More

    ತ್ರಿವಳಿ ಶತಕ ಸಾಧನೆಯ ಜತೆಗೆ ಹಲವು ದಾಖಲೆ ಮುರಿದ ದಕ್ಷಿಣ ಆಫ್ರಿಕಾ: ಆರಂಭಿಕ ಪಂದ್ಯದಲ್ಲಿ ಬೃಹತ್ ಗೆಲುವು

    ನವದೆಹಲಿ: ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ (100 ರನ್, 84 ಎಸೆತ, 12 ಬೌಂಡರಿ, 3 ಸಿಕ್ಸರ್), ರಸ್ಸೀ ವಾನ್ ಡರ್ ಡುಸೆನ್ (108 ರನ್, 110 ಎಸೆತ,13 ಬೌಂಡರಿ, 2 ಸಿಕ್ಸರ್) ಮತ್ತು ಏಡೆನ್ ಮಾರ್ಕ್ರಮ್ (106 ರನ್, 54 ಎಸೆತ, 14 ಬೌಂಡರಿ, 3 ಸಿಕ್ಸರ್) ಅವರ ತ್ರಿವಳಿ ಶತಕ ಸಾಧನೆಯ ನೆರವಿನಿಂದ ಹಲವು ದಾಖಲೆಗಳನ್ನು ಮುರಿದ ದಕ್ಷಿಣ ಆಫ್ರಿಕಾ ತಂಡ, ಐಸಿಸಿ ಏಕದಿನ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ಎದುರು 102 ರನ್‌ಗಳಿಂದ ಬೃಹತ್ ಗೆಲುವು ದಾಖಲಿಸಿದೆ.
    ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ, ರನ್‌ಮಳೆ ಹರಿಸಿ 5 ವಿಕೆಟ್‌ಗೆ 428 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ವಿಕೆಟ್ ಕೀಪರ್- ಬ್ಯಾಟರ್ ಕುಸಲ್ ಮೆಂಡಿಸ್ (76 ರನ್, 42 ಎಸೆತ, 4 ಬೌಂಡರಿ, 8 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಚರಿತ್ ಅಸಲಂಕಾ (79 ರನ್, 65 ಎಸೆತ, 8 ಬೌಂಡರಿ, 4 ಸಿಕ್ಸರ್) ಹೋರಾಟಯುತ ಬ್ಯಾಟಿಂಗ್ ನಡುವೆ ಶ್ರೀಲಂಕಾ 44.5 ಓವರ್‌ಗಳಲ್ಲಿ 326 ರನ್‌ಗಳಿಗೆ ಸರ್ವಪತನ ಕಂಡಿತು.

    ದಕ್ಷಿಣ ಆಫ್ರಿಕಾ: 5 ವಿಕೆಟ್‌ಗೆ 428 (ಬವುಮಾ 8, ಡಿ ಕಾಕ್ 100, ಡುಸೆನ್ 108, ಮಾರ್ಕ್ರಮ್ 106, ಮಿಲ್ಲರ್ 39, ಕ್ಲಾಸೆನ್ 32, ಮಧುಶಂಕ 86ಕ್ಕೆ 2). ಶ್ರೀಲಂಕಾ: 44.5 ಓವರ್‌ಗಳಲ್ಲಿ 326 (ಪೆರೇರಾ 7, ಮೆಂಡಿಸ್ 76, ಸಧೀರ 23, ಅಸಲಂಕಾ 79, ಶನಕ 68, ಕೋಟ್‌ಜೀ 68ಕ್ಕೆ 3, ರಬಾಡ 56ಕ್ಕೆ 2).

    *754: ವಿಶ್ವಕಪ್ ಪಂದ್ಯವೊಂದರಲ್ಲಿ ದಾಖಲಾದ ಅತ್ಯಧಿಕ ರನ್ (754) ಇದಾಗಿದೆ. 2019 ವಿಶ್ವಕಪ್ ಆಸೀಸ್-ಬಾಂಗ್ಲಾ ಪಂದ್ಯದಲ್ಲಿ 714 ರನ್ ಸಿಡಿದಿದ್ದು ಹಿಂದಿನ ದಾಖಲೆ.

    49: ಏಡೆನ್ ಮಾರ್ಕ್ರಮ್ (49 ಎಸೆತ) ಏಕದಿನ ವಿಶ್ವಕಪ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಐರ್ಲೆಂಡ್‌ನ ಕೆವಿನ್ ಓಬ್ರಿಯಾನ್ (50) ದಾಖಲೆ ಮುರಿದರು.

    3: ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇನಿಂಗ್ಸ್‌ವೊಂದರಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದರು. ಏಕದಿನದಲ್ಲಿ ದಕ್ಷಿಣ ಆಫ್ರಿಕಾ ಒಟ್ಟಾರೆ 3ನೇ ಬಾರಿ ಈ ಸಾಧನೆ ಮಾಡಿತು.

    428: ದಕ್ಷಿಣ ಆಫ್ರಿಕಾ ವಿಶ್ವಕಪ್‌ನಲ್ಲಿ ಗರಿಷ್ಠ ಮೊತ್ತ ಪೇರಿಸಿದ ಸಾಧನೆ ಮಾಡಿತು. 2015ರಲ್ಲಿ ಆ್ಘನ್ ಎದುರು ಆಸ್ಟ್ರೇಲಿಯಾ 417 ರನ್‌ಗಳಿಸಿದ್ದು ಹಿಂದಿನ ದಾಖಲೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts