

ಮುಂಬೈ: ಅದಾನಿ ಪೋರ್ಟ್ಸ್ ತನ್ನ ಲಾಜಿಸ್ಟಿಕ್ಸ್ ವ್ಯವಹಾರಕ್ಕಾಗಿ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ನಿರಂತರವಾಗಿ ಹೂಡಿಕೆ ಮಾಡುತ್ತಿದೆ. ಇದು ಕಂಪನಿಯ ದೀರ್ಘಾವಧಿಯ ನಗದು ಹರಿವು ಮತ್ತು ಗಳಿಕೆಯನ್ನು ಸುಧಾರಿಸುವ ನಿರೀಕ್ಷೆಯಿದೆ ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ಹೇಳಿದೆ.
ಅದಾನಿ ಪೋರ್ಟ್ಸ್ & ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (Adani Ports & Special Economic Zone Ltd -APSEZ) ಷೇರಿನ ಗುರಿ ಬೆಲೆಯನ್ನು (ಟಾರ್ಗೆಟ್ ಪ್ರೈಸ್) ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ಪರಿಷ್ಕರಿಸಿದೆ, ಏಕೆಂದರೆ ಬ್ರೋಕರೇಜ್ ತನ್ನ 'ಖರೀದಿ' ರೇಟಿಂಗ್ ಅನ್ನು ಸ್ಟಾಕ್‌ನಲ್ಲಿ ಉಳಿಸಿಕೊಂಡಿದೆ, ಇದು ಮುಂದೆ 21 ರಷ್ಟು ಏರಿಕೆಯಾಗಬಹುದು ಎಂದು ಸೂಚಿಸುತ್ತದೆ.
2023-24 ಹಣಕಾಸು ವರ್ಷದಲ್ಲಿ APSEZ ತನ್ನ ಪರಿಷ್ಕೃತ ಸರಕು ಸಾಗಣೆ ಪ್ರಮಾಣವನ್ನು 400 mmt (ಮೆಟ್ರಿಕ್ ಮಿಲಿಯನ್ ಟನ್) ದಾಟುವ ಹಾದಿಯಲ್ಲಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.
ಹಣಕಾಸು ವರ್ಷ 24-26 ರಲ್ಲಿ ಕಂಪನಿಯು ಶೇಕಡಾ 10 ರಷ್ಟು ಗಾತ್ರದಲ್ಲಿ ಬೆಳವಣಿಗೆಯನ್ನು ಮತ್ತು ಮಾರಾಟದಲ್ಲಿ ಶೇಕಡಾ 15ರಷ್ಟು ಬೆಳವಣಿಗೆಯನ್ನು ಮತ್ತು ತೆರಿಗೆಯ ನಂತರದ ಲಾಭದಲ್ಲಿ ಶೇಕಡಾ 18ರಷ್ಟು ಹೆಚ್ಚಳವನ್ನು ಕಾಣಲಿದೆ ಎಂದು ಬ್ರೋಕರೇಜ್ ಸಂಸ್ಥೆ ಅಂದಾಜಿಸಿದೆ.
"1,600 ರೂಪಾಯಿಗಳ ಪರಿಷ್ಕೃತ ಗುರಿ ಬೆಲೆಯೊಂದಿಗೆ ನಮ್ಮ BUY ರೇಟಿಂಗ್ ಅನ್ನು ಈ ಸ್ಟಾಕ್‌ನಲ್ಲಿ ಪುನರುಚ್ಚರಿಸುತ್ತೇವೆ" ಎಂದು ಅದು ಹೇಳಿದೆ. ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆಯು ಅದಾನಿ ಪೋರ್ಟ್ಸ್ ಷೇರುಗಳ ಗುರಿ ಬೆಲೆಯನ್ನು 1,600 ರೂಪಾಯಿಗೆ ನಿಗದಿಪಡಿಸಿದೆ. ಇದು ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ಅಂದಾಜು 21 ಪ್ರತಿಶತದಷ್ಟು ಏರಿಕೆಯಾಗಿದೆ.
ಇನ್ನೊಂದು ಬ್ರೋಕರೇಜ್ ಸಂಸ್ಥೆಯಾದ HSBC ಕೂಡ ತನ್ನ ಬೆಲೆಯ ಗುರಿಯನ್ನು 1,370 ರೂ.ನಿಂದ 1,560 ರೂ.ಗೆ ಏರಿಸಿದೆ. ಇದು ಪ್ರಸ್ತುತ ಸ್ಟಾಕ್ ಬೆಲೆಗಿಂತ 18 ಪ್ರತಿಶತ ಹೆಚ್ಚಳವಾಗಿದೆ.
ಕಳೆದ ಮೂರು ತಿಂಗಳುಗಳಲ್ಲಿ ಈ ಕಂಪನಿಯ ಷೇರು ಬೆಲೆ 25 ಪ್ರತಿಶತದಷ್ಟು ಜಿಗಿದಿದೆ. ಅಂತೆಯೇ, ಕಳೆದ ಆರು ತಿಂಗಳುಗಳಲ್ಲಿ, ಈ ಷೇರಿನ ಬೆಲೆ ಅಂದಾಜು 52 ರಷ್ಟು ಹೆಚ್ಚಳವಾಗಿದೆ. ಕಳೆದ ವಾರ ಮಾರ್ಚ್ 4 ರಂದು ಈ ಷೇರಿನ ಬೆಲೆಯು ಅದರ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1,356.55 ತಲುಪಿತ್ತು.