ಬದಿಯಡ್ಕ: ಹಬ್ಬಕ್ಕೆ ಪೂರ್ವ ತಯಾರಿ ಮಾಡುವವರು ಗೃಹಿಣಿಯರು. ನಮ್ಮ ಸಮಾಜದಲ್ಲಿ ಸ್ತ್ರೀಗೆ ಮಹತ್ತರ ಸ್ಥಾನವಿದ್ದು, ಅದರ ಹಿಂದೆ ಅವರ ಅವಿರತ ಶ್ರಮ, ತ್ಯಾಗ ಅಡಕವಾಗಿದೆ ಎಂದು ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಕಾಸರಗೋಡು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಯೂರಿ ಜ್ಞಾನವಿಕಾಸ ಕೇಂದ್ರದ ನೇತೃತ್ವದಲ್ಲಿ, ಬದಿಯಡ್ಕದಲ್ಲಿ ಆಯೋಜಿಸಲಾದ ‘ಹಬ್ಬಗಳಲ್ಲಿ ಮಹಿಳೆಯರ ಪಾತ್ರ’ ವಿಷಯ ಕುರಿತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಖಿಲೇಶ್ ನಗುಮುಗಂ, ಸಾಮಾಜಿಕ ಕಾರ್ಯಕರ್ತ ಅನಂತ ಕುಮಾರ್ ಬರ್ಲ ಮಾತನಾಡಿದರು. ಹೇಮಲತಾ ರೈ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪ್ರತಿನಿಧಿ ಕವಿತಾ ಗಿರೀಶ್ ರೈ ಸ್ವಾಗತಿಸಿದರು. ಪ್ರಫುಲ್ಲ ವಂದಿಸಿದರು.