ಗುವಾಹಟಿ: ಬಹುಕೋಟಿ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಅಸ್ಸಾಮಿ ನಟಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಸುಮಿ ಬೋರಾ ಮತ್ತು ಅವರ ಪತಿ ತಾರ್ಕಿಕ್ ಬೋರಾ ಅವರನ್ನು ವಿಶೇಷ ಕಾರ್ಯಪಡೆ(ಎಸ್‌ಟಿಎಫ್ ) ಬಂಧಿಸಿದೆ.
ಇದನ್ನೂ ಓದಿ: ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್.. ಕೇಂದ್ರದ ಅಭಿಪ್ರಾಯ ಕೇಳಿದ ಮದ್ರಾಸ್ ಹೈಕೋರ್ಟ್
ಪೊಲೀಸರ ಮುಂದೆ ಹಾಜರಾಗಲು ವಿಫಲರಾದ ನಂತರ ದಂಪತಿಯನ್ನು ದಿಬ್ರುಗಢದಲ್ಲಿ ಬಂಧಿಸಲಾಯಿತು. ಪ್ರಮುಖ ಆರೋಪಿ ಬಿಶಾಲ್ ಫುಕನ್ ನನ್ನು ಈ ಹಿಂದೆ ಬಂಧಿಸಲಾಗಿತ್ತು.
ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಶಾಲ್ ಫುಕಾನ್(22)ನನ್ನು ಬಂಧಿಸಿದ ನಂತರ ದಂಪತಿ ಮತ್ತು ಇತರ ನಾಲ್ವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು.
ಕೆಲವು ಸ್ಥಳೀಯ ಟೆಲಿವಿಷನ್ ಚಾನೆಲ್‌ಗಳಿಗೆ ನಟಿ ಸುಮಿ ಬೋರಾ ಕಳೂಹಿಸಿದ ವೀಡಿಯೋದಲ್ಲಿ “ನಾನು ಪೊಲೀಸರಿಗೆ ಶರಣಾಗಿ ಸಂಪೂರ್ಣವಾಗಿ ಸಹಕರಿಸುತ್ತೇನೆ” ಎಂದು ಹೇಳಿಕೊಂಡಿದ್ದಾಳೆ.
ಅಸ್ಸಾಂನಲ್ಲಿ ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಹಣ ದ್ವಿಗುಣಗೊಳಿಸುವ (ಸ್ಟಾಕ್ ಟ್ರೇಡಿಂಗ್) ನಕಲಿ ಕಂಪನಿ ಹೊಂದಿದ್ದ ಫುಕನ್ 2 ಸಾವಿರ ಕೋಟಿ ರೂ. ಸಾರ್ವಜನಿಕರಿಂದ ವಸೂಲಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಈ ಹಗರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ತನಿಖೆಯನ್ನು ಸಿಐಡಿ ವಹಿಸಿಕೊಂಡಿದ್ದು, ಎಸ್‌ಐಟಿ ರಚಿಸಲಾಗಿದೆ.
‘ದೇವರ’ ನೋಡಿ ಸಾಯ್ತೀನಿ..ಅಲ್ಲಿವರೆಗೆ ಬದುಕಿಸಿ ಪ್ಲೀಸ್..! ಕಡೇ ಆಸೆ ಬಿಚ್ಚಿಟ್ಟ ಎನ್‌ಟಿಆರ್ ಅಭಿಮಾನಿ!