More

    ಸೋಮವಾರ 20% ಬಂಪರ್​ ಏರಿಕೆ ಕಂಡ ಷೇರುಗಳು: ಮಂಗಳವಾರ ಈ 5 ಸ್ಟಾಕ್​ಗಳಲ್ಲಿ ಲಾಭ ದೊರೆಯಲಿದೆ ಎನ್ನುತ್ತಾರೆ ತಜ್ಞರು

    ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಕೆಲ ದಿನಗಳಿಂದ ಹಿನ್ನಡೆ ಅನುಭವಿಸಿದೆ. ಸೋಮವಾರ ಕೂಡ ಮಾರುಕಟ್ಟೆಯಲ್ಲಿ ಕುಸಿತವಾಗಿದೆ. ಈ ನಡುವೆ ಮಂಗಳವಾರ, ಫೆ. 13ರಂದು ಮಾರುಕಟ್ಟೆಯಲ್ಲಿ ಕೆಲ ಷೇರುಗಳಲ್ಲಿ ಬಂಪರ್ ಲಾಭವಾಗಬಹುದು ಎಂಬುದು ತಜ್ಞ ಅಂದಾಜು.

    ಸೋಮವಾರದ ಮಾರುಕಟ್ಟೆಯ ಕುಸಿತದ ನಡುವೆ, ಕೆಲವು ಷೇರುಗಳು 20 ಪ್ರತಿಶತದಷ್ಟು ಹೆಚ್ಚಳವನ್ನು ಹೊಂದಿದ್ದವು. ಸೋಮವಾರದ ಮಾರುಕಟ್ಟೆಯಲ್ಲಿ ಖರೀದಿದಾರರು ಈ ಷೇರುಗಳ ಮೇಲೆ ಗಮನ ನೀಡಿದ್ದಾರೆ. ಮಂಗಳವಾರದ ಮಾರುಕಟ್ಟೆಯಲ್ಲೂ ಈ ಷೇರುಗಳು ಏರಿಕೆ ಕಾಣುವ ಸಾಧ್ಯತೆಯಿದೆ.

    ಮಂಗಳವಾರದ ಮಾರುಕಟ್ಟೆಗೆ ಯಾವ ಷೇರುಗಳು ಏರಿಕೆಯಾಗಬಹುದು ಮತ್ತು ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡಬಹುದು ಎಂಬುದನ್ನು ನೋಡೋಣ.

    ಫ್ಯಾಬಿನೋ ಲೈಫ್ ಸೈನ್ಸಸ್:

    ಸೋಮವಾರ ಖರೀದಿದಾರರು ಫ್ಯಾಬಿನೋ ಲೈಫ್ ಸೈನ್ಸಸ್‌ನ ಸ್ಟಾಕ್‌ನಲ್ಲಿ ಉತ್ತಮ ಆಸಕ್ತಿಯನ್ನು ತೋರಿಸಿದರು. ಹೀಗಾಗಿ, ಈ ಸ್ಟಾಕ್ 20 ಪ್ರತಿಶತದಷ್ಟು ಏರಿಕೆಯಾದ ನಂತರ ರೂ 41.76 ರ ಮಟ್ಟದಲ್ಲಿ ಕೊನೆಗೊಂಡಿತು. ಈ ಸ್ಟಾಕ್‌ನಲ್ಲಿ ಇನ್ನೂ ಖರೀದಿ ಮನೋಭಾವವಿದ್ದು, ಈ ಷೇರು ಮಂಗಳವಾರದ ಮಾರುಕಟ್ಟೆಯಲ್ಲೂ ಉತ್ತಮ ಬೆಳವಣಿಗೆಯನ್ನು ಕಾಣಬಹುದು.

    ಭಿಲ್ವಾರ ಸ್ಪಿನ್ನರ್ಸ್:

    ಸೋಮವಾರ ಭಿಲ್ವಾರಾ ಸ್ಪಿನ್ನರ್ಸ್‌ ಷೇರು ಬೆಲೆಯಲ್ಲಿ ಸಾಕಷ್ಟು ಏರಿಕೆ ಇತ್ತು. 20 ಪ್ರತಿಶತದಷ್ಟು ಲಾಭದೊಂದಿಗೆ ರೂ 141.60 ರ ಮಟ್ಟದಲ್ಲಿ ಮುಕ್ತಾಯವಾಯಿತು. ಈ ಸ್ಟಾಕ್‌ನಲ್ಲಿ ಖರೀದಿದಾರರು ಪ್ರಬಲವಾಗಿ ಮುಂದುವರಿದಿದ್ದು, ಭವಿಷ್ಯದಲ್ಲಿಯೂ ಹೆಚ್ಚಿನ ಖರೀದಿ ಮುಂದುವರಿಯಬಹುದು. ಮಂಗಳವಾರವೂ ಈ ಷೇರು ಬೇಡಿಕೆ ಉಳಿಸಿಕೊಳ್ಳಬಹುದಾಗಿದೆ.

