ರೈಲು ಪ್ರಯಾಣದ ವೇಳೆ ವಿಚಿತ್ರ ಘಟನೆ; ಟಿಕೆಟ್ ಕೇಳಿದ ಟಿಸಿಗೆ ಯುವತಿ ಮಾಡಿದ್ದೇನು ಗೊತ್ತಾ? Indian Railways Ticket

train
Published on

Indian Railways; ರೈಲು ಪ್ರಯಾಣ ಆರಾಮದಾಯಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜನರು ಲಾಂಗ್‌ ಜರ್ನಿ ಮಾಡಲು ರೈಲುಗಳನ್ನು ಆಶ್ರಯಿಸುತ್ತಾರೆ. ಇದರಿಂದ ಅಗ್ಗದ ಬೆಲೆಯಲ್ಲಿ ದೂರದ ಸ್ಥಳಗಳಿಗೆ ಸುಲಭವಾಗಿ ತಲುಪಬಹುದು. ರೈಲುಗಳಲ್ಲಿ ಹೆಚ್ಚಿನ ಅಡೆತಡೆಗಳಿಲ್ಲ ಹಾಗಾಗಿ ಕುಟುಂಬಗಳೊಂದಿಗೆ ಪ್ರಯಾಣಿಸಲು ರೈಲುಗಳು ಸೂಕ್ತವಾಗಿವೆ. ಅದಕ್ಕಾಗಿಯೇ ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಅಂದಹಾಗೆ ರೈಲು ಪ್ರಯಾಣ ಸಮಯದಲ್ಲಿ ಯಾವಾಗಲೂ ಟಿಕೆಟ್‌ಗಳ ಸಮಸ್ಯೆ ಇದ್ದೇ ಇರುತ್ತದೆ. ಕೆಲವರು ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣಿಸಿ ಸಂಚಲನ ಸೃಷ್ಟಿಸುತ್ತಾರೆ.

ಅದಕ್ಕಾಗಿಯೇ ಟಿಕೆಟ್ ಇಲ್ಲದವರನ್ನು ಗುರುತಿಸಲು ಟಿಕೆಟ್ ಚೆಕ್ಕರ್‌ಗಳು (ಟಿಸಿಗಳು) ಪ್ರತಿ ಕೋಚ್‌ನಲ್ಲಿರುತ್ತಾರೆ. ಅವರು ರೈಲ್ವೆ ಪ್ರಯಾಣಿಕರಿಗೆ ತಮ್ಮ ಟಿಕೆಟ್ ತೋರಿಸಲು ಹೇಳುತ್ತಾರೆ. ಬಳಿಕ ಟಿಕೆಟ್ ಇಲ್ಲದವರನ್ನು ಹಿಡಿಯಲಾಗುತ್ತದೆ. ಇದರ ಮಧ್ಯೆ ಟಿಸಿ ಗಳಿಗೂ ಸಹ ಎಷ್ಟೋ ಮಂದಿ ಯಾಮಾರಿಸಲು ಮುಂದಾಗುತ್ತಾರೆ. ಇತ್ತೀಚೆಗೆ ಒಬ್ಬ ಯುವತಿಯೊಬ್ಬಳು ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ಟಿಸಿ ಅವಳ ಬಳಿ ಬಂದು ಟಿಕೆಟ್ ಕೇಳಿದ್ದಾರೆ. ಆದರೆ ಅವಳು ಅವರನ್ನು ನೋಡಿ ಏನೋ ಕೆಲಸದಲ್ಲಿ ನಿರತಳಾಗಿರುವಂತೆ ಆಕೆ ವರ್ತಿಸಿದ್ದಾಳೆ. ಟಿಸಿ ಹಲೋ, ನಿನ್ನ ಟಿಕೆಟ್ ತೋರಿಸು ಎಂದು ಆಕೆಯ ಕೈ ಮುಟ್ಟಿದ್ದಾನೆ ಅಷ್ಟೇ. ಆದರೆ ಅವಳು ಅವನನ್ನು ನೋಡಿ, ನಿನಗೆ ಎಷ್ಟು ಧೈರ್ಯ ಇರಬೇಕು ಹೇಳು ನನ್ನನ್ನು ಮುಟ್ಟುತ್ತಿದ್ದೀಯಾ, ನೀನು ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದೀಯಾ ಎಂದು ಇಲ್ಲ-ಸಲ್ಲದ ಮಾತುಗಳನ್ನಾಡಿದ್ದಾಳೆ.

ನಾನು ನಿನಗೆ ಟಿಕೆಟ್ ತೋರಿಸಲು ಕೇಳಿದರೆ ನೀನು ಏನೆನೋ ಆರೋಪ ಮಾಡುತ್ತಿದ್ದೀಯಾ ಎಂದು ಟಿಸಿ ಆಕೆಯನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಆಕೆ, ನೀನು ನನ್ನನ್ನು ಯಾಕೆ ಮುಟ್ಟಿದೆ, ನೀನು ಟಿಕೆಟ್ ಕೇಳಿದರೆ ನಾನು ತೋರಿಸುವವರೆಗೂ ಕಾಯಬೇಕಿತ್ತು. ಅದನ್ನು ಬಿಟ್ಟು ನೀನು ನನ್ನನ್ನು ಮುಟ್ಟಿದರೆ ನಿನ್ನ ಉದ್ದೇಶ ನನಗೆ ಗೊತ್ತಾಗುತ್ತೆ ಎಂದು ಆಕೆ ಹೇಳಿದ್ದಾಳೆ. ನಿನ್ನನ್ನು ಜೈಲಿಗೆ ಹಾಕುವವರೆಗೂ ನಾನು ಬಿಡುವುದಿಲ್ಲ. ನಿನ್ನಂತಹವರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆಕೆ ಟಿಸಿ ಕಾಲರ್​ ಹಿಡಿದು ಕಿರುಚಲು ಪ್ರಾರಂಭಿಸಿದ್ದಾಳೆ.

(ಏಜೆನ್ಸೀಸ್)

ಈ ಘಟನೆಯನ್ನು ನೋಡಿದ ಪ್ರಯಾಣಿಕರು ಏನಾಯಿತು. ಅವಳು ಏಕೆ ಕಾಲರ್ ಹಿಡಿದಿದ್ದಾಳೆ ಎಂದು ಪ್ರಶ್ನಿಸಿದ್ದಾರೆ. ನಂತರ ವಿಚಾರ ತಿಳಿದ ಸಹ ಪ್ರಯಾಣಿಕರು ಆಕೆಯನ್ನು ನಿನ್ನ ಟಿಕೆಟ್ ತೋರಿಸು ಎಂದಾಗ ಆಕೆ ನನ್ನ ಟಿಕೆಟ್​ ಕಳೆದುಹೋಗಿದೆ ಎಂಬ ಉತ್ತರ ಕೊಟ್ಟಿದ್ದಾಳೆ. ಆಕೆ ಟಿಕೆಟ್​ ಇಲ್ಲದ ಕಾರಣ ಈ ರೀತಿಯ ನಾಟಕ ಮಾಡಿರುವುದಾಗಿ ಪ್ರಯಾಣಿಕರು ಗಮನಿಸಿದ್ದಾರೆ. ಇನ್ನೂ ಈ ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ರೈಲ್ವೆ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net