8ನೇ ತರಗತಿ ಓದಿದವರು ಇಲ್ಲಿ ಡಾಕ್ಟರ್ಸ್​! ವೈದ್ಯಲೋಕದಲ್ಲೊಂದು ಅತಂಕಕಾರಿ ಪ್ರಕರಣ ಬೆಳಕಿಗೆ | Medical

docoters
Published on

ಗುಜರಾತ್​: ಇಲ್ಲಿನ ಸೂರತ್​ನಲ್ಲಿ 8ನೇ ತರಗತಿ ಓದಿದವರಿಗೂ ವೈದ್ಯ(medical) ಪದವಿ ಪ್ರಮಾಣಪತ್ರಗಳನ್ನು ನೀಡುವಂತ ಅತಂಕಕಾರಿ ಪ್ರಕರಣವೊಂದು ಇತ್ತೀಚಿಗೆ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್​ ಮೈಂಡ್​ ಡಾ.ರಮೇಶ್ ಗುಜರಾತಿ ಎಂಬುವವರು ​ಸೇರಿದಂತೆ 14 ಜನರ ಗ್ಯಾಂಗ್​ ಅನ್ನು ಕಂದಾಯ ಇಲಾಖೆ ಸಹಯೋಗದೊಂದಿಗೆ ಸೂರತ್​ ಪೊಲೀಸರು ಬಂಧಿಸಿದ್ದಾರೆ. ​

ಪ್ರಕರಣದ ಹಿನ್ನೆಲೆ..

ಈ ಗ್ಯಾಂಗ್​ ಕಾಲ್ಪನಿಕವಾಗಿ ''ಬೋರ್ಡ್​ ಆಫ್​ ಎಲೆಕ್ಟ್ರೋ ಹೋಮಿಯೋಪತಿಕ್​ ಮೆಡಿಸಿನ್​(BEHM) ಗುಜರಾತ್​'' ಅನ್ನು ಸ್ಥಾಪಿಸಿದ್ದಾರೆ. 1200 ಕ್ಕೂ ಅಧಿಕ ನಕಲಿ ಪ್ರಮಾಣಪತ್ರಗಳನ್ನು ನೀಡಿದೆ ಎಂದು ಹೇಳಲಾಗಿದೆ. ಅಲ್ಲದೆ, ಈ ಪ್ರಮಾಣ ಪತ್ರಗಳು ಸರ್ಕಾರಿ ಅಧಿನದಲ್ಲಿರುವ ಕಾಲೇಜುಗಳಿಗೆ ಸಂಬಂಧಿಸಿದೆ ಎಂದು ನಂಬಿಸಲಾಗಿತ್ತು. ಇದರ ಮೂಲಕ ಪ್ರತಿ ನಕಲಿ ವೈದ್ಯ ಪದವಿ ಪ್ರಮಾಣಪತ್ರಕ್ಕೆ ಬರೊಬ್ಬರಿ 70 ಸಾವಿರ ರೂ. ನಿಗದಿ ಮಾಡಿದ್ದರು ಎಂದು ವರದಿಗಳು ಉಲ್ಲೇಖಿಸಿದ್ದಾರೆ.

ಅಲೋಪತಿ, ಹೋಮಿಯೋಪತಿ ಮತ್ತು ವೈದ್ಯಕೀಯ ಅಭ್ಯಾಸದ ಪದವಿ ಪ್ರಮಾಣ ಪತ್ರಗಳು ಎಂದು ನಂಬಿಸಿದ್ದಾರೆ. ಅಲ್ಲದೆ, ನಗದು ಹಣ ಪಾವತಿಸಿದ 15 ದಿನಗಳಲ್ಲೆ ಪದವಿ ಕಾರ್ಡ್​ ಕೈ ಸೇರುತ್ತದೆ. ಜತೆಗೆ ಪ್ರತಿ ವರ್ಷಕ್ಕೊಮ್ಮೆ ಪ್ರಮಾಣ ಪತ್ರಗಳನ್ನು ನವೀಕರಸಬೇಕಾಗುತ್ತದೆ ಇದಕ್ಕೆ 5 ಸಾವಿರದಿಂದ 15 ಸಾವಿರ ಪಾವತಿಸಿಬೇಕಾಗುತ್ತದೆ ಎಂಬ ನಿಯಮಗಳನ್ನು ಮಾಡಿದ್ದರು ಎಂದು ಹೇಳಲಾಗಿದೆ. ಇನ್ನೂ ಪ್ರಕರಣದಲ್ಲಿ 8ನೇ ತರಗತಿ ಓದಿ ಶಾಲೆ ಬಿಟ್ಟವರಿಗೂ ಪ್ರಮಾಣಪತ್ರ ನೀಡಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ.

ನಕಲಿ ವೈದ್ಯರು ವಂಚನೆ ಪ್ರಮಾಣಪತ್ರಗಳ ಮೂಲಕ ಕ್ಲಿನಿಕ್​ಗಳು ನಡೆಸುತ್ತಿರುವ ಪ್ರಕರಣಗಳು ಹೊರ ಬಂದ ನಂತರ ಈ ಹಗರಣ ಬೆಳಕಿಗೆ ಬಂದಿದೆ.(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net