ಈ ಆಹಾರ ಪದಾರ್ಥಗಳನ್ನು ತಪ್ಪದೇ ಸೇವಿಸಿ ನಿದ್ರೆಗೆ ಭಂಗ ತರುವ ಗೊರಕೆಗೆ ಗುಡ್​ಬೈ ಹೇಳಿ!

Stop Snoring
Published on

ಆರೋಗ್ಯಕರ ಜೀವನಕ್ಕಾಗಿ ಶಾಂತ ನಿದ್ರೆ ತುಂಬಾ ಅವಶ್ಯಕ. ಆದರೆ, ಪಕ್ಕದಲ್ಲಿ ಮಲಗುವವರ ಗೊರಕೆ ಶಬ್ಧವು ನೆಮ್ಮದಿಯ ನಿದ್ರೆಗೆ ಭಂಗ ಉಂಟು ಮಾಡುತ್ತದೆ. ಗೊರಕೆಯು ಎಷ್ಟು ಕಿರಿಕಿರಿ ಅಂದರೆ, ಕೆಲವರು ಇದೇ ಕಾರಣಕ್ಕೆ ತಮ್ಮ ಪತಿಯಿಂದ ಡಿವೋರ್ಸ್​ ತೆಗೆದುಕೊಂಡಿರುವ ಉದಾಹರಣೆಯು ಇದೆ. ಹೀಗಾಗಿ ಗೊರಕೆಯನ್ನು ತಡೆಯಲು ಕೆಲವರು ಬಯಸುತ್ತಾರೆ. ಅದನ್ನು ಹೇಗೆ ತಡಯಬಹುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಈ ಗೊರಕೆ ಇದೆಯಲ್ಲ ಅದು ನಿಮಗೂ ಮತ್ತು ನಿಮ್ಮ ಪಕ್ಕದಲ್ಲಿ ಮಲಗಿರುವವರಿಗೂ ಒಳ್ಳೆಯದಲ್ಲ. ಇದು ಪರೋಕ್ಷವಾಗಿ ನಿಮಗೂ ಮತ್ತು ಅವರಿಗೂ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಗೊರಕೆ ಹೊಡೆಯುವವರಿಗಿಂಗ ಅದನ್ನು ಕೇಳಿಸಿಕೊಂಡವರಿಗೆ ಅದರ ನೋವು ಏನು ಎಂಬುದು ಹೆಚ್ಚು ಗೊತ್ತಿರುತ್ತದೆ. ಕೆಲವರು ಇದೇ ಗೊರಕೆಗೆ ಇಡೀ ರಾತ್ರಿ ಜಾಗರಣೆ ಮಾಡಿರುವುದು ಉಂಟು.

Snoring 2

ಅಂದಹಾಗೆ ಗೊರಕೆಯು ರೋಗವೇನಲ್ಲ. ಸ್ಥೂಲಕಾಯತೆ, ನಿದ್ರಾಹೀನತೆ ಮತ್ತು ವಾಯು ತೊಂದರೆಗಳು ಸೇರಿದಂತೆ ಅನೇಕ ಅಂಶಗಳು ಗೊರಕೆಗೆ ಕಾರಣವಾಗುತ್ತದೆ. ನೀವು ಸರಿಯಾದ ಟಿಪ್ಸ್​ ಅನುಸರಿಸಿದರೆ, ಗೊರಕೆಯನ್ನು ಸುಲಭವಾಗಿ ಗುಣಪಡಿಸಬಹುದು. ಅದಕ್ಕಾಗಿ ನಿಮಗೆ ತಾಳ್ಮೆಯ ಅಗತ್ಯವಿದೆ. ಗೊರಕೆಗೆ ಗುಡ್​ಬೈ ಹೇಳಲು ನೆರವಾಗುವಂತಹ ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ ನೋಡಿ.

