ಅಕ್ರಮ ಮೀನುಗಾರಿಗೆ ಆರೋಪ; 14 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

14
Published on

ತಮಿಳುನಾಡು: ಅಂತರಾಷ್ಟ್ರೀಯ ಸಮುದ್ರ ಗಡಿರೇಖೆಯನ್ನು ದಾಟಿದ(ಆಕ್ರಮ ಮೀನುಗಾರಿಗೆ) ಆರೋಪದ ಮೇಲೆ ಶ್ರಿಲಂಕಾ ನೌಕಪಡೆ ಅಧಿಕಾರಿಗಳು 14 ಜನ ಭಾರತೀಯ ಮೀನುಗಾರರನ್ನು ಬಂಧಿಸಿದ್ದಾರೆ.

ಇದೇ ಬುಧವಾರ(ಡಿ.04)ರಂದು ತಮಿಳುನಾಡು ರಾಮೇಶ್ವರಂ ಮೀನುಗಾರಿಕೆ ಬಂದರಿನಿಂದ ಹೊರಟ್ಟಿದ್ದ ಮೀನಿಗಾರರು ತಲೈಮನ್ನಾರ್​ ಮತ್ತು ಧನುಷ್ಕೋಡಿ ನಡುವೆ ಲಂಗಾರು ಹಾಕುತ್ತಿದ್ದಾಗ ಈ ಘಟನೆ ನಡೆದಿದೆ.

ನೌಕಪಡೆ ಅಧಿಕಾರಿಗಳು ವಶಪಡಿಸಿಕೊಂಡ ಬೋಟ್​ಗಳು ರಾಮೇಶ್ವರಂನ ನಿವಾಸಿಗಳಾದ ಮೈಕಲ್​ ರಾಜ್​ ಮತ್ತು ನಿಜೋ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಬಂಧಿತರನ್ನು ನೌಕಪಡೆ ಹೆಚ್ಚಿನ ತನಿಖೆಗೆ ತಮ್ಮ ಶಿಬಿರಗಳಿಗೆ ಕರೆದುಕೊಂಡು ಹೋಗಿದ್ದು, ಬಳಿಕ ಮನ್ನಾರ್​ ಮೀನುಗಾರಿಕೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಲಂಕಾ ನೌಕಪಡೆಯ ಅಧಿಕಾರಿಗಳು ಆಕ್ರಮಣಕಾರಿ ದುರ್ವತನೆ ಮಾಡುತ್ತಿದ್ದಾರೆ ಎಂದು ಇತ್ತೀಚಿಗೆ ರಾಮೇಶ್ವರಂ ಮೀನಿಗಾರರಿಂದ ಪ್ರತಿಭಟನೆ ನಡೆದಿತ್ತು. ಇನ್ನು ಈ ಘಟನೆಯೂ ಲಂಕಾ ನೌಕ ಅಧಿಕಾರಿಗಳ ಮತ್ತು ಭಾರತೀಯ ಮೀನುಗಾರರ ನಡುವೇ ಉದ್ವಿಗ್ನತೆಯ ಪರಿಸ್ಥಿತಿಗಳನ್ನು ಹುಟ್ಟುಹಾಕಲಿದೆ ಎಂದು ಹೇಳಲಾಗುತ್ತದೆ.

ಶ್ರೀಲಂಕಾ ಅಧಿಕಾರಿಗಳಿಂದ ಹೆಚ್ಚುತ್ತಿರುವ ಭಾರತೀಯ ಮೀನುಗಾರರ ಬಂಧನವನ್ನು ಪರಿಹರಿಸಲು ತುರ್ತು ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಇತ್ತೀಚಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ್ದರು.

ಇಂತಹ ಘಟನೆಗಳು ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸ್ಟಾಲಿಸ್​​, ಏಳು ವರ್ಷಗಳಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಅತಿ ಹೆಚ್ಚು ತಮಿಳುನಾಡು ಮೀನುಗಾರರ ಬಂಧನಕ್ಕೆ 2024 ಸಾಕ್ಷಿಯಾಗಿದೆ ಎಂದು ಹೇಳಿದ್ದರು,(ಏಜೆನ್ಸಿಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net