ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕಡೂರಿನ ಸ್ನೇಹಮಯಿ ಯೋಗ ಕೇಂದ್ರದ ಸಹಯೋಗದಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, 8 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗ:
18ರಿಂದ 28 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನ- ನಿರ್ಮಲ ಸುಭಾಷ್ ಕೊಡ್ಲಿಕರ್, ಅನನ್ಯ ಸಂಬಯ್ಯ ಹಿರೇಮಠ(ಪ್ರಥಮ), 18ರಿಂದ 28 ವಯೋಮಿತಿಯ ಆರ್ಟಿಸ್ಟಿಕ್ ಪೇರ್ ಯೋಗಾಸನ- ನಿರ್ಮಲ ಸುಭಾಷ್ ಕೊಡ್ಲಿಕರ್, ಅನನ್ಯ ಸಂಬಯ್ಯ ಹಿರೇಮಠ(ದ್ವಿತೀಯ), 18ರಿಂದ 28 ವಯೋಮಿತಿಯ ಆರ್ಟಿಸ್ಟಿಕ್ ಯೋಗಾಸನ- ನಿರ್ಮಲ ಸುಭಾಷ್ ಕೊಡ್ಲಿಕರ್(ದ್ವಿತೀಯ), 18ರಿಂದ 28 ವಯೋಮಿತಿಯ ಟ್ರಡಿಷನಲ್ ಯೋಗಾಸನ- ಅನನ್ಯ ಸಂಬಯ್ಯ ಹಿರೇಮಠ್(ತೃತೀಯ).
ಬಾಲಕರ ವಿಭಾಗ:
14ರಿಂದ 18 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನ- ಸುಶೀಲ್ ಕುಮಾರ್ ಚೌಹಾನ್(ಪ್ರಥಮ), 14ರಿಂದ 18 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನ- ಚಂದ್ರಶೇಖರ ಹಡಗಲಿ, ಪೃಥ್ವಿಚಾರ್ ಎನ್.(ತೃತೀಯ), 14ರಿಂದ 18 ವಯೋಮಿತಿಯ ಆರ್ಟಿಸ್ಟಿಕ್ ಪೇರ್ ಯೋಗಾಸನ- ಚಂದ್ರಶೇಖರ ಹಡಗಲಿ, ಪೃಥ್ವಿಚಾರ್ ಎನ್.(ದ್ವಿತೀಯ), 10ರಿಂದ 14 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನ- ಆದರ್ಶ್ ಕಲ್ಲಪ್ಪ ಸಾವಳೆ, ಶಶಾಂಕ್ ಬಿ.(ತೃತೀಯ) ಸ್ಥಾನ ಪಡೆದಿದ್ದಾರೆ.
ವಿಜೇತ ಯೋಗಪಟುಗಳನ್ನು ಅಭಿನಂದಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು, ರಾಷ್ಟ್ರಮಟ್ಟದಲ್ಲಿ ವಿಜೇತ ಯೋಗಪಟುಗಳಿಗೆ ಖೇಲೊ ಇಂಡಿಯಾದಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.