

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿದಂತೆ 7 ಮಂದಿ ಸೇರಿ ಚಿತ್ರದುರ್ಗದ ನಿವಾಸಿಯಾಗಿರುವ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಗುರುವಾರ ರಾತ್ರಿ ದರ್ಶನ್ ಅವರನ್ನು ಪರಪ್ಪನ ಜೈಲಿಗೆ ಕಳುಹಿಸಲಾಗಿದೆ. ಇದೀಗ ನಟ ದರ್ಶನ್ ಬೆನ್ನಿಗೆ ಪತ್ನಿ ವಿಜಯಲಕ್ಷ್ಮಿ ಬೆಂಬಲವಾಗಿ ನಿಂತಿದ್ದಾರೆ.
ಜೈಲಿಗೆ ಹೋಗುವುದಕ್ಕೂ ಮುನ್ನ ದರ್ಶನ್ ‘ದಿ ಡಿವಿಲ್’ ಚಿತ್ರದ ಶೂಟಿಂಗ್ ಮುಗಿಸಿ ಹೋಗಿದ್ದಾರೆ. ಇನ್ನೇನೊ ಸಿನಿಮಾದ ಪ್ರಚಾರ ಶುರುಮಾಡಬೇಕು ಅನ್ನುವಷ್ಟರಲ್ಲಿ ಅವರ ಜಾಮೀನು ರದ್ದಾಗಿ, ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಯ್ತು. ಈ ಬೆನ್ನಲ್ಲೇ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ‘ದಿ ಡೆವಿಲ್’ ಸಿನಿಮಾದ ಪ್ರಮೋಷನ್ ಬಗ್ಗೆ ಅಪ್ಡೇಟ್ಸ್ ನೀಡಿದ್ದಾರೆ. ಸಿನಿಮಾಗೆ ಯಾವುದೇ ತೊಂದರೆ ಆಗದಂತೆ ಕೆಲಸ ಮುಂದುವರಿಸಲು ದರ್ಶನ್ ತಿಳಿಸಿದ್ದಾರೆ. ಹಾಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ವಿಜಯಲಕ್ಷ್ಮಿ ದರ್ಶನ್
ಕೃತಜ್ಞತೆ ಮತ್ತು ಪ್ರೀತಿಯಿಂದ,
ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನೂ ತನ್ನ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ಅವರು ನಿಮ್ಮೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಹಿಂತಿರುಗುವವರೆಗೆ, ನಾನು ಅವರ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತೇನೆ. ಅವರ ಪರವಾಗಿ ನವೀಕರಣಗಳು ಮತ್ತು ಚಲನಚಿತ್ರ ಪ್ರಚಾರಗಳನ್ನು ಹಂಚಿಕೊಳ್ಳುತ್ತೇನೆ. ನೀವು ತೋರಿಸುತ್ತಿರುವ ಪ್ರೀತಿ, ಪ್ರಾರ್ಥನೆಗಳು ಮತ್ತು ತಾಳ್ಮೆ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅಪಾರ ಶಕ್ತಿಯನ್ನು ನೀಡುತ್ತದೆ. ಆ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ. ನೀವು ಯಾವಾಗಲೂ ತೋರಿಸುವ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ..
ನನ್ನ ಪ್ರೀತಿಯ #DBoss ಸೆಲೆಬ್ರಿಟಿಗಳೇ,