

ನವದೆಹಲಿ: ಕಳೆದ ತಿಂಗಳಷ್ಟೇ ಮುಕ್ತಾಯಗೊಂಡ 17ನೇ ಐಪಿಎಲ್ ಸೀಸನ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡ ಟ್ರೋಫಿ ಗೆದ್ದಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಗೆಲುವಿನ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಅಭಿಷೇಕ್ ನಾಯರ್ ಕೂಡ ಒಬ್ಬರು. ಟ್ರೋಫಿ ಗೆದ್ದ ನಂತರ ಹರ್ಷ ಭೋಗ್ಲೆ ಸಂದರ್ಶನ ಮಾಡುವಾಗ, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ಅವರು ಸಹಾಯಕ ಕೋಚ್ ಅಭಿಷೇಕ್ ನಾಯರ್ ನಿರ್ವಹಿಸಿದ ಪಾತ್ರ ಮತ್ತು ಕ್ರಿಕೆಟ್‌ನಲ್ಲಿ ಅವರಿಗಿರುವ ಅಗಾಧ ಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚೆಗಷ್ಟೇ ಅಭಿಷೇಕ್ ನಾಯರ್ ಅವರು ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ನಡೆಸಿದ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ಎದುರಿಸಿದ ಪ್ರಶ್ನೆ ಹಾಗೂ ಅವರು ನೀಡಿದ ಉತ್ತರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ ಮತ್ತು ಬಹಳ ಚರ್ಚೆಯಾಗುತ್ತಿದೆ.
ಕ್ರಿಕೆಟ್‌ನಲ್ಲಿ ಅಂತಿಮ ವಿಷಯವೆಂದರೆ ಅದು ಲೈಂಗಿಕತೆ, ಇದು ಆಟಗಾರರ ಜೀವನದಲ್ಲಿ ಒಂದು ಅಂಶವೇ? ತುಂಬಾ ಬಿಜಿಯಾಗಿರುವ ಕ್ರಿಕೆಟಿಗರ ಜೀವನದಲ್ಲಿ ಸೆಕ್ಸ್ ಹೇಗಿರುತ್ತದೆ? ಎಂದು ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ, ಅಭಿಷೇಕ್ ನಾಯರ್ ಅವರನ್ನು ಕೇಳಿದರು.
ಈ ಪ್ರಶ್ನೆಗೆ ಉತ್ತರಿಸಿದ ನಾಯರ್, ನೀವಿದನ್ನು ಪಾಸಿಟಿವ್ ರೀತಿಯಲ್ಲಿ ಕೇಳುತ್ತಿದ್ದೀರಾ? ಅಥವಾ ನೆಗೆಟಿವ್ ರೀತಿಯಲ್ಲಿ ಕೇಳುತ್ತಿದ್ದೀರಾ? ಏಕೆಂದರೆ ನೀವು ತುಂಬಾ ಮುಕ್ತವಾದ ಪ್ರಶ್ನೆಯನ್ನು ಕೇಳಿದ್ದೀರಿ. ಎಲ್ಲರಂತೆ ಕ್ರಿಕೆಟಿಗರ ಜೀವನದಲ್ಲಿಯೂ ಸೆಕ್ಸ್ ಇದೆ. ಸೆಕ್ಸ್ ಇಲ್ಲದೆ ಯಾವ ಮನುಷ್ಯ ತಾನೇ ಇರುತ್ತಾನೆ ಹೇಳಿ ಎಂದು ಪ್ರಶ್ನಿಸಿದರು. ಮಾತು ಮುಂದುವರಿಸಿದ ನಾಯರ್, ಕ್ರಿಕೆಟಿಗರಿಗೆ ಬಿಜಿ ಶೆಡ್ಯೂಲ್ ಇದ್ದಾಗ ಸೆಕ್ಸ್ ಒಳ್ಳೆಯದೇ? ಅಥವಾ ಕೆಟ್ಟದೇ? ಎಂದು ನೀವು ಕೇಳುತ್ತಿದ್ದೀರಾ? ಅಥವಾ ಅವರು ಎಷ್ಟು ಬಾರಿ ಸೆಕ್ಸ್ ಮಾಡುತ್ತಾರೆ ಎಂಬುದು ನಿಮ್ಮ ಪ್ರಶ್ನೆಯೇ ಎಂದು ನಾಯರ್ ಕೇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ರಣವೀರ್, ನಾನು ಇದಕ್ಕೆ ಉತ್ತರಿಸಲು ಬಯಸುತ್ತೇನೆ. ಆದರೆ, ನೀವು ಏನು ಉತ್ತರಿಸುತ್ತೀರಿ ಎಂದು ಕೇಳಲು ನಾನು ಬಯಸುತ್ತೇನೆ ಎಂದರು. ಬಳಿಕ ಮಾತನಾಡಿದ ನಾಯರ್, ಪ್ರತಿಯೊಬ್ಬರ ಜೀವನದಲ್ಲೂ ಸೆಕ್ಸ್ ಸಹಜ ಎಂದರು. ಆದರೆ, ಸೆಕ್ಸ್ ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬ ಕ್ರಿಕೆಟಿಗನ ಮನಸ್ಸಿನಲ್ಲಿಯೂ ಇದರ ಬಗ್ಗೆ ಗೊಂದಲವಿದೆ. ಕೆಲವರು ಸೆಕ್ಸ್ ಅನ್ನು ಇಷ್ಟಪಡುತ್ತಾರೆ ಮತ್ತು ಇನ್ನು ಕೆಲವರು ಅದರಿಂದ ದೂರವಿರುತ್ತಾರೆ. ಆದರೆ, ಎಲ್ಲ ಆಟಗಾರರು ಹೀಗೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನಾಯರ್ ಹೇಳಿದರು.
ಇನ್ನು ನಾಯರ್ ಬಗ್ಗೆ ಹೇಳುವುದಾದರೆ, ಕೆಕೆಆರ್ ತಂಡದಲ್ಲಿ ಪ್ರತಿಭಾವಂತ ಯುವ ಭಾರತೀಯ ಆಟಗಾರರನ್ನು ರೂಪಿಸವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಸಹಾಯಕ ತರಬೇತುದಾರರಲ್ಲದೆ ನಾಯರ್ ಅವರು ಕೆಕೆಆರ್ ಅಕಾಡೆಮಿಯ ಮಾರ್ಗದರ್ಶಕ ಮತ್ತು ಮುಖ್ಯ ಕೋಚ್ ಆಗಿದ್ದಾರೆ. (ಏಜೆನ್ಸೀಸ್)