

ಬೆಂಗಳೂರು: ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ನ ಫೈನಲ್ ಪಂದ್ಯಾವಳಿ ದೇಶವನ್ನೇ ಕುತೂಹಲದಲ್ಲಿ ಇರಿಸಿದ್ದು, ಕ್ಷಣಕ್ಷಣಕ್ಕೂ ರೋಚಕ ಎನಿಸುತ್ತ ಹೋಗುತ್ತಿದೆ.
ಈಗಾಗಲೇ ಭಾರತ 5 ವಿಕೆಟ್ಗಳನ್ನು ಕಳೆದುಕೊಂಡಿರುವುದರಿಂದ ಒಂದಷ್ಟು ಆತಂಕ ಉಂಟಾಗಿದ್ದರೂ, ವಿಶ್ವ ಪುರುಷರ ದಿನದಂದೇ ನಡೆಯುತ್ತಿರುವ ಈ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಆಟಗಾರರು ಪೌರುಷ ಮೆರೆಯಲಿದ್ದಾರೆ, ಮೋದಿ ಮೈದಾನದಲ್ಲಿ ಕ್ರಿಕೆಟ್ ಮೋಡಿ ನಡೆಯಲಿದೆ ಎಂಬ ನಿರೀಕ್ಷೆಯೊಂದಿಗೇ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.
ಮತ್ತೊಂದೆಡೆ ಭಾರತವೇ ಗೆಲ್ಲಲಿದೆ ಎಂಬ ವಿಶ್ವಾಸ ತೋರುತ್ತಿರುವ ಕ್ರೀಡಾಭಿಮಾನಿಗಳು ಅದಕ್ಕೆ ಪೂರಕ ಎಂಬಂತೆ ಲೆಕ್ಕಾಚಾರವನ್ನೂ ಹಾಕುತ್ತಿದ್ದಾರೆ. ಕಳೆದ 12 ವಿಶ್ವಕಪ್ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡ 4 ಸಲ ಗೆದ್ದಿತ್ತು, ಅರ್ಥಾತ್ ಟಾಸ್ ಸೋತ ತಂಡ 8 ಸಲ ಗೆದ್ದಿತ್ತು. ಅದರಲ್ಲೂ ಭಾರತ ವಿಶ್ವಕಪ್ ಗೆದ್ದಿದ್ದ ಎರಡೂ ಪಂದ್ಯಗಳಲ್ಲಿ ಅದು ಟಾಸ್ ಸೋತಿತ್ತು. ಹೀಗಾಗಿ ಈ ಸಲ ಟಾಸ್ ಗೆದ್ದ ಭಾರತವೇ ಕಪ್ ಗೆಲ್ಲಲಿದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ.