಲೇರಿಯನ್ ಮಿನೇಜಸ್, ಕಾರ್ಣಾಟಕ ಬ್ಯಾಂಕ್‌ನ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧಿಕಾರಿಗಳು, ಕೋಟ ವಿದ್ಯಾ ಸಂದ ಎಲ್ಲ ಪದಾಧಿಕಾರಿಗಳು, ವಿದ್ಯಾಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಜಗದೀಶ ನಾವಡ ಸ್ವಾಗತಿಸಿದರು. ವೆಂಕಟೇಶ ಉಡುಪ ವಂದಿಸಿದರು. ಶಿಕ್ಷಕ ನರೇಂದ್ರ ಕುವಾರ್ ನಿರೂಪಿಸಿದರು.