More

    ಅನ್​ಲಾಕ್​ ಆಯಿತು ‘ಮೂಡ್ಸ್​ ಆಫ್​ ರಾಘವ’ ; ಮಿಲಿಂದ್​, ರೇಚೆಲ್ ನಟಿಸುತ್ತಿರುವ ಚಿತ್ರ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಸಿನಿಮಾ ‘ಅನ್​ಲಾಕ್​ ರಾಘವ’. ಚಿತ್ರಕ್ಕೆ ಮಿಲಿಂದ್​ ನಾಯಕನಾಗಿದ್ದು, ಅವರಿಗೆ ‘ಲವ್​ ಮಾಕ್ಟೇಲ್​ 2’ ಖ್ಯಾತಿಯ ರೇಚೆಲ್​ ಡೇವಿಡ್​ ಜೋಡಿಯಾಗಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ನಾಯಕನನ್ನು ಪರಿಚಯಿಸುವ ‘ಮೂಡ್ಸ್​ ಆಫ್​ ರಾಘವ’ ಎಂಬ ಟೀಸರ್​ ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ : ಮದುವೆ ಕಥೆನಾ? ಪ್ರೇಮಕಥೆನಾ? ಕುತೂಹಲ ಮೂಡಿಸಿದೆ ದಿವ್ಯಾ ಉರುಡುಗ ವೈರಲ್ ವಿಡಿಯೋ

    ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್​ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ‘ಅನ್​ಲಾಕ್​ ರಾಘವ’ ಚಿತ್ರಕ್ಕೆ ಲವಿತ್​ ಛಾಯಾಗ್ರಹಣ, ಅನೂಪ್​ ಸೀಳಿನ್​ ಸಂಗೀತ ಹಾಗೂ ಅಜಯ್​ ಕುಮಾರ್​ ಸಂಕಲನವಿರಲಿದೆ. ಉಳಿದಂತೆ ಧನು ಮಾಸ್ಟರ್​ ಮತ್ತು ಮುರಳಿ ಮಾಸ್ಟರ್​ ನೃತ್ಯನಿರ್ದೇಶನ ಹಾಗೂ ವಿನೋದ್​ ಮಾಸ್ಟರ್​ ಮತ್ತು ಅರ್ಜುನ್​ ಮಾಸ್ಟರ್​ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

    ಇದನ್ನೂ ಓದಿ : ನನ್ನ ಗಂಡ ಹೇಗಿರಬೇಕೆಂದರೆ… ; ಕನಸಿನ ರಾಜಕುಮಾರನ ಬಗ್ಗೆ ನಟಿ ಕೃತಿ ಸನನ್ ಮಾತು

    ಅನ್​ಲಾಕ್​ ಆಯಿತು 'ಮೂಡ್ಸ್​ ಆಫ್​ ರಾಘವ' ; ಮಿಲಿಂದ್​, ರೇಚೆಲ್ ನಟಿಸುತ್ತಿರುವ ಚಿತ್ರ

    ಚಿತ್ರದಲ್ಲಿ ಮಿಲಿಂದ್​ ಗೌತಮ್​, ರೇಚೆಲ್​ ಡೇವಿಡ್​ ಜತೆ ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್ ಹಾಗೂ ಮತ್ತಿತರ ಕಲಾವಿದರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ‘ಅನ್ ಲಾಕ್ ರಾಘವ’ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

    ಅನ್​ಲಾಕ್​ ಆಯಿತು 'ಮೂಡ್ಸ್​ ಆಫ್​ ರಾಘವ' ; ಮಿಲಿಂದ್​, ರೇಚೆಲ್ ನಟಿಸುತ್ತಿರುವ ಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts