

ಕಿಂಗ್ಸ್‌ಸ್ಟನ್: ಕರೊನಾ ವೈರಸ್ ಭೀತಿಯಿಂದಾಗಿ ಜಾಗತಿಕ ಕ್ರೀಡಾಲೋಕವೇ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಇದರ ನಡುವೆಯೂ ಕೆಲವೊಂದು ಭಾಗಗಳಲ್ಲಿ ಕ್ರೀಡೆಗಳಿಗೆ ಚಾಲನೆ ನೀಡಲಾಗುತ್ತಿದೆ. ಅದರಲ್ಲೂ ಭಾರತದ ಕ್ರೀಡಾಪಟುಗಳು ಕ್ರೀಡೆಯಿಂದ ದೂರವೇ ಉಳಿದಿದ್ದಾರೆ. ಇದರ ನಡುವೆಯೂ ಜಮೈಕಾದಲ್ಲಿ ನಡೆದ ವೆಲೊಸಿಟಿ ಫೆಸ್ಟ್ ಕೂಟದಲ್ಲಿ ಸ್ಟಾರ್ ಅಥ್ಲೀಟ್ ಸರ್ಬಾನಿ ನಂದಾ ಸ್ಪರ್ಧಿಸಿ ಗಮನಸೆಳೆದಿದ್ದಾರೆ. ಒಲಿಂಪಿಕ್ ಚಾಂಪಿಯನ್‌ಗಳು ಕೂಡ ಕೂಟದಲ್ಲಿ ಸ್ಪರ್ಧಿಸಿ ಗಮನಸೆಳೆದರು.
ಇದನ್ನೂ ಓದಿ: ಶ್ರೀಲಂಕಾ ಕ್ರಿಕೆಟ್ ಆಟಗಾರ್ತಿ ವೀರಕ್ಕೋಡಿ ವಿದಾಯ
ಎಂವಿಪಿ ಟ್ರ್ಯಾಕ್ ಕ್ಲಬ್ ಪ್ರತಿನಿಧಿಸಿದ ಸ್ಪ್ರಿಂಟರ್ ಸರ್ಬಾನಿ ನಂದಾ, ಆರಂಭಿಕ ಎರಡೂ ಹೀಟ್‌ಗಳಲ್ಲಿ 11.78 ಸೆಕೆಂಡ್‌ಗಳಲ್ಲಿ ಈ ದೂರ ಕ್ರಮಿಸಿದರು. ಒಟ್ಟಾರೆ ಮೂರನೇ ಸ್ಥಾನ ದಕ್ಕಿಸಿಕೊಂಡರು. ಸರ್ಬಾನಿ ನಂದಾ ಅಲ್ಲದೆ, ಡಬಲ್ ಒಲಿಂಪಿಕ್ ಸ್ಪ್ರಿಂಟ್ ಚಾಂಪಿಯನ್ ಎಲೈನೆ ಥಾಂಪ್ಸನ್ ಹಾಗೂ ಶೆಲ್ಲಿ ಅನ್ ಫ್ರೇಸರ್ ಕೂಟದಲ್ಲಿ ಸ್ಪರ್ಧಿಸಿದ್ದರು. ಎಂಪಿಪಿ ಟ್ರ್ಯಾಕ್ ಕ್ಲಬ್ ಒಲಿಂಪಿಕ್ ಚಾಂಪಿಯನ್ ಎಲೈನೆ ಥಾಂಪ್ಸನ್, 11.78 ಸೆಕೆಂಡ್‌ಗಳಲ್ಲಿ ಈ ದೂರ ಕ್ರಮಿಸಿ ಪ್ರಶಸ್ತಿ ಗೆದ್ದುಕೊಂಡರು. ಕಳೆದ ಮಾರ್ಚ್ ತಿಂಗಳಿಂದ ಈಚೆಗೆ ವೆಲೊಸಿಟಿ ಫೆಸ್ಟ್ ಮೊದಲ ಅಥ್ಲೀಟ್ ಕೂಟ ಇದಾಗಿದೆ.
29 ವರ್ಷದ ಒಡಿಶಾದ ಸರ್ಬಾನಿ ನಂದಾ, 100 ಮೀಟರ್ ಓಟವನ್ನು 11.45 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, 200 ಮೀಟರ್ ಓಟವನ್ನು 23.07 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರನಿಧಿಸಿದ್ದ ಸರ್ಬಾನಿ ನಂದಾ, 100 ಮೀಟರ್ ಓಟದ ಹೀಟ್ಸ್‌ನಲ್ಲಿ 6ನೇ ಸ್ಥಾನ ಪಡೆದಿದ್ದರು. 2017ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 4/100 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯೆಯಾಗಿದ್ದರು. 2016ರ ಸ್ಯಾಫ್ ಕೂಟದಲ್ಲಿ 200ಮೀಟರ್ ಓಟದಲ್ಲಿ ಸ್ವರ್ಣ ಹಾಗೂ 100 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದಿದ್ದರು.