More

    ಈ ಷೇರಿನಲ್ಲಿ ನೀವು 1 ಲಕ್ಷ ಹೂಡಿಕೆ ಮಾಡಿದ್ದರೆ ಅದೀಗ 13 ಕೋಟಿ ದಾಟುತ್ತಿತ್ತು: ಹೂಡಿಕೆದಾರರನ್ನು ಕುಬೇರರನ್ನಾಗಿ ಮಾಡಿದ ಮದ್ಯ ತಯಾರಿಕೆ ಕಂಪನಿ ಷೇರಿಗೆ ಈಗ ಮತ್ತೆ ಬೇಡಿಕೆ

    ಮುಂಬೈ: ಹರಿಯಾಣದ ಮದ್ಯ ತಯಾರಿಕೆ ಕಂಪನಿ ಪಿಕ್ಕಾಡಿಲಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್​ (Piccadilly Agro Industries Ltd)ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 192 ಕೋಟಿ ರೂ.ಗಳ ದಾಖಲೆಯ ಆದಾಯವನ್ನು ಗಳಿಸಿದೆ. ಈ ಅವಧಿಯಲ್ಲಿ, ಕಂಪನಿಯ ನಿವ್ವಳ ಲಾಭದ ಪ್ರಮಾಣವು 322.5 ಪ್ರತಿಶತದಷ್ಟು ಹೆಚ್ಚಾಗಿದೆ.

    ಈ ಅದ್ಭುತ ಫಲಿತಾಂಶದ ನಂತರ, ಪಿಕ್ಕಾಡಿಲಿಯ ಷೇರು ಸೋಮವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಅಪ್ಪರ್ ಸರ್ಕ್ಯೂಟ್‌ ಹಿಟ್ ಮುಟ್ಟಿ, ಸಾರ್ವಕಲಿಕ ಗರಿಷ್ಠ ಬೆಲೆಯಾದ 332.50 ರೂಪಾಯಿ ಮುಟ್ಟಿ ದಾಖಲೆ ಬರೆಯಿತು.

    ಪಿಕಾಡಿಲಿ ಆಗ್ರೋ ಲಿಮಿಟೆಡ್‌ನ ಬ್ರಾಂಡ್ ಇಂದ್ರಿ ದೀಪಾವಳಿ 2023 ಆವೃತ್ತಿಯು ಕಳೆದ ವರ್ಷ ಅತ್ಯುತ್ತಮ ವಿಸ್ಕಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

    ಕಳೆದ ಆರು ತಿಂಗಳಲ್ಲಿ, ಈ ಕಂಪನಿಯ ಷೇರು ತನ್ನ ಹೂಡಿಕೆದಾರರ ಹಣವನ್ನು ಅಂದಾಜು ನಾಲ್ಕು ಪಟ್ಟು ಹೆಚ್ಚಿಸಿದೆ. ಈ ಅವಧಿಯಲ್ಲಿ 1 ಲಕ್ಷ ರೂಪಾಯಿಯ ಹೂಡಿಕೆಯನ್ನು 3.85 ಲಕ್ಷ ರೂಪಾಯಿಗೆ ಏರಿಸಿದೆ.

    ಈ ಷೇರು ಹೂಡಿಕೆದಾರರಿಗೆ ಇದುವರೆಗೆ ಶೇಕಡಾ ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿದೆ. ಆರಂಭದಿಂದ ಇಲ್ಲಿಯವರೆಗೆ ಮಾತನಾಡುವುದಾದರೆ ಜುಲೈ 11, 1997 ರಂದು ಕೇವಲ 25 ಪೈಸೆ ಮೌಲ್ಯದ ಈ ಷೇರು ಈಗ 332.50 ರೂಪಾಯಿಗೆ ತಲುಪುವ ಮೂಲಕ 1,32,900 ಪ್ರತಿಶತದಷ್ಟು ಆದಾಯವನ್ನು ನೀಡಿದೆ. 1997ರಲ್ಲಿ ಈ ಷೇರಿನಲ್ಲಿ ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು ಈಗ 13.29 ಕೋಟಿ ರೂಪಾಯಿ ಆಗುತ್ತಿತ್ತು.

    ಪಿಕಾಡಿಲಿ ಆಗ್ರೋ ಲಿಮಿಟೆಡ್‌ನ ಷೇರುಗಳು ಕಳೆದ 5 ದಿನಗಳಲ್ಲಿ ಶೇಕಡಾ 8 ಕ್ಕಿಂತ ಹೆಚ್ಚು ಆದಾಯವನ್ನು ನೀಡಿವೆ. ಕಳೆದ ವರ್ಷದಲ್ಲಿ, ತನ್ನ ಹೂಡಿಕೆದಾರರ 1 ಲಕ್ಷ ರೂಪಾಯಿಯನ್ನು 7.71 ಲಕ್ಷ ರೂಪಾಯಿಗೆ ಪರಿವರ್ತಿಸಿದೆ. ಈ ಷೇರಿನ 52 ವಾರಗಳ ಕನಿಷ್ಠ ದರ 38.70 ರೂಪಾಯಿ ಇದೆ.

    ಡಿಸೆಂಬರ್ ತ್ರೈಮಾಸಿಕದಲ್ಲಿ 55.89 ಶೇಕಡಾ ಆದಾಯದ ಬೆಳವಣಿಗೆಯನ್ನು ಈ ಕಂಪನಿಸಾಧಿಸಿದೆ.

    “ಮೂರನೇ ತ್ರೈಮಾಸಿಕದಲ್ಲಿ ಸಾಧಿಸಿದ ಅಸಾಧಾರಣ ಬೆಳವಣಿಗೆಯು ನಮ್ಮ ಇಡೀ ತಂಡದ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ನಾವೀನ್ಯತೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಪಿಕ್ಕಾಡಿಲಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಸ್ಥಾಪಕ ಸಿದ್ಧಾರ್ಥ್ ಶರ್ಮಾ ಹೇಳಿದ್ದಾರೆ.

    ಪಿಕ್ಯಾಡಿಲಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ ಎಂಬುದು ಡಿಸ್ಟಿಲರಿ-ಸಂಬಂಧಿತ ಉತ್ಪನ್ನಗಳು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ತೊಡಗಿರುವ ಭಾರತೀಯ ಕಂಪನಿಯಾಗಿದೆ. ಕಂಪನಿಯ ವಿಭಾಗಗಳು ಸಕ್ಕರೆ ಮತ್ತು ಡಿಸ್ಟಿಲರಿಗಳನ್ನು ಒಳಗೊಂಡಿವೆ.

    ಸಕ್ಕರೆಯ ವಿಭಾಗವು ಸಕ್ಕರೆ ಪುಡಿ, ಕಾಕಂಬಿ ಮತ್ತು ಬಗಾಸ್ ಅನ್ನು ಒಳಗೊಂಡಿದೆ. ಡಿಸ್ಟಿಲರಿ ವಿಭಾಗವು ಎಥೆನಾಲ್ ಜೊತೆಗೆ ಕಾರ್ಬನ್ ಡೈಆಕ್ಸೈಡ್ ಅನಿಲದ ಮಾಲ್ಟ್‌ಗಳನ್ನು ಉತ್ಪಾದಿಸುತ್ತದೆ.

    ಸಕ್ಕರೆ ಕಾರ್ಖಾನೆ ಸಕ್ಕರೆ ಕಾರ್ಖಾನೆಯು ಅಂದಾಜು 667800 ಕ್ವಿಂಟಾಲ್ ಸಕ್ಕರೆಯನ್ನು ಉತ್ಪಾದಿಸಿದೆ. ಡಿಸ್ಟಿಲರಿ ವಲಯದಲ್ಲಿ ಅಂದಾಜು 58,40,450 ಬಾಟಲ್‌ಗಳು ಮಾಲ್ಟ್​ ಮತ್ತು 9121 ಬ್ಯಾರೆಲ್‌ಗಳ ಮಾರ್ಷಲ್ ರಮ್‌ಗಳು ಕಂಟ್ರಿ ಲಿಕ್ಕರ್ ವರ್ಗದಡಿಯಲ್ಲಿವೆ.

    ಈ ಕಂಪನಿಯು 815 ಕೇಸ್‌ಗಳ ಗೋಲ್ಡನ್ ವಿಂಗ್‌ನ ವಿಸ್ಕಿಯನ್ನು, 49371 ವಿಸ್ಲರ್ ವಿಸ್ಕಿಯ ಬಾಟಲಿಗಳನ್ನು ಮತ್ತು 15145 ಕೇಸ್‌ಗಳ ಇಂದ್ರಿ ನಂ. 1 ಮತ್ತು 253 ಕ್ಯಾಮಿಕರ ರಮ್‌ಗಳನ್ನು ಉತ್ಪಾದಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts