ಕುಂದಾಪುರ: ಜೆಸಿಐ ಉಪ್ಪುಂದ ಸುಪ್ರಿಂ ಘಟಕದ ವತಿಯಿಂದ ಹಾಗೂ ಬೇರೆ ಬೇರೆ ಸಂಟನೆ ಸಹಯೋಗದೊಂದಿಗೆ ಬೈಂದೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಎೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್ ತರಬೇತಿ ಕಾರ್ಯಾಗಾರ ಮರವಂತೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಜೆಸಿಐ ಉಪ್ಪುಂದ ಸುಪ್ರಿಂ ಟಕ ಅಧ್ಯಕ್ಷೆ ಜ್ಯೋತಿ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಜೆಸಿಐ ವಲಯ 15 ಅಧ್ಯಕ್ಷ ಅಭಿಲಾಶ್, ಉದ್ಯಮಿ ಪ್ರಕಾಶ್ ಭಟ್, ಮರವಂತೆ ಗ್ರಾ.ಪಂ. ಅಧ್ಯಕ್ಷ ನಾಗರಾಜ್ ಖಾರ್ವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ, ಜೆಸಿಐ ಇಂಡಿಯಾ ಅಂತಾರಾಷ್ಟ್ರೀಯ ತರಬೇತುದಾರರಾದ ದೀಪಕ್ ರಾಜ್, ಡಾ.ಹರಿಣಾಕ್ಷಿ ಕರ್ಕೇರ, ಜೋನ್ ಕೋ-ಆರ್ಡಿನೇಟರ್ ಸುವಾ ಆಚಾರ್ಯ, ಬೈಂದೂರು ತಾಲೂಕು ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಉಪಸ್ಥಿತರಿದ್ದರು. ಜೆಸಿಐ ಉಪಾಧ್ಯಕ್ಷ ರವಿರಾಜ್ ನಿರ್ವಹಿಸಿದರು. ಗೀತಾ ಶೆಟ್ಟಿ ರಾಹುತನಕಟ್ಟೆ ವಂದಿಸಿದರು.