More

    ಶ್ರೀಲಂಕಾಕ್ಕೆ ಡೆಲ್ಟಾ ಪೆಟ್ಟು; ಕೊನೇಕ್ಷಣದಲ್ಲಿ ಭಾರತ ತಂಡದ ಸರಣಿ ವೇಳಾಪಟ್ಟಿ ಬದಲು

    ಕೊಲಂಬೊ: ಇಂಗ್ಲೆಂಡ್ ಪ್ರವಾಸದಿಂದ ಮರಳಿದ ಶ್ರೀಲಂಕಾ ತಂಡದ ಇಬ್ಬರು ಸದಸ್ಯರು ಕರೊನಾ ಸೋಂಕಿತರಾಗಿರುವ ಹಿನ್ನೆಲೆಯಲ್ಲಿ ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯ ವೇಳಾಪಟ್ಟಿ ಕೊನೇಕ್ಷಣದಲ್ಲಿ ಬದಲಾವಣೆ ಕಂಡಿದೆ. ಜುಲೈ 13ರಂದು ಆರಂಭವಾಗಬೇಕಾಗಿದ್ದ ಸರಣಿ ಇದೀಗ ಜುಲೈ 17ಕ್ಕೆ ಮುಂದೂಡಿಕೆಯಾಗಿದೆ. ಈ ಬೆಳವಣಿಗೆಯನ್ನು ಬಿಸಿಸಿಐ ಖಚಿತಪಡಿಸಿದೆ.

    ಮೂರು ಏಕದಿನ ಪಂದ್ಯಗಳು ಜುಲೈ 13, 16, 18ರ ಬದಲಾಗಿ ಜುಲೈ 17, 19 ಮತ್ತು 21ರಂದು ನಡೆದರೆ, ಟಿ20 ಪಂದ್ಯಗಳು ಜುಲೈ 21, 23, 25ರ ಬದಲಾಗಿ ಜುಲೈ 24, 25, 27ರಂದು ನಡೆಯಲಿವೆ. ಇದರಿಂದಾಗಿ ಶಿಖರ್ ಧವನ್ ಬಳಗ ಶ್ರೀಲಂಕಾದಲ್ಲಿ ಜುಲೈ 25ರ ಬದಲಾಗಿ 27ರವರೆಗೆ ಆಡಬೇಕಾಗುತ್ತದೆ.

    ಇದನ್ನೂ ಓದಿ: 40ನೇ ಜನ್ಮದಿನದಂದು ಎಂಎಸ್ ಧೋನಿ ಹೊಸ ಲುಕ್ ವೈರಲ್!

    ತಂಡದ ಇಬ್ಬರು ಸದಸ್ಯರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿರುವುದರಿಂದ ಆಟಗಾರರು ಹೆಚ್ಚುವರಿ ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಾಗಿದೆ. ಇದರಿಂದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೊದಲ ಪಂದ್ಯದಲ್ಲಿ ಪ್ರಮುಖ ತಂಡವನ್ನು ಕಣಕ್ಕಿಳಿಸುವುದು ಕಷ್ಟವಾಗಿತ್ತು. ಹೀಗಾಗಿ ಸರಣಿ ವೇಳಾಪಟ್ಟಿ ಬದಲಾವಣೆಗಾಗಿ ಲಂಕಾ ಮಂಡಳಿ, ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಆದರೆ ಕರೊನಾ ಆತಂಕದ ನಡುವೆಯೂ ಭಾರತ ತಂಡವನ್ನು ಪ್ರವಾಸದಿಂದ ವಾಪಸ್ ಕರೆಸಿಕೊಳ್ಳುವ ಯೋಚನೆಯನ್ನು ಬಿಸಿಸಿಐ ಮಾಡಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.

    ಶ್ರೀಲಂಕಾ ತಂಡಕ್ಕೆ ಡೆಲ್ಟಾ ವೈರಸ್ ಆಘಾತ
    ಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ್ಲವರ್ ಹಾಗೂ ಡೇಟಾ ವಿಶ್ಲೇಷಕ ಜಿ.ಟಿ.ನಿರೊಶಾನ್‌ಗೆ ರೂಪಾಂತರಿ ಡೆಲ್ಟಾ ವೈರಸ್ ಕಾಣಿಸಿಕೊಂಡಿದೆ. ಇದರಿಂದಾಗಿ ತಂಡದ ಎಲ್ಲ ಸದಸ್ಯರು 2 ದಿನ ಹೆಚ್ಚುವರಿಯಾಗಿ ಕ್ವಾರಂಟೈನ್‌ನಲ್ಲಿ ಕಳೆದುಕೊಳ್ಳಬೇಕಾಗಿದೆ. ಇಂಗ್ಲೆಂಡ್ ಪ್ರವಾಸದಿಂದ ಸ್ವದೇಶಕ್ಕೆ ಆಗಮಿಸಿದ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಕೋಚ್‌ಗಳಿಗೆ ಗುರುವಾರ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಗ್ರಾಂಟ್ ್ಲವರ್ ಹಾಗೂ ಜಿಟಿ ನಿರೊಶಾನ್ ಪಾಸಿಟಿವ್ ಆಗಿದ್ದಾರೆ. ಗುರುವಾರ ಗ್ರಾಂಡ್ ್ಲವರ್‌ಗೆ ವೈರಸ್ ಇರುವುದು ಪತ್ತೆಯಾದರೆ, ಶುಕ್ರವಾರ ನಿರೊಶಾನ್‌ಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಇದು ಡೆಲ್ಟಾ ವೈರಸ್ ಆಗಿರುವುದು ಆತಂಕವನ್ನು ಹೆಚ್ಚಿಸಿದೆ. ಇಂಗ್ಲೆಂಡ್‌ನಿಂದ ತವರಿಗೆ ಆಗಮಿಸಿದ ಎಲ್ಲ ಆಟಗಾರರನ್ನು 2 ಗುಂಪುಗಳಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ತಿಳಿಸಿದೆ. ಕಳೆದ ಭಾನುವಾರ ಬ್ರಿಸ್ಟಲ್‌ನಲ್ಲಿ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯ ನಡೆದಿತ್ತು. ಈ ಬಳಿಕ ಇಂಗ್ಲೆಂಡ್‌ನ ಮೂವರು ಆಟಗಾರರು ಪಾಸಿಟಿವ್ ಆಗಿದ್ದರು. ಇಂಗ್ಲೆಂಡ್‌ನಲ್ಲಿ ಬಯೋಬಬಲ್ ನಿಯಮ ಉಲ್ಲಂಸಿದ ಹಿನ್ನೆಲೆಯಲ್ಲಿ ಶ್ರೀಲಂಕಾದ ಮೂವರು ಆಟಗಾರರು ವಿಚಾರಣೆ ಎದುರಿಸುತ್ತಿದ್ದಾರೆ.

    ಆಸ್ಟ್ರೇಲಿಯಾದ ಮಹಿಳಾ ಬಿಗ್‌ಬ್ಯಾಶ್ ನಲ್ಲಿ ಭಾರತದ ಆಟಗಾರ್ತಿಯರಿಗೆ ಹೆಚ್ಚಿದ ಡಿಮ್ಯಾಂಡ್..!

    ಮಾಜಿ ಕ್ರಿಕೆಟಿಗ, ಬಿಸಿಸಿಐ ಮಾಜಿ ಮುಖ್ಯಸ್ಥ ಈಗ ಮೋದಿ ಸಂಪುಟದಲ್ಲಿ ಕ್ರೀಡಾ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts