ಬೆಂಗಳೂರು: ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಯುವಕನೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಸೆ.27ಕ್ಕೆ ಬಿಡುಗಡೆಯಾಗಲಿರುವ ಜೂನಿಯರ್ ಎನ್‌ಟಿಆರ್ ಅವರ ದೇವರ ಚಿತ್ರ ನೋಡಿ ಪ್ರಾಣ ಬಿಡುತ್ತೇನೆ. ಅಲ್ಲಿ ವರೆಗೆ ನನ್ನನ್ನು ಬದುಕಿಸಿ ಪ್ಲೀಸ್ ಎಂದು ಪಾಲಕರ ಬಳಿ ಗೋಗರೆಯುತ್ತಿದ್ದಾನೆ.
ಇದನ್ನೂ ಓದಿ: ಹಾರ್ದಿಕ್ ಮಾಜಿ ಪತ್ನಿ ಮುಂಬೈನಲ್ಲಿ ಬಾಯ್ ಫ್ರೆಂಡ್ ಜೊತೆ ತಿರುಗಾಟ!
”ನನ್ನ ಮಗ ಕೌಶಿಕ್(19) ಜೂನಿಯರ್ ಎನ್ ಟಿಆರ್ ಅವರ ದೊಡ್ಡ ಅಭಿಮಾನಿ. ಸಿನಿಮಾ ನೋಡುವ ವರೆಗೆ ಬದಿಕಿದ್ದರೆ ಸಾಕು ಎನ್ನುತ್ತಿದ್ದಾನೆ. ದಯವಿಟ್ಟು ನನ್ನ ಮಗುವನ್ನು ಬದುಕಿಸಿ,” ಎಂದು ಯುವಕನ ತಾಯಿ ಬೇಡಿಕೊಳ್ಳುತ್ತಿದ್ದಾರೆ.
ತಿರುಪತಿಯ ಟಿಟಿಡಿಯಲ್ಲಿ ಗುತ್ತಿಗೆ ಚಾಲಕನಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ಮತ್ತು ಸರಸ್ವತಿ ದಂಪತಿಯ ಹಿರಿಯ ಮಗ ಕೌಶಿಕ್ (19) 2022 ರಿಂದ ರಕ್ತದ ಕ್ಯಾನ್ಸರ್‌ಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಸ್ಥಿಮಜ್ಜೆ ಚಿಕಿತ್ಸೆಗೆ ರೂ.60 ಲಕ್ಷಕ್ಕೂ ಹೆಚ್ಚು ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನು ಕೇಳಿರುವ ಯುವಕ ‘ಅಮ್ಮಾ, ನಾನು ಬದುಕಲ್ಲ ಅಂತ ಗೊತ್ತು. ದೇವರ ಸಿನಿಮಾ ರಿಲೀಸ್ ಆಗುವವರೆಗೂ ನನ್ನನ್ನು ಬದುಕಿಸಿಕೊಳ್ಳಿ. ನನ್ನ ಕೊನೆಯ ಆಸೆ ಈಡೇರಿಸಿ’ ಎಂದು ಕೌಶಿಕ್ ತಾಯಿ ಬಳಿ ಕೇಳಿಕೊಳ್ಳುತ್ತಿದ್ದಾನೆ.
ಟ್ರೈನಿ ಸೇನಾ ಅಧಿಕಾರಿಗೆ ಬೆದರಿಸಿ, ಸ್ನೇಹಿತೆ ಮೇಲೆ ಗ್ಯಾಂಗ್ ರೇಪ್!