16 ಲಕ್ಷ ರೂ. ಖರ್ಚು ಮಾಡಿ ಮತ್ತೆ ವರ್ಜಿನ್​ ಆಗಲು ಮುಂದಾದ ಯುವತಿ: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ! Virgin

Virgin
Published on

Virgin : ಮತ್ತೆ ವರ್ಜಿನ್​ ಆಗಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಿದ್ಧ ಎಂದು ಬ್ರೆಜಿಲ್​ ಮೂಲದ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಘೋಷಣೆ ಮಾಡಿದ್ದಾರೆ. 23 ವರ್ಷದ ರವೆನಾ ಹ್ಯಾನ್ಲಿ ಎಂಬಾಕೆ ಈ ವಿಚಿತ್ರ ಬಯಕೆಯನ್ನು ವ್ಯಕ್ತಪಡಿಸಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ.

ಶಸ್ತ್ರಚಿಕಿತ್ಸೆಗೆ ಸುಮಾರು 19 ಸಾವಿರ ಡಾಲರ್ (16 ಲಕ್ಷ ರೂಪಾಯಿ) ಖರ್ಚು ಮಾಡಲು ಸಿದ್ಧವಿರುವುದಾಗಿ ರವೆನಾ ಹೇಳಿದ್ದಾಳೆ.

ಅಂದಹಾಗೆ ರವೆನಾ, ಹೈಮೆನೋಪ್ಲ್ಯಾಸ್ಟಿಗೆ ಒಳಗಾಗಲು ಸಿದ್ಧಳಾಗಿದ್ದಾಳೆ. ಹೈಮೆನೋಪ್ಲ್ಯಾಸ್ಟಿ ಅಂದರೆ, ಕನ್ಯಾಪೊರೆಯನ್ನು ಮರು ಜೋಡಿಸುವ ಶಸ್ತ್ರಚಿಕಿತ್ಸೆ. ನನ್ನ ಈ ನಿರ್ಧಾರಕ್ಕೆ ವಿಶೇಷ ಅರ್ಥವಿದೆ. ನನ್ನ ವೈಯಕ್ತಿಕ ಜೀವನ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೊಸ ಆರಂಭಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ರವೆನಾ ಹೇಳಿಕೊಂಡಿದ್ದಾಳೆ.

ನಾನು ಮತ್ತೆ ಕನ್ಯೆಯಾಗಲು ಬಯಸುತ್ತೇನೆ. ಇದು ನನ್ನ ಸ್ವಾಭಿಮಾನಕ್ಕಾಗಿ. ನನಗೆ ನನ್ನ ವೈಯಕ್ತಿಕ ವಿಷಯಗಳು ಬಹಳ ಮುಖ್ಯ. ಈ ಶಸ್ತ್ರಚಿಕಿತ್ಸೆಯು ನನಗೆ ಬಹಳಷ್ಟು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಶಸ್ತ್ರಚಿಕಿತ್ಸೆ ಯಾವಾಗ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಹೊಸ ನಿರ್ಧಾರಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಮುಖ್ಯವಾಗಿ ಇತರರೊಂದಿಗೆ ದೈಹಿಕ ಸಂಪರ್ಕವನ್ನು ತಪ್ಪಿಸಬೇಕಿದೆ ಮತ್ತು ಸೂಕ್ತವಾದ ಬಟ್ಟೆಗಳನ್ನು ಧರಿಸಬೇಕಿದೆ. ಈ ವಿಚಾರದಲ್ಲಿ ತಜ್ಞರ ಸೂಚನೆಗಳನ್ನು ಅನುಸರಿಸುವುದಾಗಿ ರವೆನಾ ತಿಳಿಸಿದ್ದಾರೆ.

ನನ್ನ ಈ ನಿರ್ಧಾರವನ್ನು ಎಲ್ಲರು ಒಪ್ಪಿಕೊಳ್ಳದಿರಬಹುದು. ಕೆಲವರು ನನ್ನ ನಿರ್ಧಾರವನ್ನು ಗೌರವಿಸಿದರೆ, ಇನ್ನು ಕೆಲವರು ಟೀಕಿಸುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವುದಿಲ್ಲ ಎಂದು ರವೆನಾ ಹೇಳಿದ್ದಾರೆ.

ಲಂಡನ್ ಮೂಲದ ಮೆಡಿಜೋನಲ್ ಕ್ಲಿನಿಕ್‌ನ ಸಿಇಒ ಡಾ.ಹಾನಾ ಸಾಲುಸೊಲಿಯಾ ಅವರು, ರವೆನಾ ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಕೆಲ ಅನುಮಾನಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಹೈಮೆನೋಪ್ಲಾಸ್ಟಿ ಒಂದು ಕಾಸ್ಮೆಟಿಕ್ ಸರ್ಜರಿಯಾಗಿದೆ. ಆದರೆ, ಕನ್ಯತ್ವವನ್ನು ಮರಳಿ ಪಡೆಯಲು ಇದು ಸಹಾಯ ಮಾಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ಈ ಶಸ್ತ್ರಚಿಕಿತ್ಸೆಯು ಸೋಂಕು ಮತ್ತು ಸಣ್ಣ ರಕ್ತಸ್ರಾವವನ್ನು ಉಂಟುಮಾಡಬಹುದು. ಪೂರ್ಣ ಫಲಿತಾಂಶದ ಬಗ್ಗೆಯೂ ಅನುಮಾನಗಳಿವೆ. ಎಲ್ಲ ಮಾನದಂಡಗಳಿಗೆ ಅನುಗುಣವಾಗಿ ಹೈಮೆನೋಪ್ಲ್ಯಾಸ್ಟಿ ನಡೆಸಿದರೆ, ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಹನಾ ಮಾಧ್ಯಮಗಳಿಗೆ ತಿಳಿಸಿದರು.

ಅಂದಹಾಗೆ ರವೆನಾ ಹ್ಯಾನ್ಲಿ ಅವರು ಇನ್​ಸ್ಟಾಗ್ರಾಂನಲ್ಲಿ 2,50,000 ಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಆಕೆಯ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net