More

    156ರಿಂದ 100 ರೂಪಾಯಿಗೆ ಕುಸಿದಿದ್ದ ಅದಾನಿ ಕಂಪನಿ ಷೇರಿಗೆ ಭಾರೀ ಬೇಡಿಕೆ: ಈಗ 10% ರಷ್ಟು ಏರಿಕೆ ಆಗಿದ್ದೇಕೆ?

    ಮುಂಬೈ: ಅದಾನಿ ಸಮೂಹದ ಸಿಮೆಂಟ್ ಕಂಪನಿಯಲ್ಲಿ ದೊಡ್ಡ ಸಂಚಲನ ಉಂಟಾಗಿದೆ. ವಾಸ್ತವವಾಗಿ, ಅಂಬುಜಾ ಸಿಮೆಂಟ್ಸ್ ಕಂಪನಿಯು ಅದಾನಿ ಗ್ರೂಪ್‌ನ ಸಿಮೆಂಟ್ ಕಂಪನಿಯಾಗಿದೆ. ಇದೇ ಗ್ರೂಪ್​ನ ಇನ್ನೊಂದು ಸಿಮೆಂಟ್​ ಕಂಪನಿಯಾದ ಸಂಘಿ ಇಂಡಸ್ಟ್ರೀಸ್‌ನಲ್ಲಿ ಒಂದಿಷ್ಟು ಪಾಲಿನ ಷೇರನ್ನು ಅದಾನಿ ಗ್ರೂಪ್​ ಮಾರಾಟ ಮಾಡಲು ಹೊರಟಿದೆ.

    ಸಂಘಿ ಇಂಡಸ್ಟ್ರೀಸ್ ಈ ಸುದ್ದಿಯನ್ನು ಪ್ರಕಟಿಸಿದ ತಕ್ಷಣ, ಹೂಡಿಕೆದಾರರು ಕಂಪನಿಯ ಷೇರುಗಳ ಮೇಲೆ ಮುಗಿಬಿದ್ದಿದ್ದಾರೆ. ಮಂಗಳವಾರ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರು ಹಿಂದಿನ ಮುಕ್ತಾಯದ ರೂ 100.65 ಕ್ಕೆ ಹೋಲಿಸಿದರೆ ರೂ 110.70 ರ ಬೆಲೆಯನ್ನು ತಲುಪಿತು. ಈ ಮೂಲಕ ಶೇಕಡಾ 10 ರಷ್ಟು ಏರಿಕೆಯಾಯಿತು.

    ಈ ಷೇರಿನ ಬೆಲೆ 156.20 ರೂಪಾಯಿವರೆಗೂ ಏರಿತ್ತು. ಕಳೆದ ಜನವರಿ 15 ರಂದು ಈ ಗರಿಷ್ಠ ಬೆಲೆ ಇತ್ತು. ಇದು ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಮಾರ್ಚ್ 16, 2023 ರಂದು ಈ ಷೇರಿನ ಬೆಲೆ 54.60 ರೂ. ಇತ್ತು. ಇದು ಈ ಷೇರುಗಳ 52 ವಾರಗಳ ಕನಿಷ್ಠ ಬೆಲೆಯಾಗಿದೆ.

    ಅದಾನಿ ಗ್ರೂಪ್ ಒಡೆತನದ ಅಂಬುಜಾ ಸಿಮೆಂಟ್ಸ್ ಕನಿಷ್ಠ ಸಾರ್ವಜನಿಕ ಷೇರುದಾರರ ಮಾನದಂಡಗಳನ್ನು ಅನುಸರಿಸಲು ಸಂಘಿ ಇಂಡಸ್ಟ್ರೀಸ್‌ನಲ್ಲಿ ತನ್ನ ಶೇಕಡಾ 2 ರಷ್ಟು ಪಾಲನ್ನು ಮಾರಾಟ ಮಾಡಲು ಯೋಜಿಸಿದೆ.

    “ಕಂಪನಿಯ ಪ್ರವರ್ತಕರಾದ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್, ಕನಿಷ್ಠ ಸಾರ್ವಜನಿಕ ಷೇರುದಾರರ ಮಾನದಂಡಗಳನ್ನು ಅನುಸರಿಸಲು ನಮಗೆ ಅನುವು ಮಾಡಿಕೊಡಲು ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುವ ಉದ್ದೇಶವನ್ನು ನಮಗೆ ತಿಳಿಸಿದೆ” ಎಂದು ಸಂಘಿ ಇಂಡಸ್ಟ್ರೀಸ್ ಸ್ಟಾಕ್ ಎಕ್ಸ್​ಚೇಂಜ್​ಗೆ ತಿಳಿಸಿದೆ.

    ಕಂಪನಿಯ ಪ್ರಕಾರ, ಈ 2% ಷೇರುಗಳು 51,66,520 ಈಕ್ವಿಟಿ ಷೇರುಗಳಿಗೆ ಸಮನಾಗಿರುತ್ತದೆ. ಮಾರ್ಚ್ 13, 2024 ರಿಂದ ಫೆಬ್ರವರಿ 6, 2025 ರವರೆಗೆ ಅಥವಾ ಎಲ್ಲಾ ಈಕ್ವಿಟಿ ಷೇರುಗಳ ಮಾರಾಟದ ನಿಜವಾದ ದಿನಾಂಕದವರೆಗೆ ಷೇರು ಮಾರಾಟ ಪ್ರಾರಂಭವಾಗಲಿದೆ ಎಂದು ಸಂಘಿ ಇಂಡಸ್ಟ್ರೀಸ್ ಹೇಳಿದೆ.

    ಅದಾನಿ ಮಾಲಿಕತ್ವದ ಅಂಬುಜಾ ಸಿಮೆಂಟ್ ಕಂಪನಿಯು ಸಂಘಿ ಇಂಡಸ್ಟ್ರೀಸ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಅಂಬುಜಾ ಸಿಮೆಂಟ್ ಕಂಪನಿಯು ಸಂಘಿ ಇಂಡಸ್ಟ್ರೀಸ್ ಲಿಮಿಟೆಡ್‌ನ ಪ್ರವರ್ತಕ ರವಿ ಸಂಘಿ ಮತ್ತು ಕುಟುಂಬದಿಂದ ಈ ಸ್ವಾಧೀನ ಮಾಡಿಕೊಂಡಿತ್ತು.

    ಕಂಪನಿಯ 56.74 ರಷ್ಟು ಪಾಲನ್ನು ಅದು ಪಡೆದುಕೊಂಡಿದೆ. ಈ ಸ್ವಾಧೀನವು ಅಂಬುಜಾ ಸಿಮೆಂಟ್ ತನ್ನ ಉತ್ಪಾದನೆಯ ಸಾಮರ್ಥ್ಯವನ್ನು ವಾರ್ಷಿಕವಾಗಿ 73.6 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಲು ಅನುಕೂಲವಾಗಿದೆ. ಅಲ್ಟ್ರಾಟೆಕ್ ನಂತರ, ಅಂಬುಜಾ ಸಿಮೆಂಟ್ ಎರಡನೇ ಅತಿದೊಡ್ಡ ಸಿಮೆಂಟ್ ತಯಾರಕ ಕಂಪನಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts