2ನೇ ಟಿ20 ಪಂದ್ಯ ಜಯಿಸಿದ ಭಾರತ ಮಹಿಳಾ ತಂಡ, ಸರಣಿ ಜೀವಂತ

womens web
Published on

ಹೋವ್: ಯುವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮ (48 ರನ್, 38 ಎಸೆತ, 8 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮತ್ತು ಬೌಲಿಂಗ್-ಫೀಲ್ಡಿಂಗ್ ವಿಭಾಗದ ಸಂಘಟಿತ ಹೋರಾಟದಿಂದ ಭಾರತ ಮಹಿಳಾ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 8 ರನ್‌ಗಳಿಂದ ಜಯಿಸಿದೆ. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ನಿರ್ಣಾಯಕ ಪಂದ್ಯ ಬುಧವಾರ ನಡೆಯಲಿದೆ.

ಟಾಸ್ ಸೋತು ಮೊದಲ ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಸ್ಮತಿ ಮಂದನಾ (20) ಮತ್ತು ಶೆಫಾಲಿ ವರ್ಮ ಜೋಡಿ ಹಾಕಿಕೊಟ್ಟ ಬಿರುಸಿನ 70 ರನ್‌ಗಳ ಬಲದಿಂದ 4 ವಿಕೆಟ್‌ಗೆ 148 ರನ್‌ಗಳ ಗೌರವಯುತ ಮೊತ್ತ ಪೇರಿಸಿತು. 10ನೇ ಓವರ್‌ನಲ್ಲಿ ಶೆಾಲಿ ಔಟಾದ ಬಳಿಕ ನಾಯಕಿ ಹರ್ಮಾನ್‌ಪ್ರೀತ್ ಕೌರ್ (31) ಮತ್ತು ದೀಪ್ತಿ ಶರ್ಮ (24*) ತಂಡದ ಮೊತ್ತ ಏರಿಸಲು ಶ್ರಮಿಸಿದರು.

ಪ್ರತಿಯಾಗಿ ಇಂಗ್ಲೆಂಡ್ ತಂಡ ಟಾಮಿ ಬೆಯುಮೌಂಟ್ (59 ರನ್, 50 ಎಸೆತ, 7 ಬೌಂಡರಿ) ಅರ್ಧಶತಕದ ನಡುವೆಯೂ 4 ಆಟಗಾರ್ತಿಯರನ್ನು ರನೌಟ್ ಮೂಲಕ ಕಳೆದುಕೊಂಡು ಕುಸಿಯಿತು. ಕೊನೆಗೆ ಇಂಗ್ಲೆಂಡ್ 8 ವಿಕೆಟ್‌ಗೆ 140 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ: 4 ವಿಕೆಟ್‌ಗೆ 148 (ಸ್ಮತಿ 20, ಶೆಫಾಲಿ 48, ಹರ್ಮಾನ್‌ಪ್ರೀತ್ 31, ದೀಪ್ತಿ ಶರ್ಮ 24*, ಸ್ಕೀವರ್ 20ಕ್ಕೆ 1). ಇಂಗ್ಲೆಂಡ್: 8 ವಿಕೆಟ್‌ಗೆ 140 (ಬೆಯುಮೌಂಟ್ 59, ಹೀದರ್ ನೈಟ್ 30, ಪೂನಂ 17ಕ್ಕೆ 2, ದೀಪ್ತಿ 18ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net