ಸುಬ್ರಹ್ಮಣ್ಯ: ಗ್ರಾಮೀಣ ಪ್ರದೇಶದಲ್ಲಿ ನಾಯಕತ್ವಗಳು ಹುಟ್ಟಿಕೊಳ್ಳುತ್ತವೆ. ವಿದ್ಯೆ ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿ ಸಂಘಗಳು ಯುವಜನಾಂಗಕ್ಕೆ ನಾಯಕತ್ವದ ಜ್ಞಾನ ಬೋಧಿಸುವ ಪುಸ್ತಕಗಳಾಗಿವೆ ಎಂದು ಅಮೆರಿಕನ್ ಯುನಿವರ್ಸಿಟಿ ಆಫ್ ಶಾರ್ಜಾದ ಬ್ಯಾಡ್ಮಿಂಟನ್ ಮತ್ತು ಸ್ವಿಮ್ಮಿಂಗ್ ಕೋಚ್ ಹಾಗೂ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಅಂಪೈರ್ ರಾಜಾ ಸುಬ್ರಹ್ಮಣ್ಯ ಹೇಳಿದರು.
ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶುಕ್ರವಾರ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಗ್ರಾ.ಪಂ ಸದಸ್ಯೆ ಭಾರತಿ ದಿನೇಶ್, ಅಧ್ಯಾಪಕ ರಘು ಬಿಜೂರ್, ವಾಣಿ ವನಿತಾ ಸಮಾಜದ ಪೂರ್ವಾಧ್ಯಕ್ಷೆ ಲತಾ ಸರ್ವೇಶ್ವರ ಭಟ್ ಮುಖ್ಯ ಅತಿಥಿಗಳಾಗಿದ್ದರು. ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಜಯಪ್ರಕಾಶ್ ಆರ್. ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರುತಿ ಯಾಲದಾಳು ಕಾರ್ಯಕ್ರಮ ನಿರೂಪಿಸಿದರು.
ಪ್ರತಿಜ್ಞಾವಿಧಿ ಬೋಧನೆ
ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ವಿದ್ಯಾರ್ಥಿ ಸರ್ಕಾರದ ಸಂಚಾಲಕ ಜಯಪ್ರಕಾಶ್ ಆರ್. ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಗನ್ ಡಿ.ಕೆ, ಉಪಾಧ್ಯಕ್ಷೆ ಜನನಿ, ಕಾರ್ಯದರ್ಶಿ ಭವಿತ್, ಕ್ರೀಡಾ ಕಾರ್ಯದರ್ಶಿ ಹಿತೇಶ್ ಎಚ್.ಎಸ್, ಸಾಂಸ್ಕೃತಿಕ ಕಾರ್ಯದರ್ಶಿ ಪೃಥ್ವಿನ್ ಎ.ಕೆ ಮತ್ತು ತರಗತಿ ನಾಯಕರು ಹಾಗೂ ನಾಯಕಿಯರು ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಗಣ್ಯರು ವಿದ್ಯಾರ್ಥಿ ನಾಯಕರಿಗೆ ಅವರ ಹೆಸರಿನ ಪಿನ್‌ಗಳನ್ನು ತೊಡಿಸಿದರು.