ಪ್ರತ್ಯೇಕ ರಸ್ತೆ ಅಪಘಾತದಲ್ಲಿ 10 ಜನರು ಬಲಿ: 12ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

accident
Published on

ಉತ್ತರ ಪ್ರದೇಶ: ಇಲ್ಲಿನ ಪಿಲಿಭಿತ್​ ಮತ್ತು ಚಿತ್ರಕೂಟ ಜಿಲ್ಲೆಗಳಲ್ಲಿ ಶುಕ್ರವಾರ(ಡಿ.06) ಬೆಳಂಬೆಳಗ್ಗೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ 10 ಜನರು ಉಸಿರು ಚೆಲ್ಲಿದ್ದು, 12 ಅಧಿಕ ಮಂದಿಗೆ ಗಂಭೀರ ಗಾಯಗಳಾದ ಘಟನೆ ಸಂಭಂವಿಸಿದೆ.

ಪಿಲಿಭಿತ್​ ಜಿಲ್ಲೆಯಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಬಲಿಯಾಗಿದ್ದಾರೆ. ಉತ್ತರಖಂಡಾದ ಖತಿಮಾದಿಂದ ಮದುವೆ ಸಂಭ್ರಮಕ್ಕೆಂದು ಬಂದಿದ್ದರು. ಹಿಂತಿರಿಗಿ ಹೋಗುವ ವೇಳೆ ಈ ಅಪಘಾತ ನಡೆದಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಈ ಆಸ್ಪತ್ರೆಗೆ ದಾಖಲಿದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಎಸ್ಪಿ ಅವಿನಾಶ್​ ಕುಮಾರ್​ ಪಾಂಡೆ ಹೇಳಿದ್ದಾರೆ.

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಚಿತ್ರಕೂಟ ಜಿಲ್ಲೆಯಲ್ಲಿ ಮಹಿಂದ್ರಾ ಬೊಲೆರೋ ಮತ್ತು ಭಾರಿ ವಾಹನವಾದ ಟ್ರಕ್​ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 5 ಜನರು ಮೃತಪಟ್ಟಿದ್ದಾರೆ. ಈ ಘಟನೆಯೂ ರಾಯಪುರ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗ್ಗೆ 5.30ರ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದೆ. ಬೊಲೆರೋ ಪ್ರಯಾಗ್​ ರಾಜ್​ನಿಂದ ಮತ್ತು ಟ್ರಕ್​ ರಾಯಪುರದಿಂದ ಬರುತ್ತಿದ್ದಾಗ ಈ ಘಟನೆ ಸಂಂಭವಿಸಿದೆ.

''ಬುಲೆರೋದಲ್ಲಿ 11 ಜನರಿದ್ದರು. ಅದರಲ್ಲಿದ್ದ 5 ಜನರು ಬಲಿಯಾಗಿದ್ದು, ಉಳಿದವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ'' ಎಂದು ಚಿತ್ರಕೂಟ ಜಿಲ್ಲಾ ಎಸ್ಪಿ ಅರುಣ್​ ಕುಮಾರ್​ ಸಿಂಗ್​ ತಿಳಿಸಿದ್ದಾರೆ. ಎರಡೂ ಘಟನೆಗಳಲ್ಲಿ ಅಪಘಾತಕ್ಕೆ ಕಾರಣಕ್ಕೆ ಏನು ಎಂಬುವುದು ತನಿಖೆ ಮಾಡಲಾಗುತ್ತೆ ಎಂದು ಅಧಿಕಾರಿಗಳು ಹೇಳಿದಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net