* ಜೇನು ತುಪ್ಪ: ಜೇನುತುಪ್ಪವು ಸಮೃದ್ಧವಾಗಿ ಆ್ಯಂಟಿಮೈಕ್ರೊಬಿಯಲ್ ಅಂಶವನ್ನು ಹೊಂದಿದ್ದು, ಸಾಮಾನ್ಯವಾಗಿ ಶೀತಗಳು ಮತ್ತು ಜ್ವರದಂತಹ ಸಾಮಾನ್ಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಜೇನುತುಪ್ಪವು ಮೂಗಿನ ಮಾರ್ಗಗಳನ್ನು ತೆರೆಯಲು ಸಹಕರಿಸುವ ಮೂಲಕ ಗಾಳಿಯು ಮುಕ್ತವಾಗಿ ಹರಿಯಲು ಅನುವು ಮಾಡಿಕೊಡುತ್ತದೆ.

* ಪುದೀನಾ: ಪುದೀನಾ ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಈ ಎಲೆಯು ಆ್ಯಂಟಿಸ್ಪಾಸ್ಮೊಡಿಕ್ ಗುಣಗಳಿಂದ ತುಂಬಿದ್ದು, ಮೂಗು ಮತ್ತು ಗಂಟಲಿನ ಒಳಗಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ನೀವು ಮಲಗುವ ಮುನ್ನ ಪುದೀನಾ ಚಹಾವನ್ನು ಕುಡಿಯುವುದು ಅಥವಾ ಕುದಿಯುವ ನೀರಿನಲ್ಲಿ ಕೆಲವು ಎಲೆಗಳನ್ನು ನೆನೆಸಿ ಸೇವಿಸಿದರೆ ಗೊರಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

Snoring 1

* ಬೆಳ್ಳುಳ್ಳಿ: ಪ್ರತಿಯೊಬ್ಬರ ಮನೆಯಲ್ಲಿ ಪ್ರತಿದಿನ ಬಳಸುವ ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿದೆ. ಶತಮಾನಗಳಿಂದ ಬೆಳ್ಳುಳ್ಳಿಯನ್ನು ಔಷಧೀಯ ಪದಾರ್ಥವಾಗಿಯೇ ಉಪಯೋಗಿಸಲಾಗುತ್ತಿದೆ. ಇದು ಉರಿಯೂತಶಮನ ಗುಣಲಕ್ಷಣಗಳನ್ನು ಹೊಂದಿದ್ದು, ಸಾಮಾನ್ಯ ಸೋಂಕುಗಳನ್ನು ತಡೆಯಲು ಖಾಲಿ ಹೊಟ್ಟೆಯಲ್ಲಿ ಬೆಳ್ಳಳ್ಳಿ ತಿನ್ನಲು ತಜ್ಞರು ಸಲಹೆಗಳನ್ನು ನೀಡುತ್ತಾರೆ. ರಾತ್ರಿ ಹೊತ್ತು ಕಚ್ಛಾ ಬೆಳ್ಳುಳ್ಳಿ ಸೇವಿಸಿದರೆ ಗೊರಕೆಯನ್ನು ಕಡಿಮೆ ಮಾಡಿಕೊಳ್ಳಬಹುದು.

* ಈರುಳ್ಳಿ: ಪ್ರತೀ ಮನೆಯ ಅಡುಗೆ ಕೋಣೆಯಲ್ಲಿ ಈರುಳ್ಳಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಈ ಈರುಳ್ಳಿ ಕೇವಲ ಆ್ಯಂಟಿಆಕ್ಸಿಡೆಂಟ್​ಗಳನ್ನು ಮಾತ್ರ ಒಳಗೊಂಡಿರುವುದಲ್ಲದೆ, ನಿಮ್ಮ ಮೂಗಿನ ಮಾರ್ಗಗಳನ್ನು ತೆರವುಗೊಳಿಸುವ ನೈಸರ್ಗಿಕ ಡಿಕೊಂಗಸ್ಟೆಂಟ್ ಗುಣಲಕ್ಷಣಗಳುನ್ನೂ ಹೊಂದಿದೆ. ನಿಮ್ಮ ಊಟದಲ್ಲಿ ಬೇಯಿಸಿದ ಈರುಳ್ಳಿ ಇರಲಿ. ಅದು ನಿಮ್ಮ ಗೊರಕೆಯನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net