ಸತತವಾಗಿ ಏಳು ಸಿಕ್ಸರ್​ ಬಾರಿಸುವ ತಾಕತ್​ ಆತನಿಗಿತ್ತು; ಯುವರಾಜ್​ ಕುರಿತು ಮಾಜಿ ವೇಗಿಯ ಹೇಳಿಕೆ ವೈರಲ್​

Stuart Singh
Published on

ನವದೆಹಲಿ: ಯುವರಾಜ್​ ಸಿಂಗ್​ ಟೀಮ್​ ಇಂಡಿಯಾ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದು, ಭಾರತ ಕ್ರಿಕೆಟ್​ ತಂಡಕ್ಕೆ ಅವರ ಸೇವೆ ಅನನ್ಯ ಎಂದು ಹೇಳಿದರೆ ತಪ್ಪಾಗಲಾರದು. ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ ಸಿಡಿಸುವ ಮೂಲಕ ಕ್ರಿಕೆಟ್​ ಲೋಕದಲ್ಲಿ ಹೊಸ ದಾಖಲೆ ಬರೆದಿದ್ದ ಯುವರಾಜ್​ ಈಗಲೂ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಆ ಕ್ಷಣ ಹಾಗೆಯೇ ಉಳಿದಿದೆ.

ವೇಗಿ ಆ್ಯಂಡ್ರಯೂ ಫ್ಲಿಂಟಾಪ್​ ಜೊತೆ ಕಿರಿಕ್​ ನಂತರ 19ನೇ ಓವರ್​ನಲ್ಲಿ ಸ್ಟುವರ್ಟ್​ ಬ್ರಾಡ್​ ಎಸೆದ ಅಷ್ಟು ಎಸೆತಗಳನ್ನು ಸಿಕ್ಸರ್​ಗಟ್ಟಿದ ಯುವರಾಜ್​ ಈಗಲೂ ಕ್ರೀಡಾಭಿಮಾನಿಗಳಿಗೆ ಹಾಟ್​ ಫೇವರಿಟ್​ ಎನ್ನಿಸಿದ್ದಾರೆ. ಈಗಲೂ ಅನೇಕ ಜನ ಮಾಜಿ ಕ್ರಿಕೆಟಿಗರು ಈ ಕ್ಷಣವನ್ನು ಸ್ಮರಿಸುತ್ತಿದ್ದು, ಈ ಬಗ್ಗೆ ಇಂಗ್ಲೆಂಡ್​ ತಂಡದ ಮಾಜಿ ವೇಗಿ ಸ್ಟುವರ್ಟ್​​ ಬ್ರಾಡ್​ ಮಾತನಾಡಿದ್ದಾರೆ.

ಆ ಕ್ಷಣವನ್ನು ನಾನು ಒಪ್ಪಿಕೊಳ್ಳಬೇಕಿದೆ. ಆ ಓಬವರ್​ ಎಸೆದ ಬಳಿಕ ನಾನು ಹಿಂದೆ ತಿರುಗಿ ನೋಡಲು ಹೋಗಿಲ್ಲ. ಆ ದಿನ ನಾನು ನೋ ಬಾಲ್​ನಿಂದ ತಪ್ಪಿಸಿಕೊಂಡೆ. ಇಲ್ಲಾಂದ್ರ ಯುವರಾಜ್​ಗೆ ಒಂದೇ ಓವರ್​ನಲ್ಲಿ ಏಳು ಸಿಕ್ಸರ್​ ಹೊಡೆಯುವ ತಾಕತ್​ ಇತ್ತು ಎಂಬುದು ಸ್ಪಷ್ಟವಾಗಿ ಸಾಬೀತಾಯಿತು. ನಾನು ಆ ಪಂದ್ಯದ ಹೈಲೈಟ್ಸ್​ ಸಹ ಇಂದಿಗೂ ವೀಕ್ಷಿಸಿಲ್ಲ. ಆದ್ದರಿಂದ 17 ವರ್ಷಗಳ ನಂತರ ಅವಕಾಶಕ್ಕಾಗಿ ಧನ್ಯವಾದಗಳು ಎಂದು ವೇಗಿ ಸ್ಟುವರ್ಟ್​ ಬ್ರಾಡ್​ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಯುವರಾಜ್​ ಸಿಂಗ್​ ಆರು ಸಿಕ್ಸರ್​ ಸಿಡಿಸಿದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದರು. ಇದನ್ನು ಕಂಡು ಥ್ರಿಲ್​ ಆಗಿದ್ದ ಕ್ರೀಡಾಭಿಮಾನಿಗಳು ಈಗಲೂ ಆ ಕ್ಷಣವನ್ನು ನೆನೆಪಿಟ್ಟುಕೊಂಡಿರುವುದಾಗಿ ಕಮೆಂಟ್​ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net