

ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುತ್ತಿದ್ದ ಹಿಂದು ಕಾರ್ಯಕರ್ತರ ಮೇಲೆ 20-30 ಜನರಿದ್ದ ಗುಂಪೊಂದು ಹಲ್ಲೆ ಮಾಡಿ ಗಲಭೆ ಸೃಷ್ಟಿಸಿದ ಘಟನೆ ಬಿಸ್ಮಿಲ್ಲಾ ನಗರದಲ್ಲಿ ಶುಕ್ರವಾರ ಸಂಭವಿಸಿದ್ದು, ಬಿಸ್ಮಿಲ್ಲಾನಗರ ಮತ್ತು ಗುರಪ್ಪನಪಾಳ್ಯದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಿಧಿ ಸಮರ್ಪಣ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿದ ಕಿಡಿಗೇಡಿಗಳ ಗುಂಪೊಂದು ಪ್ರಚಾರದ ರಥಕ್ಕೂ ಹಾನಿ ಮಾಡಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದೆ. ಶೇಷಾಚಲ, ಯಶವಂತ್, ಸುರೇಶ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿರಿ ಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್ ಎಂಎಲ್ಸಿ
ಸುದ್ದಗುಂಟೆ ಪೊಲೀಸ್ ಠಾಣೆಗೆ ಆಗಮಿಸಿದ ಡಿಸಿಪಿ ಶ್ರೀನಾಥ್ ಎಂ. ಜೋಷಿ, ಆಗ್ನೇಯ ವಿಭಾಗದ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದಾರೆ. ಬಿಸ್ಮಿಲ್ಲಾ ನಗರ, ಗುರಪ್ಪನಪಾಳ್ಯದಲ್ಲಿ ಪೊಲೀಸ್ ಸರ್ಪಗಾವಲಿದೆ. ಸುದ್ದಗುಂಟೆ ಪೊಲೀಸ್ ಠಾಣೆ ಮುಂದೆ ನೂರಾರು ಸಂಘ ಪರಿವಾರದ ನೂರಾರು ಕಾರ್ಯಕರ್ತರು ಬೀಡುಬಿಟ್ಟಿದ್ದು, ಹಲ್ಲೆ ಮಾಡಿದವರನ್ನ ಬಂಧಿಸಬೇಕು ಎಂದು ಆಗ್ರಹಿಸುತ್ತಾ, ಪೊಲೀಸ್ ಠಾಣೆ ಮುಂದೆ 'ಜೈ ಶ್ರೀರಾಮ' ಎಂದು ಜೈಕಾರ ಹಾಕುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಠಾಣೆ ಬಳಿಗೆ ಬಂದು ಡಿಸಿಪಿ ಜತೆ ಚರ್ಚಿಸುತ್ತಿದ್ದರು. ಇದಿಷ್ಟು ಸಂಜೆ ಸಂಜೆ 4ರವರೆಗಿನ ಮಾಹಿತಿ. (ದಿಗ್ವಿಜಯ ನ್ಯೂಸ್)