More

    ಸಂಗೀತಾ ಹೊಸ ಸಸ್ಪೆನ್ಸ್! ವೈಭವ್ ಪ್ರಶಾಂತ್ ನಿರ್ದೇಶನದ ‘ಕ್ಲಾಂತ’ ಚಿತ್ರದ ಟ್ರೇಲರ್​ ರಿಲೀಸ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ಎರಡನೇ ಸಲ’, ‘ಕಿಸ್ಮತ್’, ‘ಕಪಟ ನಾಟಕ ಪಾತ್ರಧಾರಿ’ ಸೇರಿ 15ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ನಟಿ ಸಂಗೀತಾ ಭಟ್‌ಗೆ ಸಲ್ಲುತ್ತದೆ. 2020ರಲ್ಲಿ ತೆರೆಕಂಡ ‘ಆದ್ಯಾ’ ಚಿತ್ರದ ಬಳಿಕ ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಇದೀಗ ‘ಕ್ಲಾಂತ’ ಸಿನಿಮಾ ಮೂಲಕ ಸಂಗೀತಾ ವಾಪಸ್ಸಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.

    ಇದನ್ನೂ ಓದಿ : ಅನ್​ಲಾಕ್​ ಆಯಿತು ‘ಮೂಡ್ಸ್​ ಆಫ್​ ರಾಘವ’ ; ಮಿಲಿಂದ್​, ರೇಚೆಲ್ ನಟಿಸುತ್ತಿರುವ ಚಿತ್ರ

    ಸಂಗೀತಾ ಹೊಸ ಸಸ್ಪೆನ್ಸ್! ವೈಭವ್ ಪ್ರಶಾಂತ್ ನಿರ್ದೇಶನದ 'ಕ್ಲಾಂತ' ಚಿತ್ರದ ಟ್ರೇಲರ್​ ರಿಲೀಸ್​

    ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ‘ರಂಗನ್ ಸ್ಟೈಲ್’, ‘ದಗಲು ಬಾಜಿಲು’ ಸಿನಿಮಾಗಳನ್ನು ನಿರ್ದೇಶಿಸಿದ್ದ ವೈಭವ್ ಪ್ರಶಾಂತ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ದಟ್ಟ ಅರಣ್ಯಕ್ಕೆ ಬರುವ ಯುವಜೋಡಿಯ ಮೇಲೆ ಖತರ್ನಾಕ್ ಗ್ಯಾಂಗ್ ಒಂದು ದಾಳಿ ಮಾಡುತ್ತದೆ. ದುಷ್ಟರೊಂದಿಗೆ ಆ ಜೋಡಿ ಹೇಗೆ ಹೋರಾಡುತ್ತದೆ? ಹೇಗೆ ತಪ್ಪಿಸಿಕೊಳ್ಳುತ್ತಾರೆ? ಎಂಬುದನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಚಿತ್ರಕ್ಕೆ ವಿಘ್ನೇಷ್​ ನಾಯಕನಾಗಿದ್ದು, ಅವರಿಗೆ ಸಂಗೀತಾ ಜೋಡಿಯಾಗಿದ್ದಾರೆ.

    ಇದನ್ನೂ ಓದಿ : ‘ಜವಾನ್’ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 30: ವಿಶ್ವಾದ್ಯಂತ 1100 ಕೋಟಿ ಗಳಿಸಿದ ಶಾರುಖ್​​ ಚಿತ್ರ

    ಸಂಗೀತಾ ಹೊಸ ಸಸ್ಪೆನ್ಸ್! ವೈಭವ್ ಪ್ರಶಾಂತ್ ನಿರ್ದೇಶನದ 'ಕ್ಲಾಂತ' ಚಿತ್ರದ ಟ್ರೇಲರ್​ ರಿಲೀಸ್​

    ಜತೆಗೆ ಶೋಭರಾಜ್, ವೀಣಾ ಸುಂದರ್, ದೀಪಿಕಾ, ಪ್ರವೀಣ್ ಜೈನ್, ಯುವ, ಸ್ವಪ್ನ ತಾರಾಗಣದಲ್ಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಗುಂಡ್ಯ, ಕಳಸ ಸುತ್ತಮುತ್ತ ಕಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಎಸ್.ಪಿ. ಚಂದ್ರಕಾಂತ್ ಸಂಗೀತ ನೀಡಿದ್ದು, ಪಿ.ಆರ್. ಸೌಂದರ್ ರಾಜ್ ಸಂಕಲನ ಹಾಗೂ ಮೋಹನ್ ಲೋಕನಾಥ್ ಛಾಯಾಗ್ರಹಣವಿರಲಿದೆ. ಸದ್ಯ ‘ಕ್ಲಾಂತ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ ರಿಲೀಸ್‌ಗೆ ರೆಡಿಯಾಗಲಿದೆ.

    ಸಂಗೀತಾ ಹೊಸ ಸಸ್ಪೆನ್ಸ್! ವೈಭವ್ ಪ್ರಶಾಂತ್ ನಿರ್ದೇಶನದ 'ಕ್ಲಾಂತ' ಚಿತ್ರದ ಟ್ರೇಲರ್​ ರಿಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts