More

    ಮಿಡ್​ ಕ್ಯಾಪ್​, ಸ್ಮಾಲ್​ ಕ್ಯಾಪ್​ಗಳಲ್ಲಿ ಭಾರೀ ಕುಸಿತ; ಬೆಂಚ್​ಮಾರ್ಕ್​ ಸೂಚ್ಯಂಕ ಅಲ್ಪ ಏರಿಕೆ

    ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನಂತಹ ಬೃಹತ್​ ಕಂಪನಿಗಳ ಷೇರುಗಳ ಭಾರೀ ಖರೀದಿಯಿಂದಾಗಿ ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಮಂಗಳವಾರ ಏರಿಕೆ ಕಂಡವು. ಆದರೆ, ಮಿಡ್​ ಕ್ಯಾಪ್​ ಮತ್ತು ಸ್ಮಾಲ್​ ಕ್ಯಾಪ್​ ಸೂಚ್ಯಂಕಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 165.32 ಅಂಕಗಳು ಅಥವಾ ಶೇಕಡಾ 0.22 ಏರಿಕೆಯೊಂದಿಗೆ 73,667.96 ಕ್ಕೆ ತಲುಪಿತು. ಇಂಟ್ರಾ ಡೇ ವಹಿವಾಟಿನಲ್ಲಿ, ಈ ಸೂಚ್ಯಂಕವು 501.52 ಅಂಕಗಳ ಹೆಚ್ಚಳ ಕಂಡು 74,004.16 ಕ್ಕೆ ತಲುಪಿತ್ತು.

    ನಿಫ್ಟಿ ಸೂಚ್ಯಂಕವು ಬಹುತೇಕ ಕೇವಲ 3.05 ಅಂಕಗಳು ಅಥವಾ ಶೇಕಡಾ 0.01 ರಷ್ಟು ಅಲ್ಪ ಏರಿಕೆ ದಾಖಲಿಸಿ 22,335.70 ಕ್ಕೆ ಮುಟ್ಟಿತು.

    ಬಿಎಸ್​ಇ ಸೂಚ್ಯಂಕ ಷೇರುಗಳ ಪೈಕಿ, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಶೇಕಡಾ 2 ಕ್ಕಿಂತ ಹೆಚ್ಚು ಏರಿತು. ಟಿಸಿಎಸ್, ಮಾರುತಿ, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜೆಎಸ್‌ಡಬ್ಲ್ಯೂ ಸ್ಟೀಲ್, ಐಟಿಸಿ, ಟಾಟಾ ಮೋಟಾರ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ನೆಸ್ಲೆ ಕಂಪನಿಯ ಷೇರುಗಳು ಹಿನ್ನಡೆ ಕಂಡವು.

    “ಹಿಂದಿನ ದಿನದ ತೀಕ್ಷ್ಣವಾದ ಲಾಭದ ಬುಕಿಂಗ್ ನಂತರ ದೇಶೀಯ ಮಾರುಕಟ್ಟೆಯು ಮಂಗಳವಾರ ಹೆಚ್ಚಿನ ವಹಿವಾಟಿಗೆ ಸಾಕ್ಷಿಯಾಗಿವೆ. ಆದರೂ, ಮಧ್ಯಮ ಮತ್ತು ಸಣ್ಣ-ಕ್ಯಾಪ್ ಷೇರುಗಳು ಒತ್ತಡದಲ್ಲಿಯೇ ಉಳಿದಿವೆ, ಪ್ರಾಥಮಿಕವಾಗಿ ಈ ಷೇರುಗಳ ಮೌಲ್ಯ ತೀರ ಹೆಚ್ಚಳವಾಗಿರುವ ಆತಂಕಗಳೇ ಇದಕ್ಕೆ ಕಾರಣ” ಎಂದು ಜಿಯೋಜಿತ್ ಫೈನಾನ್ಶಿಯಲ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕವು ಶೇಕಡಾ 0.1 ರಷ್ಟು ನಷ್ಟ ಅನುಭವಿಸಿತು. ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಶೇಕಡಾ 0.4ರಷ್ಟು ಹಿನ್ನಡೆ ಕಂಡಿತು. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಶೇಕಡಾ 3.1 ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ ಶೇಕಡಾ 0.8 ರಷ್ಟು ಏರಿಕೆ ದಾಖಲಿಸಿತು.

    ಐರೋಪ್ಯ ಮಾರುಕಟ್ಟೆಗಳು ಹೆಚ್ಚಿನ ವಹಿವಾಟು ನಡೆಸಿದವು. ಸೋಮವಾರದಂದು ಅಮೆರಿಕ ಮಾರುಕಟ್ಟೆಗಳಲ್ಲಿ ಮಿಶ್ರ ನೋಟ ಇತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 4,212.76 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರು ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಸೋಮವಾರ 616.75 ಅಂಕಗಳು ಅಥವಾ ಶೇಕಡಾ 0.83 ರಷ್ಟು ಕುಸಿದು 73,502.64 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 160.90 ಅಂಕಗಳು ಅಥವಾ 0.72 ರಷ್ಟು ಕುಸಿದು 22,332.65 ಕ್ಕೆ ತಲುಪಿತ್ತು.

    ವಿವಿಧ ಸೂಚ್ಯಂಕಗಳು:

    ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ 39,237.90 (1.31% ಕುಸಿತ)
    ಬಿಎಸ್​ಇ ಸ್ಮಾಲ್​ ಕ್ಯಾಪ್​ ಸೂಚ್ಯಂಕ 42,831.29 (2.11% ಕುಸಿತ)
    ನಿಫ್ಟಿ ಮಿಡ್​ ಕ್ಯಾಪ್​ 100 ಸೂಚ್ಯಂಕ 48,086.85 (1.41% ಕುಸಿತ)
    ನಿಫ್ಟಿ ಸ್ಮಾಲ್​ ಕ್ಯಾಪ್​ 100 ಸೂಚ್ಯಂಕ 15,092.10 (1.98% ಕುಸಿತ)

    ಅಂಬಾನಿ, ಟಾಟಾ ಕಂಪನಿಗಳಿಗೆ ಠಕ್ಕರ್​: ಶೀಘ್ರದಲ್ಲಿಯೇ ಬರಲಿದೆ ದೊಡ್ಡ ಕಂಪನಿಯ ಐಪಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts