284 ರಿಂದ 2 ರೂಪಾಯಿಗೆ ಕುಸಿದ ಷೇರು: ಮಂಗಳವಾರ 20% ಏರಿಕೆ ಕಂಡು ಅಪ್ಪರ್​ ಸರ್ಕ್ಯೂಟ್​ ಹಿಟ್​

tuni
Published on

ಮುಂಬೈ: ಅನೇಕ ಪೆನ್ನಿ ಸ್ಟಾಕ್‌ಗಳು ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆದವು. ಇಂತಹ ಪೆನ್ನಿ ಷೇರುಗಳಲ್ಲಿ ಒಂದು ಜವಳಿ ಕಂಪನಿಯಾದ ಟುನಿ ಟೆಕ್ಸ್‌ಟೈಲ್ ಮಿಲ್ಸ್ ಲಿಮಿಟೆಡ್ (Tuni Textile Mills). ವಹಿವಾಟಿನ ಸಮಯದಲ್ಲಿ ಈ ಸ್ಟಾಕ್ 20 ಪ್ರತಿಶತದಷ್ಟು ಅಪ್ಪರ್ ಸರ್ಕ್ಯೂಟ್ ಹಿಟ್​ ಆಗಿದೆ. ಈ ಷೇರಿನ ಹಿಂದಿನ ದಿನದ ಮುಕ್ತಾಯ ಬೆಲೆ ರೂ 1.77 ಆಗಿತ್ತು. ಈಗ ಬೆಲೆ ರೂ 2.12 ತಲುಪಿದೆ.

ಕಳೆದ ಜನವರಿ 12 ರಂದು ಈ ಷೇರಿನ ಬೆಲೆ 2.70 ರೂ. ಇತ್ತು. ಇದು 52 ವಾರಗಳ ಗರಿಷ್ಠ ಬೆಲೆ ಆಗಿದೆ. ಅಕ್ಟೋಬರ್ 25, 2023 ರಂದು ಈ ಷೇರು ರೂ 1.34 ಇತ್ತು. ಇದು 52 ವಾರಗಳ ಕನಿಷ್ಠ ಬೆಲೆಯಾಗಿದೆ.

ಈ ಸ್ಟಾಕ್ ಬೆಲೆ ಕಳೆದ ಒಂದು ತಿಂಗಳಲ್ಲಿ ಶೇಕಡಾ 36 ರಷ್ಟು ಹೆಚ್ಚಳವಾಗಿದೆ. ಒಂದು ವರ್ಷದಲ್ಲಿ 15% ಏರಿಕೆಯಾಗಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 284.90 ರೂ. ಮತ್ತು ಕನಿಷ್ಠ ಬೆಲೆ 19 ಪೈಸೆಯಾಗಿದೆ.

ಈ ಕಂಪನಿಯಲ್ಲಿ ಪ್ರವರ್ತಕರು ಶೇಕಡಾ 21.73 ರಷ್ಟು ಪಾಲನ್ನು ಹೊಂದಿದ್ದಾರೆ. ಸಾರ್ವಜನಿಕ ಷೇರುಗಳು ಶೇಕಡಾ 78.27 ಇದೆ.

ಸಿಂಥೆಟಿಕ್ ಶರ್ಟಿಂಗ್ ತಯಾರಿಕೆಯಲ್ಲಿ ಈ ಕಂಪನಿ ತೊಡಗಿದೆ. ಕಂಪನಿಯನ್ನು 1987 ರಲ್ಲಿ ಸ್ಥಾಪಿಸಲಾಯಿತು. ಕಂಪನಿಯ ನೋಂದಾಯಿತ ಕಚೇರಿ ಮುಂಬೈನಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net