ಗದರ್​​-2 ಸಕ್ಸಸ್​ ಮೀಟ್​; ಮುನಿಸು ಮರೆತು ಒಂದಾದ ಶಾರುಖ್​-ಸನ್ನಿ ಡಿಯೋಲ್​

Shahrukh Sunny
Published on

ಮುಂಬೈ: ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್​ ಅಭಿನಯದ ಗದರ್-2 ಚಿತ್ರದ ಅಬ್ಬರ ಸದ್ಯಕ್ಕೆ ನಿಲ್ಲುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ. ಬಾಕ್ಸ್​​ ಆಫೀಸ್​ನಲ್ಲಿ ಹೊಸ ದಾಖಲೆಯನ್ನು ಬರೆದಿರುವ ಚಿತ್ರ ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆಯುತ್ತ ಬಂದರು ಅದರ ಕ್ರೇಜ್​ ಮಾತ್ರ ಇನ್ನು ಕಡಿಮೆಯಾಗಿಲ್ಲ.

ಸನ್ನಿ ಡಿಯೋಲ್​ ವೃತ್ತಿ ಬದುಕಿಗೆ ಹೊರ ತಿರುವನ್ನು ನೀಡಿದ ಗದರ್​-2 ಚಿತ್ರದ ಸಕ್ಸಸ್​ ಪಾರ್ಟಿಯನ್ನು ಶನಿವಾರ ಆಯೋಜಿಸಲಾಗಿತ್ತು. ಬಾಲಿವುಡ್​ನ ಅನೇಕ ಸ್ಟಾರ್​ನಟರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಬಾಲಿವುಡ್​ನ ಖಾನ್​ತ್ರಯರು ಈ ಪಾರ್ಟಿಯಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿರುವುದು ಮತ್ತಷ್ಟು ವಿಶೇಷವಾಗಿದೆ.

ಇತ್ತ ಸುದೀಪ್​ ಹಾಗೂ ದರ್ಶನ್ ಒಂದಾಗುತ್ತಾರೆ ಎಂಬ ಕಾಯುವಿಕೆಯ ನಡುವೆ ಬಾಲಿವುಡ್‌ ಸ್ಟಾರ್‌ಗಳ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮುನಿಸು ಮರೆತು ಹಲವು ವರ್ಷಗಳ ನಂತರ ಶಾರುಖ್ ಖಾನ್- ಸನ್ನಿ ಡಿಯೋಲ್ ಒಂದಾಗಿದ್ದಾರೆ. ಗದರ್​-2 ಸಕ್ಸಸ್​ ಮೀಟ್​ನಲ್ಲಿ ಭೇಟಿಯಾದ ಈ ಇಬ್ಬರು ಸ್ಟಾರ್​​ ನಟರು ಒಬ್ಬರನ್ನೊಬ್ಬರು ತಬ್ಬಿಕೊಂಡು ಶುಭ ಹಾರೈಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Gadar 2

ಢರ್​ ಚಿತ್ರದ ಬಿಡುಗಡೆ ನಂತರ ಈ ಇಬ್ಬರು ನಟರು ಮನಸ್ತಾಪದಿಂದಾಗಿ ದೂರಾಗಿದ್ದರು. ಚಿತ್ರದಲ್ಲಿ ಶಾರುಖ್​ ಪಾತ್ರಕ್ಕೆ ಹೆಚ್ಚು ಮನ್ನಣೆ ಸಿಗದ ಕಾರಣ ಈ ಇಬ್ಬರು ನಾಯಕರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗಿದೆ. ಪತ್ನಿ ಗೌರಿ ಅವ​ರೊಂದಿಗೆ ಆಗಮಿಸಿದ ಶಾರುಖ್​ ಖಾನ್​ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಇದಲ್ಲದೆ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​ ಹಾಗೂ ಅಮಿರ್​ ಖಾನ್​ ಭಾಗಿಯಾಗಿದ್ದು ಮತ್ತುಷ್ಟು ವಿಶೇಷವಾಗಿತ್ತು. ಹೊಸ ಲುಕ್​ನಲ್ಲಿ ಸಲ್ಮಾನ್​ ಖಾನ್​ ಹಾಗೂ ಅಮಿರ್​ ಖಾನ್​ ಎಲ್ಲರ ಗಮನ ಸೆಳೆದಿದ್ದಾರೆ. ಇದಲ್ಲದೆ ಹಲವು ಬಾಲಿವುಡ್​ ನಟ-ನಟಿಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net