More

    ವಿಶ್ವಕಪ್ ಗೆಲ್ಲುವುದು ಹೇಗೆ?: ಭಾರತದ ಕ್ರಿಕೆಟ್ ತಂಡಕ್ಕೆ ಸದ್ಗುರು ನೀಡಿದ ಸಲಹೆ ಏನು?

    ಬೆಂಗಳೂರು: ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ನಡೆಯಲಿರುವ ಹಣಾಹಣಿ ಕುರಿತು ಈಗಾಗಲೇ ಕುತೂಹಲ ಕೆರಳಿದ್ದು, ಯಾರು ವಿಶ್ವಕಪ್ ಗೆಲ್ಲಲಿದ್ದಾರೆ ಎಂಬ ಕುರಿತು ಬಾರಿ ಲೆಕ್ಕಾಚಾರಗಳು ನಡೆಯಲಾರಂಭಿಸಿವೆ. ಈ ನಡುವೆ ವಿಶ್ವಕಪ್ ಗೆಲ್ಲುವುದು ಹೇಗೆ? ಎನ್ನುವ ಕುರಿತು ಸದ್ಗುರು ಸಲಹೆಯೊಂದನ್ನು ನೀಡಿದ್ದು, ಅದು ವೈರಲ್ ಆಗಲಾರಂಭಿಸಿದೆ.

    ವಿಶ್ವಕಪ್ ಗೆಲ್ಲುವ ನಿಟ್ಟಿನಲ್ಲಿ ಭಾರತ ತಂಡಕ್ಕೆ ಏನು ಸಲಹೆ ನೀಡುತ್ತೀರಿ? ಎಂದು ಸಂವಾದವೊಂದರಲ್ಲಿ ವ್ಯಕ್ತಿಯೊಬ್ಬರು ಕೇಳಿದ್ದಕ್ಕೆ ಪ್ರತಿಕ್ರಿಯಿಸುತ್ತ ಸದ್ಗುರು ಈ ಸಲಹೆ ನೀಡಿದರು. ಕೋಟ್ಯಂತರ ಜನರು ಕಪ್​ಗಾಗಿ ಕೂಗುತ್ತಿರುವುದನ್ನು ನೀವು ಕೇಳಿಸಿಕೊಂಡರೆ ಚೆಂಡನ್ನು ಕಳೆದುಕೊಳ್ಳುತೀರಿ ಅಥವಾ ಕಪ್ ಗೆದ್ದರೆ ಏನೇನಾಗುತ್ತದೆ ಎಂಬ ಕಲ್ಪನೆಯಲ್ಲಿ ತೊಡಗಿದರೆ ಚೆಂಡು ವಿಕೆಟನ್ನು ಉದುರಿಸುತ್ತದೆ. ಹೀಗಾಗಿ ಕಪ್ ಗೆಲ್ಲಲು ಪ್ರಯತ್ನಿಸಬೇಡಿ, ಜಸ್ಟ್ ಚೆಂಡನ್ನು ಎದುರಿಸಿ ಎಂದು ಸದ್ಗುರು ಸಲಹೆ ನೀಡಿದ್ದಾರೆ.

    ಈ ವಿಶ್ವಕಪ್ ಗೆಲ್ಲುವುದು ಹೇಗೆ? ಎಂಬುದರ ಬಗ್ಗೆ ಯೋಚಿಸಬೇಡಿ, ಚೆಂಡನ್ನು ಎದುರಿಸುವುದು ಹೇಗೆ? ಎದುರಾಳಿಗಳ ವಿಕೆಟ್ ಉದುರಿಸುವುದು ಹೇಗೆ? ಎಂಬುದರ ಬಗ್ಗೆಯಷ್ಟೇ ಯೋಚಿಸಿ. ನೀವು ಯೋಚನೆ ಮಾಡಬೇಕಾದ್ದು ಅಷ್ಟು ಮಾತ್ರ. ವಿಶ್ವಕಪ್ ಬಗ್ಗೆ ಯೋಚಿಸಬೇಡಿ, ಅದರ ಬಗ್ಗೆ ಯೋಚಿಸಿದರೆ ವಿಶ್ವಕಪ್​ನಿಂದ ಹೊರಬೀಳುತ್ತೀರಿ ಎಂದು ಸದ್ಗುರು ಕಿವಿಮಾತು ಹೇಳಿದ್ದಾರೆ.

    ಇದೇ ವಿಶ್ವಕಪ್ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ಟೀಮ್​ ಎದುರು ಆಡುವ ಮುನ್ನ ಭಾರತ ತಂಡಕ್ಕೆ ಸದ್ಗುರು ನೀಡಿದ್ದ ಸಲಹೆಯಲ್ಲಿ ಅವರು ಪ್ರಕ್ರಿಯೆ ಬಗ್ಗೆ ಮಾತನಾಡಿದ್ದರು. ಯಾರೂ ಪರಿಣಾಮದ ಬಗ್ಗೆ ಕೆಲಸ ಮಾಡಲು ಸಾಧ್ಯವಿಲ್ಲ, ನೀವು ಪ್ರಕ್ರಿಯೆಯಲ್ಲಷ್ಟೇ ತೊಡಗಿಸಿಕೊಳ್ಳಬಹುದು. ಪ್ರಕ್ರಿಯೆ ಎಂದರೆ ದೈನಂದಿನ ಚಟುವಟಿಕೆ, ಯಶಸ್ಸು ಎನ್ನುವುದು ಇನ್ನೊಬ್ಬರ ದೃಷ್ಟಿಯಲ್ಲಷ್ಟೇ ಇರುವಂಥದ್ದು. ಅವರು ನಿಮ್ಮದು ಯಶಸ್ಸೆಂದೂ ನೋಡಬಹುದು ಇಲ್ಲವೇ ವೈಫಲ್ಯವೆಂದೂ ನೋಡಬಹುದು. ಆದರೆ ನೀವು ಮಾಡುತ್ತಿರುವುದು ನಿಮ್ಮ ಕೆಲಸ ಮಾತ್ರ, ಅಲ್ವಾ? ಎಂದು ಸದ್ಗುರು ಹೇಳಿದ್ದರು.

    ಕುತೂಹಲ ಕೆರಳಿಸಿದೆ ಯತ್ನಾಳ್ ಅವರ ಆ ಒಂದು ಸಾಲು; ಏನದು? ಭುಗಿಲೇಳುತ್ತಾ ಭಿನ್ನಮತ?

    ಬಿಗಿಯಾಗುತ್ತಾ ರಾಜಾಹುಲಿ ಹಿಡಿತ?; ಬಿಎಸ್​ವೈಗೆ ಬಂತು ಬಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts