ನಾನ್ಯಾರನ್ನೂ ಪ್ರೀತಿಸಿಲ್ಲ, ನನ್ನ ಸಾವಿಗೆ ಪ್ರೀತಿ ಕಾರಣವಲ್ಲ ಎಂದು ಹೇಳಿ 23ನೇ ಮಹಡಿಯಿಂದ ಹಾರಿ ಸತ್ತ ವಿದ್ಯಾರ್ಥಿ!

death
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ನನ್ನ ಸಾವಿಗೆ ಪ್ರೇಮವೈಫಲ್ಯವೇ ಕಾರಣ ಎಂದು ಆತ್ಮಹತ್ಯೆ ಮಾಡಿಕೊಂಡ ಎಷ್ಟೋ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ 'ನಾನ್ಯಾರನ್ನೂ ಪ್ರೀತಿಸಿಲ್ಲ, ನನ್ನ ಸಾವಿಗೆ ಪ್ರೀತಿ ಕಾರಣವಲ್ಲ' ಎಂದು ಹೇಳಿ 23ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಂಜನ್ (17) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಂಜನ್, ಕೋಣನಕುಂಟೆ ಕ್ರಾಸ್​ನಲ್ಲಿರುವ ಫಾಲ್ಕನ್ ಸಿಟಿ ಅಪಾರ್ಟ್​ಮೆಂಟ್​ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಯುವುದಕ್ಕೂ ಮೊದಲು ಈತ ತಂದೆ ಹಾಗೂ ಸ್ನೇಹಿತರಿಗೆ ವಿಡಿಯೋ ಮೆಸೇಜ್ ಕಳುಹಿಸಿದ್ದ. ಅಲ್ಲದೆ ನಾನ್ಯಾರನ್ನೂ ಪ್ರೀತಿಸಿಲ್ಲ, ನನ್ನ ಸಾವಿಗೆ ಪ್ರೀತಿ ಕಾರಣವಲ್ಲ ಎಂದು ಪತ್ರವೊಂದರಲ್ಲಿ ಬರೆದಿಟ್ಟು, 23ನೇ ಮಹಡಿಯಿಂದ ಕೆಳಕ್ಕೆ ಹಾರಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net