More

    ಎಂಎಸ್​ಡಿ ಎಂದರೆ ಧೋನಿ ಅಲ್ಲ, ಹೊಸ ಅರ್ಥ ನೀಡಿದ್ದಾರೆ ಪೊಲೀಸರು!

    ಬೆಂಗಳೂರು: ಎಂಎಸ್​ಡಿ ಎಂದರೆ ಕ್ರಿಕೆಟ್​ ಪ್ರೇಮಿಗಳಿಗೆ ನೆನಪಾಗುವುದು ಮಹೇಂದ್ರ ಸಿಂಗ್​ ಧೋನಿ ಅಥವಾ ಎಂಎಸ್​ ಧೋನಿ ಎಂದು. ಆದರೆ ತಮಿಳುನಾಡು ಪೊಲೀಸರು ಈಗ ಧೋನಿ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಇದಕ್ಕೀಗ ಹೊಸ ಅರ್ಥ ಕಲ್ಪಿಸಿದ್ದಾರೆ. ಅದುವೇ ‘ಮೆಂಟೇನ್​ ಸೋಷಿಯಲ್​ ಡಿಸ್​ಟೆನ್ಸ್​’ ಎಂದು. ಕರೊನಾ ಹಾವಳಿಯ ಸಮಯದಲ್ಲಿ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಧೋನಿ ಹೆಸರಿನಲ್ಲಿ ಹೊಸ ರೀತಿಯ ಜಾಗೃತಿ ಮೂಡಿಸುತ್ತಿದ್ದಾರೆ.

    ತಮಿಳುನಾಡಿನ ತಿರುಪ್ಪುರ ನಗರ ಪೊಲೀಸ್​ ಇಲಾಖೆಯ ಟ್ವಿಟರ್​ ಖಾತೆಯಿಂದ ಎಂಎಸ್​ಡಿಗೆ ಈ ಹೊಸ ವ್ಯಾಖ್ಯಾನವನ್ನು ನೀಡುವ ಮೂಲಕ ಸಾಮಾಜಿಕ ಅಂತರದ ಜಾಗೃತಿ ಸಂದೇಶ ನೀಡಲಾಗಿದೆ. ಇದರೊಂದಿಗೆ ಎಂಎಸ್​ ಧೋನಿ ಅವರ ಮಾಸ್ಕ್​ ಧರಿಸಿರುವ ಮತ್ತು ಮಾಸ್ಕ್ ಧರಿಸಿದ ಸಹ-ಆಟಗಾರ ಜಸ್​ಪ್ರೀತ್​ ಬುಮ್ರಾ ಅವರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಎಡಿಟೆಡ್​ ಚಿತ್ರವನ್ನೂ ಪ್ರಕಟಿಸಲಾಗಿದೆ.
    ಧೋನಿ ಅವರ ಇನಿಶಿಯಲ್ಸ್​ ಅನ್ನೇ ಉಪಯೋಗಿಸಿ ಜನರಲ್ಲಿ ಸಾಮಾಜಿಕ ಅಂತರದ ಜಾಗೃತಿ ಮೂಡಿಸುತ್ತಿರುವ ಪೊಲೀಸರ ಈ ಹೊಸ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

    ಇದನ್ನೂ ಓದಿ: ಬೆನ್ ಸ್ಟೋಕ್ಸ್ ಈಗ ವಿಶ್ವ ನಂ. 1 ಆಲ್ರೌಂಡರ್

    ಈ ಮುನ್ನ ಮುಂಬೈ ಪೊಲೀಸರು ಕೂಡ ಜುಲೈ 7ರಂದು ಧೋನಿ ಜನ್ಮದಿನದ ಹಿನ್ನೆಲೆಯಲ್ಲಿ ಕರೊನಾ ಹಾವಳಿ ಮತ್ತು ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ಎಂಎಸ್​ಡಿ ಮಂತ್ರವನ್ನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅವರು ಕೂಡ ಎಂಎಸ್​ಡಿ ಎಂದರೆ ಮೆಂಟೇನ್​ ಸೋಷಿಯಲ್​ ಡಿಸ್​ಟೆನ್ಸ್​ ಎಂದು ಹೇಳಿದ್ದರು. ಜತೆಗೆ ಕೂಲ್​ ಕ್ಯಾಪ್ಟನ್​ಗೆ ಭಿನ್ನ ರೀತಿಯಲ್ಲಿ ಜನ್ಮದಿನದ ಶುಭಾಶಯ ತಿಳಿಸಿದ್ದರು. ಧೋನಿ ರೀತಿಯಲ್ಲೇ ನಾಟೌಟ್​ ಆಗಿರಿ ಮತ್ತು ಕೂಲ್​ ಆಗಿರಿ ಎಂದು ಸಂದೇಶ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts