ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!

Wife
Published on

ನವದೆಹಲಿ: ಗಂಡನಿಂದ ಹೆಂಡತಿ ಶೋಷಣೆಗೆ ಈಡಾಗುವುದು, ಹಲ್ಲೆಗೆ ಒಳಗಾಗುವುದು, ಕೊಲೆಯಾಗುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ.

ಆಕೆ ಕೊಲೆ ಮಾಡಿ ಅಷ್ಟಕ್ಕೇ ಸುಮ್ಮನಾಗಿಲ್ಲ. ಗಂಡನ ಕತ್ತನ್ನು ಕತ್ತರಿಸಿದ್ದಲ್ಲದೆ, ರಕ್ತಸಿಕ್ತ ರುಂಡವನ್ನು ಚೀಲದೊಳಗಿಟ್ಟು, ಕುಟುಂಬದ ದೇವಸ್ಥಾನದ ಬಳಿ ಇರಿಸಿದ್ದಳು. ಹೀಗೆ ಮಹಿಳೆಯೊಬ್ಬಳು 50 ವರ್ಷದ ತನ್ನ ಪತಿಯನ್ನು ಕೊಲೆ ಮಾಡಿರುವುದು ಇಂದು ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

ಅಂದಹಾಗೆ ತ್ರಿಪುರ ಜಿಲ್ಲೆಯ ಖೋವಾಯ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಪ್ರಕರಣದ ತನಿಖೆ ನಡೆಯುತ್ತಿದೆ, ಶೀಘ್ರದಲ್ಲೆ ಕೊಲೆ ಕುರಿತ ರಹಸ್ಯ ಭೇದಿಸಲಾಗುವುದು ಎಂದು ಖೋವಾಯ್​ ಹೆಚ್ಚುವರಿ ಎಸ್​ಪಿ ಅಮಿತಾಭ್ ಪೌಲ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net