More

    4 ದಿನಗಳ ಕರಡಿಯ ಕುಣಿತದ ನಂತರ ಗುಟುರು ಹಾಕಿದ ಗೂಳಿ: ಷೇರು ಸೂಚ್ಯಂಕ 599 ಅಂಕ ಏರಿಕೆ

    ಮುಂಬೈ: ಭಾರತೀಯ ಷೇರು ಪೇಟೆ ಶುಕ್ರವಾರ ಚೇತರಿಕೆ ಕಂಡಿದೆ, ಬ್ಯಾಂಕಿಂಗ್ ಮತ್ತು ಆಟೋ ಷೇರುಗಳಲ್ಲಿನ ಭಾರೀ ಖರೀದಿಯಿಂದ ನಾಲ್ಕು ದಿನ ಕುಸಿತ ಕೊನೆಗೊಂಡಿದೆ.

    30-ಷೇರುಗಳ ಬಿಎಸ್‌ಇ ಸೂಚ್ಯಂಕ 599.34 ಅಂಗಳು ಅಥವಾ ಶೇಕಡಾ 0.83ರಷ್ಟು ಏರಿಕೆಯಾಗಿ 73,088.33 ಕ್ಕೆ ಸ್ಥಿರವಾಯಿತು. ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕವು ಕುಸಿತದೊಂದಿಗೆ ಪ್ರಾರಂಭವಾಗಿ, 672.53 ಅಂಕಗಳು ಅಥವಾ ಶೇಕಡಾ 0.92 ರಷ್ಟು ಕಡಿಮೆಯಾಗಿ 71,816.46 ಕ್ಕೆ ತಲುಪಿತ್ತು. ಆದಾಗ್ಯೂ, ಬ್ಯಾಂಕಿಂಗ್ ಷೇರುಗಳಲ್ಲಿನ ಖರೀದಿಯಿಂದಾಗಿ ಸೂಚ್ಯಂಕವು ದ್ವಿತೀಯಾರ್ಧದಲ್ಲಿ ಚೇತರಿಕೆ ಕಂಡಿತು.

    ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 151.15 ಅಂಕಗಳು ಅಥವಾ ಶೇಕಡಾ 0.69 ರಷ್ಟು ಜಿಗಿದು 22,147 ಕ್ಕೆ ತಲುಪಿತು. ಇದು ಆರಂಭಿಕ ವಹಿವಾಟಿನಲ್ಲಿ 21,777.65 ಕ್ಕೆ ಇಳಿದಿತ್ತು, ನಂತರ ಚೇತರಿಸಿಕೊಂಡಿತು.

    ಬಜಾಜ್ ಫೈನಾನ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಮಾರುತಿ, ವಿಪ್ರೋ, ಭಾರ್ತಿ ಏರ್‌ಟೆಲ್, ಬಜಾಜ್ ಫಿನ್‌ಸರ್ವ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಮೊದಲಾದ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ನೆಸ್ಲೆ ಇಂಡಿಯಾ, ಎಚ್‌ಸಿಎಲ್ ಟೆಕ್ನಾಲಜೀಸ್, ಲಾರ್ಸೆನ್ ಆ್ಯಂಡ್​ ಟೂಬ್ರೊ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಮೋಟಾರ್ಸ್ ಮತ್ತು ಇನ್ಫೋಸಿಸ್ ಕಂಪನಿಯ ಷೇರುಗಳು ನಷ್ಟ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ನಷ್ಟ ಅನುಭವಿಸಿದವು.

    ಐರೋಪ್ಯ ಮಾರುಕಟ್ಟೆಗಳು ನಷ್ಟದಲ್ಲಿ ವಹಿವಾಟು ನಡೆಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಗುರುವಾರ ಬಹುತೇಕ ಕೆಳಮಟ್ಟದಲ್ಲಿ ಕೊನೆಗೊಂಡಿತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 4,260.33 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    “ಜಾಗತಿಕ ದೌರ್ಬಲ್ಯದ ಹೊರತಾಗಿಯೂ, ಇರಾನ್ ವಿರುದ್ಧ ಇಸ್ರೇಲ್​ನ ಕ್ರಮದ ನಂತರವೂ ಭಾರತೀಯ ಮಾರುಕಟ್ಟೆಗಳು ದೊಡ್ಡ-ಕ್ಯಾಪ್ ಸ್ಟಾಕ್​ಗಳ ಮೂಲಕ ಬಲವಾದ ಚೇತರಿಕೆಯನ್ನು ಪ್ರದರ್ಶಿಸಿದವು. ಆದರೂ, ತೈಲ ಬೆಲೆಗಳು ಹೆಚ್ಚಿದ ಕಾರಣ, ಹಣದುಬ್ಬರದ ಅಪಾಯಗಳನ್ನು ಉಂಟು ಮಾಡುವ ಮೂಲಕ ದುರ್ಬಲತೆಯು ಮುಂದುವರಿಯುತ್ತದೆ.” ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

    ಗುರುವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 454.69 ಅಂಕಗಳು ಅಥವಾ ಶೇಕಡಾ 0.62 ರಷ್ಟು ಕುಸಿದು 72,488.99 ಕ್ಕೆ ಸ್ಥಿರವಾಗಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 152.05 ಅಂಕಗಳು ಅಥವಾ ಶೇ. 0.69 ರಷ್ಟು ಕುಸಿದು 21,995.85 ಕ್ಕೆ ತಲುಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts