

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ಭಾಗಕ್ಕೆ ಬರುವ ಪ್ರವಾಸಿಗರು ಹೆಚ್ಚಾಗಿ ಮೀನು ಊಟಕ್ಕೆ, ಮೀನಿನ ಖಾದ್ಯ ಇಷ್ಟಪಡುತ್ತಾರೆ. ಕುಂದಾಪುರ ಪರಿಸರದಲ್ಲಿ ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಮೀನು ಊಟ ಹಾಗೂ ಮೀನಿನ ಖಾದ್ಯ ದೊರೆಯುವ ಹೋಟೆಲ್‌ಗಳು ಕಡಿಮೆ ಇದೆ. ಉತ್ತಮ ಮೀನು ಊಟ ಜನರು ಹುಡುಕಿಕೊಂಡು ಹೋಗುತ್ತಿದ್ದಾರೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದರು.
ಕೋಟೇಶ್ವರ ಅಂಕದಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಸಹನಾ ಎಸ್ಟೇಟ್‌ನಲ್ಲಿ ಸಹನಾ ಗ್ರೂಪ್‌ನ ಸಹನಾಸ್ ಫಿಶ್ ನ್ ಕರಿ ರೆಸ್ಟೋರೆಂಟ್ ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರದಲ್ಲಿ 10 ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಗಳಿಸಿ ಪ್ರಸಿದ್ಧಿಯಾಗಿರುವ ಸುರೇಂದ್ರ ಶೆಟ್ಟಿ ನೇತೃತ್ವದ ಸಹನಾ ಗ್ರೂಪ್ ಸಂಸ್ಥೆ, ಕುಂದಾಪುರ ಕೋಟೇಶ್ವರ ಪರಿಸರದಲ್ಲಿ ಇನ್ನೊಂದು ಮೀನು ಖಾದ್ಯಗಳ ಹೊಸ ಫಿಶ್ ನ್ ಕರಿ ರೆಸ್ಟೋರೆಂಟ್ ಪ್ರಾರಂಭಿಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ ಶುಭಾಶಂಸನೆಗೈದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರಘುರಾಮ ದೇವಾಡಿಗ, ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಸಹನಾ ಗ್ರೂಪ್ ಆಡಳಿತ ನಿರ್ದೇಶಕಿ ಸಹನಾ ಎಸ್.ಶೆಟ್ಟಿ ಮೊದಲಾದವರು par ಉಪಸ್ಥಿತರಿದ್ದರು.
ಕುಂದಾಪುರದಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿ 10ನೇ ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭ ವಿನೂತನ ಮೀನು ಖಾದ್ಯಗಳ ರೆಸ್ಟೋರೆಂಟ್ ಮಾಡಬೇಕು ಎಂಬ ಆಸೆ ಇಟ್ಟುಕೊಂಡು, ವಿನೂತನ ಶೈಲಿಯ ಕಟ್ಟದಲ್ಲಿ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಮೀನು ಖಾದ್ಯಗಳ ರೆಸ್ಟೋರೆಂಟ್ ಪ್ರಾರಂಭಿಸಲಾಗಿದೆ. ಜನರಿಗೆ ಹಾಗೂ ಪ್ರವಾಸಿಗರಿಗೆ ಮೀನು ಊಟ ಅಚ್ಚುಮೆಚ್ಚು ಹಾಗೂ ಹೆಚ್ಚೆಚ್ಚು ಪ್ರವಾಸಿಗರನ್ನು ಮೀನು ಊಟ ಈ ಭಾಗಕ್ಕೆ ಸೆಳೆಯುತ್ತಿದೆ. ಮಂಗಳೂರು, ಉಡುಪಿ ಭಾಗದಲ್ಲಿ ಮೀನು ಖಾದ್ಯದ ಹೋಟೆಲ್ ಯಶಸ್ಸು ಪಡೆದುಕೊಂಡಿದ್ದು, ಕುಂದಾಪುರ ಭಾಗದಲ್ಲಿ ಗುಣಮಟ್ಟದ ಮೀನು ಖಾದ್ಯ ಹಾಗೂ ಆಹಾರ ಉತ್ತಮ ಸೇವೆಯೊಂದಿಗೆ ಜನರಿಗೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಫಿಶ್ ನ್ ಕರಿ ರೆಸ್ಟೋರೆಂಟ್‌ನಲ್ಲಿ ಮೀನಿನ ಖಾದ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. -ಸುರೇಂದ್ರ ಶೆಟ್ಟಿ ಸಹನಾ ಗ್ರೂಪ್ ಆಡಳಿತ ನಿರ್ದೇಶಕ https://www.vijayavani.net/right-to-information-is-our-fundamental-right https://www.vijayavani.net/malpe-incident-ex-minister-jp-hegde