ಆನ್​ಲೈನ್​ ಗೇಮಿಂಗ್​ ಗೀಳು: ಸಾಲ ತೀರಿಸಲಾಗದೇ ದರೋಡೆ ಮಾಡಿದ ವಿದ್ಯಾರ್ಥಿಗಳು ಅಂದರ್​​

pubg accuse MP
Published on

ಮೊರೆನಾ: ವಿದ್ಯಾರ್ಥಿಗಳು ಆನ್‌ಲೈನ್ ಗೇಮ್ ಆಡುವ ಮೂಲಕ ಸಾಲಕ್ಕೆ ಸಿಲುಕಿ, ಆ ಸಾಲ ತೀರಿಸಲು ದರೋಡೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ಪ್ರಿಯತಮೆಯನ್ನು ಹತ್ಯೆಗೈದು ಪೊದೆಗೆ ಎಸೆದ ವಿವಾಹಿತ

12ನೇ ತರಗತಿಯ ಓದುತ್ತಿರುವ ಅಪರಾಧಿಗಳ ಹೆಸರನ್ನು ಬಹಿರಂಗಪಡಿಸದ ಪೊಲೀಸರು ಘಟನೆ ನಡೆದ ಕೇವಲ ಆರು ಘಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತೋಷ್ ಬನ್ಸಾಲ್ ಎಂಬ ವ್ಯಾಪಾರಿ ಸೋಮವಾರ ಬೆಳಿಗ್ಗೆ ರಾಮನಗರ ತಿರಾಹೆಯಲ್ಲಿರುವ ದಾಂಡೋತಿಯಾ ಮಾರ್ಕೆಟ್‌ನಲ್ಲಿರುವ ತಮ್ಮ ಅಂಗಡಿಯ ಬೀಗವನ್ನು ತೆರೆಯುತ್ತಿದ್ದರು. ಈ ವೇಳೆ ವ್ಯಾಪಾರಿಯು ಒಂದು ಲಕ್ಷಕ್ಕೂ ಅಧಿಕ ನಗದು ತುಂಬಿದ ಚೀಲವನ್ನು ಪಕ್ಕದಲ್ಲಿ ಇಟ್ಟುಕೊಂಡಿದ್ದರು.

ಅದೇ ಸಮಯಕ್ಕೆ ಬೈಕ್ ನಲ್ಲಿ ಬಂದ ಮೂವರು ಯುವಕರ ಪೈಕಿ ಒಬ್ಬಾತ ಬಂದು ಬೇಗ ಬ್ಯಾಗ್ ಎತ್ತಿಕೊಂಡು ಓಡಿ ಹೋಗಿದ್ದು, ಮೂವರೂ ಯುವಕರು ಬೈಕ್ ಏರಿ ಓಡಿ ಹೋಗಿದ್ದಾರೆ. ಕೂಡಲೇ ವ್ಯಾಪಾರಿಯು, ತನ್ನ ದ್ವಿಚಕ್ರವಾಹನದಲ್ಲಿ ಯುವಕರನ್ನು ಹಿಂಬಾಲಿಸಿದ್ದು ಅಷ್ಟೋತ್ತಿಗೆ ಆರೋಪಿಗಳು ನಗರದ ಕಿರಿದಾದ ಮಾರ್ಗದ ಮೂಲಕ ಬೈಕ್ ಚಲಾಯಿಸಿಕೊಂಡು ನಾಪತ್ತೆಯಾಗಿದ್ದರು.

ಇದನ್ನೂ ಓದಿ: ಸ್ಟುಡಿಯೋದಲ್ಲಿ ಮೃತದೇಹವಾಗಿ ಪತ್ತೆಯಾದ ಬಾಲಿವುಡ್​​ನ ಖ್ಯಾತ ಕಲಾ ನಿರ್ದೇಶಕ

ಘಟನೆಯ ನಂತರ ಸಿಟ್ಟಿಗೆದ್ದ ವ್ಯಾಪಾರಿಯು ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳದ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಲಾಕ್‌ಅಪ್‌ನಲ್ಲಿ ಇರಿಸಿದ್ದು, ಲೂಟಿ ಮಾಡಿದ ಮೊತ್ತ ಒಂದು ಲಕ್ಷಕ್ಕೂ ಹೆಚ್ಚಿನ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ವೇಳೆ ಆರೋಪಿಗಳು, ಮೊಬೈಲ್‌ನಲ್ಲಿ ಗೇಮ್ ಆಡುವಾಗ ಸಾಲದ ಸುಳಿಗೆ ಸಿಲುಕಿದ್ದಾಗಿ ತಿಳಿಸಿದ್ದಾನೆ. ಅದಕ್ಕಾಗಿಯೇ ಸಾಲ ತೀರಿಸಲು ದರೋಡೆ ನಡೆಸಿದ್ದೆವು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net