

ಮಂಗಳೂರು: ಇಲ್ಲೊಬ್ಬ ಕೇರಳ ಮೂಲದ ವಿದ್ಯಾರ್ಥಿ, ತನ್ನನ್ನು ತಾನು RAW ಏಜೆಂಟ್ ಎಂದು ಹೇಳಿಕೊಂಡು ಮಂಗಳೂರು ನಗರದಲ್ಲಿ ತಿರುಗುತ್ತಿದ್ದ. ಆದರೆ ಈತ ಮಂಗಳೂರಿನ ಪ್ರತಿಷ್ಠಿತ ನರ್ಸಿಂಗ್ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ ಎನ್ನಲಾಗಿದೆ.
ಆರೋಪಿಯನ್ನು ಬೆನೆಡಿಕ್ಟ್ ಸಾಬು (24) ಎಂದು ಗುರುತಿಸಲಾಗಿದ್ದು ಈತ ಕೇರಳದ ಇಡುಕ್ಕಿ ಮೂಲದವನಾಗಿದ್ದು 6 ತಿಂಗಳ ಹಿಂದೆ ನರ್ಸಿಂಗ್ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿದ್ದ. ಈತ ತನ್ನನ್ನು ತಾನು ಕೇರಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ರಾ ಫೀಲ್ಡ್ ಏಜೆಂಟ್ ಎಂದು ಹೇಳಿ ನಕಲಿ ಐಡಿ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಸದ್ಯ RAW ಫೀಲ್ಡ್ ಏಜೆಂಟ್ ಆಗಿ ಇರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ. ತನ್ನನ್ನು ತಾನು ಪೊಲಿಸ್ ಅಧಿಕಾರಿ ಎಂದು ತೋರಿಸಿಕೊಳ್ಳಲು ಪೊಲೀಸ್ ಸಮವಸ್ತ್ರವನ್ನೂ ಹೊಲಿಸಿಕೊಂಡಿದ್ದ.
ಈತನ ವರ್ತನೆಯಿಂದ ಅನುಮಾನಕ್ಕೆ ಒಳಗಾದ ಉರ್ವ ಪೊಲೀಸರು, ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ. ಬಂಧಿತನಿಂದ ನಕಲಿ ಐಡಿ ಕಾರ್ಡ್, ಪೊಲೀಸ್ ಸಮವಸ್ತ್ರ, ಮೊಬೈಲ್ ಫೋನ್, ಲ್ಯಾಪ್‍ಟಾಪ್‍ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.