ನವದೆಹಲಿ: ಟಿ20 ವಿಶ್ವಕಪ್ ಅಂಗವಾಗಿ ಭಾನುವಾರ (ಜೂನ್ 09) ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ವಿಶ್ವಾದ್ಯಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳಾಗಿರುವುದರಿಂದ ಈ ಪಂದ್ಯಕ್ಕೆ ಹೆಚ್ಚಿನ ಮನ್ನಣೆ ಇದೆ. ಆದರೆ, ಭಾರತ-ಪಾಕ್ ಆಟಗಾರರು ಮೈದಾನದಲ್ಲಿ ಎಷ್ಟೇ ಆಕ್ರಮಣಕಾರಿ ಆಟವಾಡಿದರೂ ಪಂದ್ಯದ ನಂತರ ಎಲ್ಲವನ್ನೂ ಮರೆತು ಪರಸ್ಪರ ಉಭಯ ಕುಶಲೋಪರಿ ವಿಚಾರಿಸುತ್ತಾರೆ. ಕೆಲವು ಆಟಗಾರರು ಉಡುಗೊರೆಗಳ ಮೂಲಕ ಇತರ ಆಟಗಾರರಿಗೆ ತಮ್ಮ ಪ್ರೀತಿಯನ್ನು ತೋರಿಸುತ್ತಾರೆ. ಅದೇ ರೀತಿ ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ತಮ್ಮ ಮಗನಿಗೆ ಉಡುಗೊರೆ ನೀಡಿದ್ದಾರೆ ಎಂದು ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಹೇಳಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಆತ್ಮೀಯವಾಗಿ ನಮಸ್ಕರಿಸಿ, ಜರ್ಸಿ ಬದಲಾಯಿಸುವ ಮೂಲಕ ಸಣ್ಣ ಉಡುಗೊರೆಗಳನ್ನು ನೀಡುತ್ತಾರೆ. ಇನ್ನು ಕೆಲ ಆಟಗಾರರ ಕುಟುಂಬಗಳಿಗೆ ಉಡುಗೊರೆ ನೀಡುತ್ತಾರೆ. ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಅವರು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಶಾಹೀನ್ ಅಫ್ರಿದಿ ತನ್ನ ಮಗನಿಗೆ ಅದ್ಭುತವಾದ ಉಡುಗೊರೆಯನ್ನು ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷ ಏಷ್ಯಾ ಕಪ್ ವೇಳೆ ಪಾಕಿಸ್ತಾನದ ಬೌಲರ್ ಶಾಹೀನ್ ಅಫ್ರಿದಿ ನಮಗೆ ಬುಟ್ಟಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅದು ಕೇವಲ ಒಂದು ಉಡುಗೊರೆ ಅಲ್ಲ, ಅದರೊಳಗೆ ಸಾಕಷ್ಟು ವಸ್ತುಗಳಿದ್ದವು. ಅವುಗಳನ್ನು ನಮ್ಮ ಮಗ ಅಂಗದ್‌ಗಾಗಿ ನಾವಿನ್ನೂ ಬಳಸುತ್ತಿದ್ದೇವೆ ಎಂದು ಸಂಜನಾ ಗಣೇಶನ್ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು.
ಗ್ರೌಂಡ್‌ನಲ್ಲಿ ಆಟಗಾರರು ಎಷ್ಟೇ ಹೋರಾಡಿದರು ಅದು ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತದೆ ಎಂಬುದು ಕೆಲವರಿಗೆ ಗೊತ್ತು. ಪಂದ್ಯದ ಬಳಿಕ ಅಲ್ಲಿ ಆತ್ಮಿಯತೆ, ಪರಸ್ಪರ ಸ್ನೇಹ ಕೂಡಿರುತ್ತದೆ. ಇದಕ್ಕೆ ಸಂಜನಾ ಅವರು ಹೇಳಿದ ಈ ಘಟನೆ ಒಂದು ಉದಾಹರಣೆ ಅಂತಾನೇ ಹೇಳಬಹುದು. (ಏಜೆನ್ಸೀಸ್)
Divided by boundaries, united by cricket and friendships 🇵🇰🤝🇮🇳#ShaheenAfridi #JaspritBumrah #INDvPAK #T20WorldCup pic.twitter.com/90ADxjTTqC
— Sportskeeda (@Sportskeeda) June 8, 2024
ಈ ವಿಚಾರಕ್ಕೆ ಹೆದರಿದ್ರಾ ನಿವೇದಿತಾ? ಇಡೀ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಮೊಬೈಲ್ ಕೂಡ….
ಟೂರ್ನಮೆಂಟ್ ನಡುವೆ ಕ್ರಿಕೆಟಿಗರ S*X ಜೀವನ ಹೇಗಿರುತ್ತೆ? ಶಾಕಿಂಗ್ ಉತ್ತರ ನೀಡಿದ KKR ಸಹಾಯಕ ಕೋಚ್!