ಶಿರ್ವ: ಆಧುನಿಕ ಶಿಕ್ಷಣ ವ್ಯವಸ್ಥೆ ನಡುವೆ ಸಂಸ್ಕಾರ, ಸಂಸ್ಕೃತಿಯುಳ್ಳ ಶಿಕ್ಷಣ ದೊರಕುವುದು ಅಪೂರ್ವ. ಅಂತಹ ಸಂಸ್ಕಾರವುಳ್ಳ ಶಿಕ್ಷಣ ಇಲ್ಲಿನ ಸಂಸ್ಥೆಯಲ್ಲಿ ದೊರಕುತ್ತಿದೆ. ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ ಎಂದು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ ಹೇಳಿದರು.
ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ರಾಜ್ಯಮಟ್ಟದ ಅಂತರ್ ಕಾಲೇಜು ತಾಂತ್ರಿಕ, ಮ್ಯಾನೇಜ್‌ಮೆಂಟ್, ಸಾಂಸ್ಕೃತಿಕ ಸ್ಪರ್ಧೆ ವರ್ಣೋತ್ಸವ-2025 ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಹಳೇ ವಿದ್ಯಾರ್ಥಿ, ದಲ್ಲಾಸ್‌ನ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆ ಲೀಡ್ ಡಿಸೈನ್ ಇಂಜಿನಿಯರ್ ಪವನ್‌ಕುಮಾರ್ ಶೆಟ್ಟಿ ಮ್ಯೂಸಿಕ್ ಟಿಬಿಒಎಸ್‌ಎಂ ಹಿರಿಯ ಪ್ರಾಧ್ಯಾಪಕಿ, ಸಂಸ್ಥೆ ಹಳೇ ವಿದ್ಯಾರ್ಥಿ ಉಷಾ ರಾಮಕೃಷ್ಣ ಭಟ್, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಸಂಸ್ಥೆ ಸಾಂಸ್ಕೃತಿಕ ಘಟಕ ಸಂಯೋಜಕ ರೋಶನ್ ಎಸ್.ಕೋಟ್ಯಾನ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪಾವ್ಲ್ ಸೂರಜ್ ಕ್ರೀಡಾ ಚಟುವಟಿಕೆಗಳ ಬಹುಮಾನ ವಿಜೆೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ರವಿಪ್ರಭಾ ಕೆ ಕಾಲೇಜು ಮಟ್ಟದ ಮಂಥನ-ಸಾಂಸ್ಕೃತಿಕ, ತಾಂತ್ರಿಕ ಚಟುವಟಿಕೆಗಳ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಶ್ರಾವ್ಯಾ ತಂತ್ರಿ ಸ್ವಾಗತಿಸಿದರು. ರಕ್ಷಾ ಶೆಟ್ಟಿ ಪ್ರಾರ್ಥಿಸಿದರು. ಪ್ರೇರಣಾ ರಾವ್ ವಂದಿಸಿದರು. ವಿದ್ಯಾರ್ಥಿಗಳಾದ ಹರ್ಷಲ್ ಡಿಮೆಲ್ಲೊ, ಮಾನ್ಸಿ ರಾವ್ ಕಾರ್ಯಕ್ರಮ ನಿರೂಪಿಸಿದರು.