    ಓರಿಯಂಟ್ ಪ್ರೆಸ್ ಲಿಮಿಟೆಡ್:

    ಓರಿಯಂಟ್ ಪ್ರೆಸ್ ಲಿಮಿಟೆಡ್‌ನ ಷೇರುಗಳು ಸೋಮವಾರ ನಿರಂತರ ಖರೀದಿಗೆ ಸಾಕ್ಷಿಯಾದವು. ಈ ಸ್ಟಾಕ್ ಸೋಮವಾರ ಶೇಕಡಾ 20ರಷ್ಟು ಗಳಿಕೆಯೊಂದಿಗೆ ರೂ 131.76 ಮಟ್ಟ ತಲುಪಿತು. ಈ ಸ್ಟಾಕ್ ಮಂಗಳವಾರದ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸಬಹುದಾಗಿದ್ದು, ಹೂಡಿಕೆದಾರರು ಇದರ ಏರಿಕೆಯಿಂದ ಲಾಭ ಪಡೆಯಬಹುದು.

    ಥಕ್ಕರ್ಸ್ ಡೆವಲಪರ್ಸ್:

    ಕಳೆದ ಕೆಲವು ದಿನಗಳಿಂದ ಥಕ್ಕರ್ ಡೆವಲಪರ್‌ಗಳಲ್ಲಿ ಖರೀದಿ ಮನೋಭಾವವಿದೆ. ಸೋಮವಾರದ ಮಾರುಕಟ್ಟೆಯಲ್ಲೂ ಶೇ. 20ರಷ್ಟು ಏರಿಕೆ ಕಂಡು ಕಂಡು 245.45 ರೂಪಾಯಿ ತಲುಪಿದವು. ಮಂಗಳವಾರದ ಮಾರುಕಟ್ಟೆಯಲ್ಲೂ ಈ ಸ್ಟಾಕ್‌ನಲ್ಲಿ ಬೆಳವಣಿಗೆಯನ್ನು ಕಾಣಬಹುದು. ಏಕೆಂದರೆ ಹೂಡಿಕೆದಾರರು ಈ ಸ್ಟಾಕ್​ ಖರೀದಿ ಮುಂದುವರಿಸಿದ್ದಾರೆ.

    ಅನುಹ್ ಫಾರ್ಮಾ:

    ಸೋಮವಾರ ಅರುಹ್ ಫಾರ್ಮಾ ಷೇರುಗಳಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ಶೇ.20 ರಷ್ಟು ಏರಿಕೆಯಾದ ನಂತರ ಈ ಷೇರಿನ ಬೆಲೆ 201.60 ರೂ. ಮುಟ್ಟಿತು. ಈ ಷೇರುಗಳ ಬೆಲೆ ಏರುಗತಿ ಮಂಗಳವಾರದ ಮಾರುಕಟ್ಟೆಯಲ್ಲೂ ಮುಂದುವರಿಯಬಹುದಾಗಿದ್ದು, ಖರೀದಿದಾರರು ದೊಡ್ಡ ಲಾಭ ದಾಖಲಿಸಬಹುದು.

    ಶಾರ್ಕ್ ಟ್ಯಾಂಕ್​ನ ನ್ಯಾಯಾಧೀಶ ಅಮನ್ ಗುಪ್ತಾ ಹೂಡಿಕೆಗೆ ಅದ್ಭುತ ಲಾಭ: ಎರಡೇ ವರ್ಷಗಳಲ್ಲಿ 20 ಲಕ್ಷವಾಯ್ತು 6 ಕೋಟಿ ರೂಪಾಯಿ

    ಈ ಷೇರಿನಲ್ಲಿ ನೀವು 1 ಲಕ್ಷ ಹೂಡಿಕೆ ಮಾಡಿದ್ದರೆ ಅದೀಗ 13 ಕೋಟಿ ದಾಟುತ್ತಿತ್ತು: ಹೂಡಿಕೆದಾರರನ್ನು ಕುಬೇರರನ್ನಾಗಿ ಮಾಡಿದ ಮದ್ಯ ತಯಾರಿಕೆ ಕಂಪನಿ ಷೇರಿಗೆ ಈಗ ಮತ್ತೆ ಬೇಡಿಕೆ

    ಷೇರುಗಳ ಬೆಲೆ ಒಂದೇ ವರ್ಷದಲ್ಲಿ 1,437.61 % ಏರಿಕೆ, ಸತತ 2 ದಿನ ಅಪ್ಪರ್​ ಸರ್ಕ್ಯೂಟ್​: ಬೋನಸ್​ ಸ್ಟಾಕ್​ ಬಹುಮಾನ ಸಿಗಲಿರುವ ಷೇರಿಗೆ ಭರ್ಜರಿ ಡಿಮ್ಯಾಂಡು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts