ಲಸಿಕೆ ತಗೊಂಡಿದ್ದರೂ, ಆ್ಯಂಟಿಬಾಡಿ ಚಿಕಿತ್ಸೆ ಪಡೆದಿದ್ದರೂ ಒಮಿಕ್ರಾನ್​ ಬರಬಹುದು!; ಏಕೆಂದರೆ...

Omicron F1
Published on

ನವದೆಹಲಿ: ಜಗತ್ತಿನೆಲ್ಲೆಡೆ ಆತಂಕ ಉಂಟು ಮಾಡಿರುವ ಒಮಿಕ್ರಾನ್​ ಮತ್ತಷ್ಟು ಭೀತಿ ಹುಟ್ಟಿಸುವಂಥ ವಿಚಾರಗಳು ಬೆಳಕಿಗೆ ಬರಲಾರಂಭಿಸಿವೆ. ಈಗಾಗಲೇ ಲಸಿಕೆ ಪಡೆದಿದ್ದರೂ, ಆ್ಯಂಟಿಬಾಡಿ ಚಿಕಿತ್ಸೆಗೆ ಒಳಗಾಗಿದ್ದರೂ ಒಮಿಕ್ರಾನ್ ಸೋಂಕು ತಗುಲುವ ಸಾಧ್ಯತೆಗಳಿವೆ ಎಂಬುದು ಹೊಸ ಅಧ್ಯಯನವೊಂದರಲ್ಲಿ ಕಂಡುಬಂದಿದೆ.

ಯುಎಸ್​ನ ಕೊಲಂಬಿಯಾ ಯುನಿವರ್ಸಿಟಿ ಮತ್ತು ಯುನಿವರ್ಸಿಟಿ ಆಫ್ ಹಾಂಗ್​ಕಾಂಗ್​ ನಡೆಸಿದ ಜಂಟಿ ಅಧ್ಯಯನದ ವರದಿ ಗುರುವಾರ ನೇಚರ್ ಜರ್ನಲ್​ನಲ್ಲಿ ಪ್ರಕಟಗೊಂಡಿದ್ದು, ಅದರಲ್ಲಿ ಒಂದಷ್ಟು ವಿಶೇಷ ಮಾಹಿತಿಗಳು ಬಹಿರಂಗಗೊಂಡಿವೆ.

ಸದ್ಯದ ಯಾವುದೇ ಲಸಿಕೆ ಎರಡೂ ಡೋಸ್ ತೆಗೆದುಕೊಂಡಿದ್ದರೂ ಅವುಗಳಿಂದ ಸಿಗುವ ರೋಗನಿರೋಧಕ ಶಕ್ತಿ ಹಳೆಯ ವೈರಸ್​ಗಿಂತ ರೂಪಾಂತರಿ ಒಮಿಕ್ರಾನ್​ ವೈರಸ್​ ವಿಷಯದಲ್ಲಿ ಕಡಿಮೆ ಪರಿಣಾಮಕಾರಿ ಎಂಬ ಅಂಶ ಈ ಅಧ್ಯಯನದಲ್ಲಿ ಕಂಡು ಬಂದಿದೆ.

ಮಾತ್ರವಲ್ಲ ವೇಗವಾಗಿ ವ್ಯಾಪಿಸುತ್ತಿರುವ ರೂಪಾಂತರಿ ವೈರಸ್​ ಒಮಿಕ್ರಾನ್​ನ ಪ್ರೊಟೀನ್​ ಸ್ಪೈಕ್​ಗಳು ವಿಶಿಷ್ಟವಾಗಿದ್ದು, ಹೊಸ ಸೋಂಕನ್ನು ತಡೆಯಲು ಹೊಸ ಲಸಿಕೆಗಳ ಸಂಶೋಧನೆಯ ಅಗತ್ಯವಿದೆ ಎಂದೂ ಈ ಅಧ್ಯಯನ ಅಭಿಪ್ರಾಯ ಪಟ್ಟಿದೆ. -ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net