More

  ಹಿರಿಯ ಪತ್ರಕರ್ತ ‘ಬಾನಾಸು’ಗೆ ಒಲಿದು ಬಂತು ಅತ್ಯುತ್ತಮ ಚಿತ್ರ ವಿಮರ್ಶಕ ಪ್ರಶಸ್ತಿ

  ನವದೆಹಲಿ: ಇಂದು (ಆಗಸ್ಟ್ 24) ಸಂಜೆ 5 ಗಂಟೆಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ದೇಶದಾದ್ಯಂತ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಘೋಷಿಸಲಾಗುತ್ತದೆ. ಅದರಂತೆಯೇ ಈ ಬಾರಿಯೂ ಕೂಡ ಪ್ರಶಸ್ತಿ ಗೆದ್ದವರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

  ಇದನ್ನೂ ಓದಿ: ಪ್ರಿಯಾಂಕ್​ ಖರ್ಗೆ ವಿರುದ್ಧ ಕಿಡಿಕಾರಿದ ಮಣಿಕಂಠ ರಾಠೋಡ್

  ಅನೇಕ ಪ್ರಶಸ್ತಿಗಳ ಪೈಕಿ ಸಿನಿಮಾ ಪತ್ರಕರ್ತರಿಗೆ ಎಂದೇ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ’ ಪ್ರಶಸ್ತಿ ಈ ಬಾರಿ ಕನ್ನಡದ ಸಿನಿಮಾ ಪತ್ರಕರ್ತರನ್ನು ಅರಸಿ ಬಂದಿದೆ. ಸ್ಯಾಂಡಲ್​ವುಡ್​ಗೆ ಬಾ.ನಾ. ಸುಬ್ರಹ್ಮಣ್ಯ ಎಂದೇ ಚಿರಪರಿಚಿತರಾಗಿರುವ ಕನ್ನಡ ಹಿರಿಯ ಸಿನಿಮಾ ರಿಪೋರ್ಟರ್​​ ಸುಬ್ರಹ್ಮಣ್ಯ ಬಾಡೂರು ಅವರಿಗೆ ಈ ವಿಶೇಷ ಪ್ರಶಸ್ತಿ ಲಭಿಸಿದೆ.

   69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರ ಪಟ್ಟಿ ಈ ಕೆಳಕಂಡಂತಿದೆ ಅನುಸರಿಸಿ:

  ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ
  ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉಧಮ್
  ಅತ್ಯುತ್ತಮ ಗುಜರಾತಿ ಚಲನಚಿತ್ರ: ಚೆಲೋ ಶೋ (ದಿ ಲಾಸ್ಟ್ ಶೋ)
  ಅತ್ಯುತ್ತಮ ಮರಾಠಿ ಸಿನಿಮಾ: ಎಕ್ದಾ ಕೇ ಜಲಾ
  ಅತ್ಯುತ್ತಮ ಮಲಯಾಳಂ ಚಿತ್ರ: ಮನೆ
  ವಿಶೇಷ ತೀರ್ಪುಗಾರರ ಪ್ರಶಸ್ತಿಗಳು: ಶೇರ್​ಶಾ
  ಅತ್ಯುತ್ತಮ ಸಂಗೀತ ನಿರ್ದೇಶಕ: ಪುಷ್ಪಾ 1 ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್, ಆರ್‌ಆರ್‌ಆರ್‌ ಚಿತ್ರಕ್ಕೆ ಎಂ.ಎಂ. ಕೀರವಾಣಿ

  ಇದನ್ನೂ ಓದಿ: Nalpad Attends Gruha Lakshmi Meeting In Mysuru | ಡಿಸಿಎಂ, ಅಧಿಕಾರಿಗಳ ಸಭೆಯಲ್ಲಿ ಸಾಂವಿಧಾನಿಕ ಹುದ್ದೆ ಹೊಂದಿಲ್ಲದ ಮಹಮ್ಮದ್ ನಲಪಾಡ್ ಭಾಗಿ

  ಅತ್ಯುತ್ತಮ ಸಂಕಲನ: ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)
  ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ಕಾಶ್ಮೀರ್ ಫೈಲ್ಸ್‌)
  ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ(ಮಿಮಿ)
  ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ), ಕೃತಿ ಸನೋನ್ (ಮಿಮಿ)
  ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪಾ 1)

  ಇದನ್ನೂ ಓದಿ: ಡೆಂಘೆ ನಿಯಂತ್ರಣಕ್ಕೆ ಸಹಕರಿಸಿ:ಡಾ.ಟಿ.ಲಿಂಗರಾಜು

  ಸಂಪೂರ್ಣ ಮನರಂಜನೆಯನ್ನು ಒದಗಿಸಿದ ಅತ್ಯುತ್ತಮ ಜನಪ್ರಿಯ ಚಲನಚಿತ್ರ: ಆರ್​ಆರ್​ಆರ್​
  ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ಏಜೆನ್ಸೀಸ್​)

  69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 ವಿಜೇತರ ಪಟ್ಟಿ ಇಲ್ಲಿದೆ ನೋಡಿ

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts